Advertisement

ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ

03:30 AM Jul 13, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯ ವಾಗಿ ಬಂಟ್ವಾಳ ತಾಲೂಕಿನಲ್ಲಿ  ಇತ್ತೀಚಿನ ದಿನಗಳಲ್ಲಿ ನಡೆದ ವಿವಿಧ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಎಡಿಜಿಪಿ ಆಲೋಕ್‌ ಮೋಹನ್‌ ಅಧ್ಯಕ್ಷತೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ ಬುಧವಾರ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಮತ್ತು ಐಜಿಪಿ ಕಚೇರಿಯಲ್ಲಿ ನಡೆಯಿತು. 

Advertisement

ಜಿಲ್ಲೆಯ ಮಾಜಿ ಪೊಲೀಸ್‌ ಅಧಿಕಾರಿಗಳೂ ಭಾಗವಹಿಸಿರುವುದು ಸಭೆಯ ವೈಶಿಷ್ಟ é.ನಿಕಟಪೂರ್ವ ಪೊಲೀಸ್‌ ಆಯುಕ್ತ ಹಾಗೂ ಪ್ರಸ್ತುತ ಸಿಐಡಿ ವಿಭಾಗದ ಐಜಿ ಆಗಿರುವ ಎಂ. ಚಂದ್ರಶೇಖರ್‌, ಮಾಜಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಶರಣಪ್ಪ, ಗುಪ್ತಚರ ವಿಭಾಗದ ಐಜಿ ಹಾಗೂ ಪಶ್ಚಿಮ ವಲಯದ ಮಾಜಿ ಐಜಿಪಿ ಅಮೃತ್‌ ಪೌಲ್‌, ಹಾಸನ ಎಸ್‌ಪಿ ರಾಹುಲ್‌, ಬೆಳಗಾವಿ ಗ್ರಾಮಾಂತರ ಎಸ್‌ಪಿ ರವೀಂದ್ರ ಗಡಾದಿ, ಪಶ್ಚಿಮ ವಲಯದ ಹಾಲಿ ಐಜಿಪಿ ಹರಿಶೇಖರನ್‌, ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಸಭೆಯಲ್ಲಿದ್ದರು.

ಸಭೆ ಮೇಲೆ ಸಭೆ: ಮುಖ್ಯಮಂತ್ರಿ ಸೂಚನೆ ಮೇರೆಗೆ ಮಂಗಳವಾರ ಆಗಮಿಸಿದ ಅವರು ಪೊಲೀಸ್‌ ಅ ಧಿಕಾರಿಗಳೊಂದಿಗೆ ರಾತ್ರಿಯೇ ಆಂತರಿಕ ಸಭೆ ನಡೆ ಸಿ ದ್ದರು. ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ ವರೆಗೆ  ಕಮಿಷನರ್‌ ಕಚೇರಿ ಯಲ್ಲಿ ಸುದೀರ್ಘ‌ ಸಭೆ ನಡೆ ಸಿ ದರು. ಬಳಿಕ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ 1 ತಾಸು ಸಭೆ ನಡೆಸಿ ಪ್ರಕರಣಗಳ ಪರಾಮರ್ಶೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next