ಪುಣೆ: ಪುಣೆ ಬಂಟರ ಸಂಘದ ಇತಿಹಾಸದಲ್ಲಿ ಭವನ ನಿರ್ಮಾಣಗೊಂಡು ಎಪ್ರಿಲ್ 7 ಹಾಗೂ 8 ರಂದು ಲೋಕಾರ್ಪಣೆಯಾಗುವ ದಿನ ಸನ್ನಿಹಿತವಾಗುತ್ತಿದ್ದಂತೆಯೇ ಪುಣೆ ಬಂಟರೆಲ್ಲರ ಕುತೂಹಲವು ಇಮ್ಮಡಿಗೊಳ್ಳುತ್ತಿರುವುದನ್ನು ನಾವೆಲ್ಲ ಕಾಣಬಹುದಾಗಿದೆ. ಸಮಾರಂಭದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಪುಣೆಯಾದ್ಯಂತ ಇರುವ ಬಂಟ ಬಾಂಧವರು ಸಹಕಾರ ನೀಡುತ್ತಿ¨ªಾರೆ. ಸಮಾರಂಭದ ಕಾರ್ಯನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ ಈಗಾಗಲೇ ಜವಾಬ್ದಾರಿಯನ್ನು ಹಂಚಲಾಗಿದ್ದು, ಎರಡು ದಿನಗಳ ಕಾಲ ನಡೆಯುವ ಸಮಾರಂಭವನ್ನು ಪ್ರತಿಯೊಂದು ವಿಭಾಗದಲ್ಲಿಯೂ ಅಚ್ಚುಕಟ್ಟುತನದಿಂದ ನಿರ್ವಹಿಸಿ ನೀಡಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡುವ ಬಗ್ಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಪುಣೆ ಬಂಟರ ಸಂಘದ ಭವನದ ಉದ್ಘಾಟನಾ ಸಮಾರಂಭದ ಸಮಿತಿ ರಚನಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಅವರು ನುಡಿದರು.
ಮಾ. 20ರಂದು ಕೊರೊನೇಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪುಣೆ ಬಂಟರ ಭವನದ ಉದ್ಘಾಟನಾ ಸಮಾರಂಭದ ಸ್ವಾಗತ ಸಮಿತಿಗಾಗಿ ಹಮ್ಮಿಕೊಂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾರಂಭದ ಪ್ರಯುಕ್ತ ರಚಿಸಲಾದ ಪ್ರತಿಯೊಂದು ಸಮಿತಿಗಳ ಬಗ್ಗೆಯೂ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮಿತಿಯ ಬೆಳವಣಿಗೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗುವುದು. ಅದರಂತೆಯೇ ಸಮಾರಂಭದ ಸ್ವಾಗತ ಸಮಿತಿಯ ಜವಾಬ್ದಾರಿ ಎಲ್ಲಕ್ಕಿಂತಲೂ ಮುಖ್ಯ ಅಂಗವಾಗಿದ್ದು ಇದರಲ್ಲಿ ಅತಿಥಿಗಳ ಸ್ವಾಗತದಿಂದ ಹಿಡಿದು ಪ್ರತಿಯೊಬ್ಬರನ್ನೂ ಸ್ವಾಗತಿಸಿ ಬೇಕುಬೇಕಾದ ವ್ಯವಸ್ಥೆಗಳನ್ನು ಸಂದರ್ಭಕ್ಕೆ ಅನುಸಾರವಾಗಿ ವ್ಯವಸ್ಥಿತವಾಗಿ ಮಾಡುವಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಎರಡು ದಿನಗಳ ಕಾಲದ ಸಂಭ್ರಮವು ನಮ್ಮ ಮನೆಯ ಸಂಭ್ರಮವಾಗಿದೆ ಎಂದು ಪರಿಗಣಿಸಿ ಎಲ್ಲರೂ ಒಗ್ಗಟ್ಟು ಮತ್ತು ಒಮ್ಮತದಿಂದ ಸಹಕರಿಸಬೇಕು ಎಂದು ಶೆಟ್ಟಿ ಅವರು ನುಡಿದರು.
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉಪಾಧ್ಯಕ್ಷರಾದ ರಾಮಕೃಷ್ಣ ಎಂ. ಶೆಟ್ಟಿ, ಮಾಧವ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಸ್ವಾಗತ ಸಮಿತಿಯಲ್ಲಿ ಬರುವ ಪ್ರತಿಯೊಂದು ವ್ಯವಸ್ಥೆಗಳ ಬಗ್ಗೆಯೂ ಪ್ರತ್ಯೇಕ ಮಾಹಿತಿಯನ್ನು ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಸಮಾರಂಭದ ಆಮಂತ್ರಣ ಪತ್ರಿಕೆಯ ವಿತರಣೆಯ ಬಗ್ಗೆ ತಿಳಿಸಿದರು. ಆಮಂತ್ರಣ ಪತ್ರಿಕೆಯನ್ನು ಪುಣೆಯ ಪ್ರತಿಯೊಂದು ಪ್ರದೇಶಗಳಿಗೂ ವಿತರಿಸುವಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಸಮಿತಿ ಸದಸ್ಯರಿಗೆ ನೀಡಲಾಯಿತು.
ಸಭೆಯಲ್ಲಿ ಸಂಘದ ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ, ದಕ್ಷಿಣ ಪ್ರಾದೇಶಿಕ ಸಮಿತಿ ಸಮನ್ವಯಕರಾದ ತಾರಾನಾಥ ಕೆ. ರೈ ಮೇಗಿನಗುತ್ತು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಶೇಖರ ಸಿ. ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಲತಾ ಎಸ್. ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಮ್ಮಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಸುಚಿತ್ರಾ ಎಸ್. ಶೆಟ್ಟಿ, ಸದಸ್ಯರಾದ ಸಂಧ್ಯಾ ಆರ್. ಶೆಟ್ಟಿ, ಸುಮಾ ಎನ್. ಶೆಟ್ಟಿ, ನೀನಾ ಬಿ. ಶೆಟ್ಟಿ, ಗೀತಾ ಜೆ. ಶೆಟ್ಟಿ, ವಿನಯಾ ಯು. ಶೆಟ್ಟಿ, ನಯನಾ ಜೆ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್. ಶೆಟ್ಟಿ, ಸದಸ್ಯರಾದ ಆಶಾ ಪಿ. ಶೆಟ್ಟಿ, ಪ್ರಮೀಳಾ ಎಸ್. ಶೆಟ್ಟಿ, ಸುಕನ್ಯಾ ಡಿ. ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ಗೀತಾ ಆರ್. ಶೆಟ್ಟಿ, ಶರ್ಮಿಳಾ ಪಿ. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರಾದ ಪ್ರೇಮಾ ಎಸ್. ಶೆಟ್ಟಿ, ಅಂಬಿಕಾ ವಿ. ಶೆಟ್ಟಿ, ಯಶೋದಾ ಜಿ. ಶೆಟ್ಟಿ, ಲೀಲಾ ಬಿ. ಶೆಟ್ಟಿ, ಸುಮಂಗಲಾ ಎಸ್. ಶೆಟ್ಟಿ, ಲೀಲಾ ವಿ. ಶೆಟ್ಟಿ, ಯುವ ವಿಭಾಗದ ಉದಯ್ ಜೆ. ಶೆಟ್ಟಿ, ಸಿದ್ಧಾಂತ್ ಎಸ್. ಶೆಟ್ಟಿ, ನಿತೇಶ್ ಎಸ್. ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು