Advertisement
ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟ ಶಾಲಾ ಸಂಚಾಲಕ ವಂ| ರೊನಾಲ್ಡ್ ಲೋಬೋ ಅವರು ಶಿಕ್ಷಣ ಎನ್ನುವುದು ಪರಿಪೂರ್ಣವಾಗಬೇಕಾದರೆ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವೂ ಸಿಗಬೇಕು.
ಗುರುಹಿರಿಯರಿಗೆ ಗೌರವ ಕೊಡು ವುದರೊಂದಿಗೆ ಸಚ್ಚಾರಿತ್ರÂವಂತರಾಗಿ ಉತ್ತಮ ನಡೆ ನುಡಿಯನ್ನು ಅಳವಡಿ ಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ಶಿಕ್ಷಕ ರಕ್ಷಕ ಸಂಘವು ಮಾಧ್ಯಮವಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೇಸಿಐ ವಲಯ ತರಬೇತುದಾರ, ಸವಣೂರು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಬಿ.ವಿ.ಸೂರ್ಯ ನಾರಾಯಣ ಅವರು ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ಹೆತ್ತ ವ ರು ಮತ್ತು ಶಿಕ್ಷಕರ ನಿರಂತರ ಪ್ರೋತ್ಸಾಹ ಅಗತ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಮರ್ಥವಾಗಿ ಸವಾಲು ಗಳನ್ನು ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಯ ತರಬೇತಿಯೊಂದಿಗೆ ಹೆತ್ತವರ ಸೂಕ್ತ ಮಾರ್ಗದರ್ಶನವೂ ಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ರಕ್ಷಕ ಸಂಘಕ್ಕೆ ಹೆಚ್ಚಿನ ಮಹತ್ವ ಇದೆ ಎಂದರು. ಸೈಂಟ್ ಆ್ಯನ್ಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ವಂ|ಪೌಲ್ ಕ್ರಾಸ್ತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿ.ಜೆಸಿಂತಾ ರೋಡ್ರಿಗಸ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯಚಂದ್ರ ರೈ ಕುಂಟೋಡಿ, ಕಾರ್ಯದರ್ಶಿ ದûಾ, ಸೈಂಟ್ ಜೋಕಿಮ್ಸ್ ಚರ್ಚ್‌ನ ಪಾಲನ ಮಂಡಳಿಯ ಉಪಾಧ್ಯಕ್ಷ ಲೂಯಿಸ್ ಮಸ್ಕರೇನಸ್ ಮೊದ ಲಾ ದ ವರು ಉಪಸ್ಥಿತರಿದ್ದರು.
Related Articles
Advertisement