Advertisement

ಕೆವಿಕೆಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಭೇಟಿ

02:47 PM May 11, 2022 | Shwetha M |

ವಿಜಯಪುರ: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾದ ಡಾ| ಟಿ.ಎಂ. ವಿಜಯಭಾಸ್ಕರ್‌ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಸನ್ನ ಅವರು ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.

Advertisement

ಮಂಗಳವಾರ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಆಧುನಿಕ ಕೃಷಿ ತಂತ್ರಜ್ಞಾನಗಳ ಜ್ಞಾನ ಮತ್ತು ಕೌಶಲ್ಯಗಳಿಗೆ ಸಂಭದಿಸಿದಂತೆ ರೈತರು ಹಾಗೂ ಕೃಷಿ ವಿಸ್ತರಣಾ ಸಿಬ್ಬಂದಿಗೆ ತಿಳಿವಳಿಕೆ ಮೂಡಿಸಲು ತಂತ್ರಜ್ಞಾನ ವರ್ಗಾವಣೆ ಸಾಧನೆಗಳಾದ ತಂತ್ರಜ್ಞಾನ ಸಾಮರ್ಥ್ಯ ನಿರ್ಧರಿಸುವಿಕೆ. ತಂತ್ರಜ್ಞಾನ ಪರಿಷ್ಕರಣೆ ಮೂಲಕ ತರಬೇತಿ ಕಾರ್ಯಕ್ರಮ ಆಯೋಜನೆ, ರೈತರ ಅಗತ್ಯಕ್ಕನುಗುಣವಾಗಿ ಗುಣಮಟ್ಟದ ಬೀಜ, ಸಸಿಗಳು, ಜಾನುವಾರು ತಳಿಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ| ಎಸ್‌. ಶುಭಾ, ಸಹ ವಿಸ್ತರಣಾ ನಿರ್ದೇಶಕ ಡಾ| ಆರ್‌.ಬಿ.ಬೆಳ್ಳಿ, ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಹಮ್ಮಿಕೊಳ್ಳುವ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಜಿಲ್ಲಾ ಮಟ್ಟದಲ್ಲಿ ನಿರ್ದಿಷ್ಟ ಸ್ಥಳಕ್ಕೆ ಸೂಕ್ತವಾದ ತಾಂತ್ರಿಕ ಘಟಕ, ತಾಂತ್ರಿಕತೆ ಪರಿಶೀಲನೆ ಪ್ರಯೋಗಗಳ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಅಭಿವೃದ್ಧಿ ಪಡಿಸಿ, ಪ್ರಸಾರ ಮಾಡುವ ಮತ್ತು ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಜ್ಞಾನ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ವಸು ಸಂಗ್ರಹಾಲಯ, ಜೈವಿಕ ಪರಿಕರ ಉತ್ಪಾದನಾ ಘಟಕ, ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ ವೀಕ್ಷಿಸಿ ಸಂತಸ ವ್ಯಕ್ತ ಪಡಿಸಿದರು.

Advertisement

ತೋಟಗಾರಿಕೆ ಉಪ ನಿರ್ದೇಶಕ ಎಸ್‌. ಎಂ.ಬರಗಿಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| .ವಿಲಿಯಂ ರಾಜಶೇಖರ, ಉಪ ನಿರ್ದೇಶಕ ಡಾ|ಎನ್‌. ರಾಘವೇಂದ್ರ, ಇಂಡಿ ವಿಬಾಗದ ಉಪ ಕೃಷಿ ನಿರ್ದೇಶಕ ಡಾ| ಚಂದ್ರಕಾಂತ ಪವಾರ, ಕೃಷಿ ಸಹಾಯಕ ನಿರ್ದೇಶಕ ಎಂ.ಬಿ. ದೊಡಮನಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಪ್ರೇಮಾ ಪಾಟೀಲ, ಡಾ| ವಿವೇಕ ದೇವರನಾವದಗಿ, ಡಾ| ಬಿ.ಸಿ.ಕೊಲ್ಹಾರ, ಡಾ| ಶ್ರೀಶೈಲ ರಾಠೊಡ, ಬಿ.ಮಲ್ಲಪ್ಪ, ಎಸ್‌.ಸಿ.ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next