ಕನಕಪುರ: ಕಳೆದ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಪುಟ್ಟಣ್ಣನ ಅವರನ್ನೇ ಈ ಚುನಾವಣೆಯಲ್ಲೂ ಆಯ್ಕೆ ಮಾಡಬೇಕು ಎಂದು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ವಿ.ಎನ್.ಪ್ರಸಾದ್ ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಚುನಾವಣೆಗೆ ಸ್ಪರ್ಧಿಸಿರುವ ಪುಟ್ಟಣ್ಣ ಅವರನ್ನು ಬೆಂಬಲಿಸುವಂತೆ ನಗರದ ಲಯನ್ಸ್ ಶಾಲೆಯಲ್ಲಿ ತಾಲೂಕಿನ ಶಿಕ್ಷಕರ ಸಂಘಟನೆ ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಕರೆದಿದ್ದ ಸಭೆಯಲ್ಲಿ ಮಾತನಾಡಿದರು.
ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಕರ ಸಮಸ್ಯೆಗಳನ್ನು ಸ್ವತಃ ಕಂಡ ವ್ಯಕ್ತಿ ಅವರಿಗೆ ನಮ್ಮ ಸಮಸ್ಯೆಗಳ ಬಗ್ಗೆಬಹಳಷ್ಟು ಅರಿವಿದೆ. ಅವರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಂತರ ಪಕ್ಷ ಭೇದವಿಲ್ಲದೆ ಎಲ್ಲ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ ಎಂಬುದಕ್ಕೆ ಅವರು ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಿರುವುದೇ ಸಾಕ್ಷಿ ಎಂದರು.
ಕೋವಿಡ್ ನಂತರ ಶಿಕ್ಷಕರ ಸಮಸ್ಯೆಗಳು ಉಲ್ಬಣಗೊಂಡಿವೆ. ತಮ್ಮ ಹೋರಾಟದ ಮೂಲಕ ನ್ಯಾಯ ಒದಗಿಸಿಕೊಡುವ ಸಾಮರ್ಥ್ಯ ಇರುವುದು ಪುಟ್ಟಣ್ಣನವರಿಗೆ ಮಾತ್ರ. ಹಾಗಾಗಿ ಈ ಬಾರಿಯು ಶಿಕ್ಷಕರ ಪ್ರತಿನಿಧಿಯಾಗಿ ಪುಟ್ಟಣ್ಣನವರನ್ನು ಆಯ್ಕೆ ಮಾಡಬೇಕೆಂದರು. ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರುದ್ರೇಶಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಪ್ರಭಾಕರ್ ಮಾತನಾಡಿ, ತಮ್ಮನ್ನು ನಂಬಿ ಆಯ್ಕೆ ಮಾಡಿದ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪುಟ್ಟಣ್ಣನವರು ಪರಿಷತ್‌ನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿದ್ದಾರೆ ಎಂದರು.
ಪುಟ್ಟಣ್ಣನವರು ಜಾತಿ, ಧರ್ಮ ಮತ್ತು ಪಕ್ಷ ಮರೆತು ಎಲ್ಲಾ ಶಿಕ್ಷಕರಿಗೂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಹಾಗಾಗಿ ನಮ್ಮ ನೀರಿಕ್ಷೆಗಳಿಗೆ ಸ್ಫಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೋಬ್ಬ ಶಿಕ್ಷಕರ ಕರ್ತವ್ಯ ಹಾಗೂ ಗುರುತರ ಜವಬ್ದಾರಿಯಾಗಿದ್ದು, ನಾವೆಲ್ಲರೂ ಆ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎಚ್ಚರಿಸಿದರು.
ಅರ್ಹರಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಿ ನಂತರ ಪಾಶ್ಚಾತಾಪ ಪಟ್ಟರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಪುಟ್ಟಣ್ಣನವರು ಎಂದೂ ನಮ್ಮ ನೀರಿಕ್ಷೆಗಳನ್ನು ಹುಸಿ ಮಾಡುವುದಿಲ್ಲ ಎನ್ನುವ ಬಲವಾದ ನಂಬಿಕೆ ಇದೆ. ಮತ್ತೂಮ್ಮೆ ಪುಟ್ಟಣ್ಣನವರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಬೇಕು.ಕೊರೊನಾದಿಂದಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಕರ ಸಮುದಾಯಕ್ಕೆ ನೆರವಾಗಬೇಕು ಎಂಬುದೆ ನಮ್ಮ ಆಶಯ ಎಂದರು.
ಪದವಿ ಕಾಲೇಜಿನ ಪ್ರಾಧ್ಯಾಪಕ ಮುತ್ತುರಾಜು, ಆರ್‌ಜಿಎಚ್‌ಎಸ್ ಮುಖ್ಯ ಶಿಕ್ಷಕ ಜಿ.ಎಸ್ .ನಾಗರಾಜು,ಹಾರೋಹಳ್ಳಿಕಾಲೇಜುಪ್ರಾಂಶುಪಾಲ ಕೃಷ್ಣ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ನವೀನ್, ಜಿಲ್ಲಾ ಸಂಘಟನಾಕಾರ್ಯದರ್ಶಿಭಾಸ್ಕರ್‌ಆರೂಢಿ, ಸಿದ್ದರಾಜೇಗೌಡ, ಪ್ರಸನ °ಕುಮಾರ್, ಅಂಬುಜ, ಮಲ್ಲಿಕಾ, ರಾಣಿ, ಎಚ್.ಎಂ.ರವಿ ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.