Advertisement

ಮೂರನೇ ಅಲೆ ತಡೆಗೆ ಹೆಚ್ಚಿನ ಶ್ರಮವಹಿಸಿ

12:38 PM Jan 22, 2022 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಕೊರೊನಾ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಪಾರಾಗಲು ಇರುವುದು ಒಂದೇ ದಾರಿಲಸಿಕೆಯಾಗಿದ್ದು, ಗ್ರಾಮ ಮತ್ತು ಪಟ್ಟಣ ಪ್ರದೇಶದ ಜನರಿಗೆ ಮನದಟ್ಟು ಮಾಡಿ ಲಸಿಕೆ ಹಾಕಿಸಲುಮುಂದಾಗಬೇಕು ಎಂದು ಜಿಪಂ ಸಿಇಒ ರೇವಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ಮೂರನೇ ಅಲೆ ನಿಯಂತ್ರಣ ಹಾಗೂ ಕೋವಿಡ್‌ ಲಸಿಕೆ ಸಂಬಂಧಪಟ್ಟಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕೆಜಿಲ್ಲೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದರು.

ಜಿಲ್ಲೆಯ ದಲಿತ ಕೇರಿಗಳು, ಅಲ್ಪಸಂಖ್ಯಾತರು, ವಿಮಾನ ನಿಲ್ದಾಣ ಸುತ್ತಮುತ್ತ, ವಿಲ್ಲಾಗಳು, ಅಪಾರ್ಟ್ಮೆಂಟ್‌, ರೆಸ್ಟೋರೆಂಟ್‌, ಹೋಟೆಲ್‌ ಸೇರಿ ವಿವಿಧ ಕಡೆಗಳಿಗೆ ಸಂಬಂಧಪಟ್ಟ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ತಂಡ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ತಿಳಿಸಿದರು.

ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಈ ರೀತಿ ತಂಡದರೀತಿಯಲ್ಲಿ ಹೋದರೆ ದಿನಕ್ಕೆ 4ರಿಂದ 5 ಸಾವಿರಕೊರೊನಾ ಲಸಿಕೆಗಳನ್ನು ಹಾಕಿಸಲು ಸಾಧ್ಯವಾಗುತ್ತದೆ.ಯಾವ ಅಧಿಕಾರಿ ಲಸಿಕೆ ಕಾರ್ಯದಲ್ಲಿಸ್ಪಂದಿಸುವುದಿಲ್ಲವೋ ಅಂತಹ ಅಧಿಕಾರಿಗಳ ಪಟ್ಟಿಮಾಡಿ ಜಿಲ್ಲಾಧಿಕಾರಿಗಳು ಹಾಗೂ ನಮಗೆ ಶಿಫಾರಸುಮಾಡುವಂತೆ ತಹಶೀಲ್ದಾರ್‌, ತಾಪಂ ಇಒ, ನೂಡಲ್‌ಅಧಿಕಾರಿಗಳು ನೀಡಬೇಕು. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಗಳನ್ನು ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಲಸಿಕೆ ಹಾಕಿಸಬೇಕು: ಹಿರಿಯ ನಾಗರಿಕರನ್ನು ಮನವೊಲಿಸಿ ಹಾಗೂ ಇತರೆ ಕಾಯಿಲೆಗಳಿಂದಬಳಲುತ್ತಿರುವವರನ್ನು ಗುರುತಿಸಿ ಲಸಿಕೆ ಹಾಕಿಸಬೇಕು. ಇನ್ನು ಮೂರು ದಿನದಲ್ಲಿ ಜಿಲ್ಲೆಯಲ್ಲಿ ಶೇ. 100ಕ್ಕೂಹೆಚ್ಚು ಲಸಿಕಾಕರಣವಾಗಬೇಕು. ಜಿಲ್ಲೆಯು ಮೊದಲಡೋಸ್‌-97, ಎರಡನೇ ಡೋಸ್‌-88ರಷ್ಟುಪ್ರಮಾಣವಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳುಪ್ರತಿಮನೆಗೆ ಭೇಟಿ ನೀಡಿ 60 ವರ್ಷ ಮೇಲ್ಪಟ್ಟವರುಲಸಿಕೆ ತೆಗೆದುಕೊಂಡಿರುವುದಿಲ್ಲ. ಅಂತಹವರನ್ನುಗುರುತಿಸಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

Advertisement

ಜನರಿಗೆ ಮಾಹಿತಿ ನೀಡಿ: ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ಮಾತನಾಡಿ, ಕೊರೊನಾ ಮೂರನೇಅಲೆ ವೇಗವಾಗಿ ಹರಡುತ್ತಿದೆ. ಗ್ರಾಮಗಳಿಗೆಹರಡದಂತೆ ಹೆಚ್ಚು ನಿಗಾವಹಿಸಬೇಕು. ಬೆಂಗಳೂರಿಗೆಹತ್ತಿರ ಇರುವುದರಿಂದ ಅನೇಕ ಜನ ರೈತರುಮಾರುಕಟ್ಟೆ ಕೆಲಸಗಳಿಗೆ ಹೋಗುತ್ತಾರೆ. ಆದ್ದರಿಂದ,ಹೆಚ್ಚು ಎಚ್ಚರ ವಹಿಸಬೇಕಾಗಿದೆ. ಅಧಿಕಾರಿಗಳುಪ್ರತಿಮನೆಗೆ ಹೋಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದರು.ಮೂರನೇ ಅಲೆ ಬಂದಿದೆಯೆಂದು ಯಾರೂಭಯ ಬೀಳಬಾರದು. ಧೈರ್ಯದಿಂದಎದುರಿಸಬೇಕು. 15 ರಿಂದ 18ವರ್ಷ ಮೇಲ್ಪಟ್ಟಶಾಲಾ ಮಕ್ಕಳಿಗೆ ಲಸಿಕೆ ಶೇ. 90ರಷ್ಟು ಆಗಿದೆ. 60ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಬೂಸ್ಟರ್‌ಡೋಸ್‌ ಲಸಿಕೆಯನ್ನು ಕಡ್ಡಾಯವಾಗಿಹಾಕಿಸಿಕೊಳ್ಳಬೇಕು ಎಂದು ಹೇಳಿದರು.

18 ಸಾವಿರ ಲಸಿಕೆ ಬಾಕಿ: ತಹಶೀಲ್ದಾರ್‌ ಅನಿಲ್‌ ಕುಮಾರ್‌ ಅರೋಲಿಕರ್‌ ಮಾತನಾಡಿ, ತಮ್ಮ ತಮ್ಮ ಕಚೇರಿಗಳಲ್ಲಿ ಏನೇ ಕೆಲಸಗಳಿದ್ದರೂ, ಮೊದಲು ಲಸಿಕೆ ಹಾಕಿಸುವುದಕ್ಕೆ ಆದ್ಯತೆ ನೀಡಬೇಕು. ನಂತರ ವಿವಿಧಕೆಲಸಗಳನ್ನು ಮಾಡಿಕೊಡಬೇಕು. ತಾಲೂಕಿನಲ್ಲಿ 18ಸಾವಿರ ಲಸಿಕೆ ನೀಡಲು ಬಾಕಿಯಿದ್ದು, ಅದನ್ನುಪೂರ್ಣಗೊಳಿಸಿ ಶೇ. 100ಕ್ಕಿಂತ ಹೆಚ್ಚು ಪ್ರಮಾಣವನ್ನುಹೆಚ್ಚಿಸಬೇಕು ಎಂದರು. ಜಿಪಂ ಯೋಜನಾಧಿಕಾರಿನಾಗರಾಜ್‌, ತಾಪಂ ಆಡಳಿತಾಧಿಕಾರಿ ರಮೇಶ್‌ ರೆಡ್ಡಿ,ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಕೃಷ್ಣಪ್ಪ, ರೇಷ್ಮೆ ಇಲಾಖೆಯ ಉಪನಿರ್ದೇಶಕಪ್ರಭಾಕರ್‌, ತಾಪಂ ಇಒ ವಸಂತಕುಮಾರ್‌,ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್‌ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.

ರಜಾದಿನಗಳಲ್ಲೂ ಕಾರ್ಯನಿರ್ವಹಿಸಿ: ಜಿಪಂ ಸಿಇಒ :

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲ ಪ್ರೌಢಶಾಲೆಯ ಮುಖ್ಯಸ್ಥರ ಸಭೆಗಳನ್ನು ಕರೆದು 9 ಮತ್ತು 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಮಕ್ಕಳು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ಸಹಾಯವಾಗುತ್ತದೆ. ಅವರಿಂದಹೆಚ್ಚಿನ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಶನಿವಾರ ಮತ್ತು ಭಾನುವಾರ ರಜಾದಿನಗಳಲ್ಲೂಸಹ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾರೂ ಸಹ ರಜಾ ಹಾಕಬಾರದು. ತಮ್ಮ ಕೇಂದ್ರ ಸ್ಥಾನಗಳಲ್ಲಿಯೇ ಇರಬೇಕು ಎಂದು ಜಿಪಂ ಸಿಇಒ ರೇವಣಪ್ಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next