Advertisement

ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪೂರ್ವ ಸಭೆ

02:37 PM Feb 10, 2022 | Team Udayavani |

ಶಿರಸಿ: ಜಾತ್ರಾ ಅಂಗಡಿಗಳಿಗೆ ಸಂಬಂಧಿಸಿ ಒಂದೇ‌ ಕಡೆ ಅನುಮತಿ ಸಿಗುವಂತೆ ಆಗಬೇಕು ಎಂದು‌ ಜಿಲ್ಲಾಧಿಕಾರಿ‌ ಮುಲ್ಲೈ ಮುಹಿಲನ್ ಹೇಳಿದರು.

Advertisement

ಗುರುವಾರ ಅವರು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪೂರ್ವ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಳಂಬ ಆಗದೇ ತಪಾಸಣೆ ಮಾಡಬೇಕು. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ‌ ಮಾಡಬೇಕು. ರಕ್ಷಣೆ ದೃಷ್ಟಿಯಲ್ಲಿ ಸಮಸ್ಯೆ ಆಗದಂತೆ ಕೆಲಸ‌ ಮಾಡ ಬೇಕಿದೆ. ಜವಬ್ದಾರಿ ಹಂಚಿಕೆ‌ ಮಾಡಿ ಕೆಲಸ‌ ಮಾಡಬೇಕು. ನಿಯಮ ತಪ್ಪಿದರೆ ಕ್ರಮ ಆಗುತ್ತದೆ ಎಂದರು.

ನಗರದಲ್ಲಿ ರಸ್ತೆ ಅಗಲೀಕರಣ ಆಗಿದೆ. ಪಾರ್ಕಿಂಗ್ ಸಮಸ್ಯೆ ಆಗದಂತೆ‌ ನೋಡಿಕೊಳ್ಳಬೇಕು. ಜನರಿಗೆ ಮಾಹಿತಿ‌ ನೀಡುವ ಕಾರ್ಯ ಆಗಬೇಕು. ಹೊರಗಿನ ಭಕ್ತರಿಗೆ ಸಮಸ್ಯೆ ಆಗದಂತೆ ಪಾರ್ಕಿಂಗ್ ಹಾಗೂ ದೇವರ ಚಪ್ಪರಕ್ಕೆ ಹೋಗುವ ಮಾರ್ಗ ತಿಳಿಸಬೇಕು ಎಂದು ಸೂಚಿಸಿದರು.

ಸಹಾಯಕ ಆಯುಕ್ತ ದೇವರಾಜು ಮಾತನಾಡಿ, ಐದು‌ ಮುಖ್ಯ ರಸ್ತೆಯಿಂದ‌ ಬರುವ ಬಸ್ಸುಗಳು ಬಸ್ ನಿಲ್ದಾಣಕ್ಕೆ ಬರಬೇಕು. ಅದರ ಬಗ್ಗೆ ಮಾತನಾಡಿದ್ದೇವೆ. ಪೇಯ್ಡ ಪಾರ್ಕಿಂಗ್ ಆರು ಕಡೆ ಪಾರ್ಕಿಂಗ್ ಸಿಎಂಸಿ‌ ಸಿಬಂದಿ ನಿಲ್ಲಿಸಿ‌ ಮಾಡುತ್ತೇವೆ. ಪಾರ್ಕಿಂಗ್ ಭದ್ರತೆ ಇರುತ್ತದೆ ಎಂದರು.

Advertisement

ಸಾರಿಗೆ ಅಧಿಕಾರಿಗಳು‌ ಮಾಹಿತಿ ನೀಡಿ, ಕಳೆದ ವರ್ಷದಲ್ಲಿ  ನೂರು ಬಸ್ಸುಗಳನ್ನು‌ ಹೆಚ್ಚುವರಿಯಾಗಿ ಓಡಿಸಿದ್ದೇವೆ.  ಐವತ್ತು ಹೆಚ್ಚುವರಿ ಬಸ್ಸುಗಳನ್ನು ಎರವಲು ಪಡೆದಿದ್ದೇವೆ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ‌ನಾಯ್ಕ, ನಗರದ ನೈರ್ಮಲ್ಯ, ಕುಡಿಯಿವ ನೀರು, ಶೌಚಾಲಯದ ವ್ಯವಸ್ಥೆ ಮಾಡುತ್ತೇವೆ. ದಿನವೊಂದಕ್ಕೆ‌ ಮೂರು‌ ಸಲ‌ ಸ್ವಚ್ಛತೆ ಮಾಡುವದಾಗಿ ಹೇಳಿದರು.

ಸಿಎಂಸಿ ಗೌರವದ ಪ್ರಶ್ನೆ. ಕುಡಿಯುವ ನೀರು, ಸ್ವಚ್ಛತೆ ಆದ್ಯತೆ ಆಗಬೇಕು ಡಿಸಿ ಸೂಚಿಸಿದರು. ಪೊಲೀಸ್ ಭದ್ರತೆ ಇರಬೇಕು. ರಕ್ಷಣೆ, ಸಂಚಾರ,ಚೋರರ ಸಮಸ್ಯೆ ‌ಕೂಡ  ಎಚ್ಚರಿಕೆಯಿಂದ  ನಿಭಾಯಿಸಬೇಕು ಎಂದರು.

ಅಂಬುಲೆನ್ಸ ಜಾತ್ರಾ ಬಯಲಿನಲ್ಲಿ ಇರುತ್ತದೆ. ಅಗ್ನಿ‌ಶಾಮಕ ದಳ ಸ್ಥಳದಲ್ಲಿ ಇರಬೇಕು. ವೈದ್ಯರು, ಔಷಧ ಕೊರತೆ ಆಗದು ಎಂದರು.

ಸಭೆಯಲ್ಲಿ‌ ಮಾರಿಗುಡಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿ ಸುಧೀರ ಹಂದ್ರಾಳ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಡಿವೈಎಸ್ ಪಿ ರವಿ ನಾಯ್ಕ, ಪೌರಾಯುಕ್ತ ಕೇಶವ ಚೌಗಳೆ, ಅಧಿಕಾರಿ ಉಮೇಶ ಇ.ಎಸ್, ಇಓ ದೇವರಾಜ್ ಇತರರು ಇದ್ದರು.

ಹಿಂದಿನ ಜಾತ್ರೆಯಲ್ಲಿ ಆದ ಗೊಂದಲ ಬಗೆ ಹರಿಸಿ ಜಾತ್ರೆಯ ಕೆಲಸ ಮಾಡಬೇಕು. ಭಕ್ತಾದಿಗಳಿಗೆ ತೊಂದರೆ ಆಗದಂತೆ ಕಾರ್ಯ ಮಾಡಬೇಕು. ಕೋವಿಡ್ ಸಮಸ್ಯೆ ಸಾಗದಂತೆ ಕೆಲಸ ಮಾಡಬೇಕು. ಎಚ್ಚರಿಕೆಯಿಂದ ಜಾತ್ರೆ ಮಾತನಾಡಬೇಕಿದೆ.– ಮುಲ್ಲೈ ಮುಹಿಲನ್ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next