Advertisement

ಜೇವರ್ಗಿ: ಅವಶ್ಯಕ ವಸ್ತು ಅಂಗಡಿಗಳ ಮಾಲೀಕರ ಸಭೆ

12:35 PM Apr 24, 2021 | Team Udayavani |

ಜೇವರ್ಗಿ: ತಾಲೂಕಿನಲ್ಲಿ ದಿನೇದಿನೇ ಕೊರೊನಾಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವುದರಿಂದತಾಲೂಕು ಆಡಳಿತದ ವತಿಯಿಂದ ಪಟ್ಟಣದನಾಲ್ಕು ಕಡೆಗಳಲ್ಲಿ ಸಹಾಯವಾಣಿ ಕೇಂದ್ರಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್‌ವಿನಯ ಕುಮಾರ ಪಾಟೀಲ ತಿಳಿಸಿದ್ದಾರೆ.

Advertisement

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿಶುಕ್ರವಾರ ತರಕಾರಿ, ಹಣ್ಣು, ದಿನಸಿ ಹಾಗೂ ಕಲ್ಯಾಣಮಂಟಪಗಳ ಮಾಲೀಕರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಪಟ್ಟಣದ ಜನನಿಬೀಡ ಪ್ರದೇಶಗಳಾದ ಮಿನಿವಿಧಾನಸೌಧ ಕಚೇರಿ ಆವರಣ, ಕೃಷಿ ಉತ್ಪನ್ನಮಾರುಕಟ್ಟೆ ಬಳಿ, ಬಸ್‌ ನಿಲ್ದಾಣ ಹಾಗೂ ತರಕಾರಿಮಾರುಕಟ್ಟೆ ಬಳಿ ಕೋವಿಡ್‌ ಸಹಾಯವಾಣಿಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈ ಕೇಂದ್ರದಲ್ಲಿಇಬ್ಬರು ಶಿಕ್ಷಕರು, ಒಬ್ಬರು ಆಶಾ ಕಾರ್ಯಕರ್ತೆ ಹಾಗೂಪೊಲೀಸ್‌ ಸಿಬ್ಬಂದಿ ನೇಮಕ ಮಾಡಲಾಗಿದೆ. ಈಕೇಂದ್ರದಲ್ಲಿ ಕೋವಿಡ್‌ನಿಂದಾಗುವ ಸಮಸ್ಯೆ,ವ್ಯಾಕ್ಸಿನ್‌ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗ, ಸಲಹೆ ಸೂಚನೆ ಕುರಿತು ಜನರಿಗೆಮಾಹಿತಿ ನೀಡಲಿದ್ದಾರೆ ಎಂದರು.

ಸರ್ಕಾರದ ಮಾರ್ಗಸೂಚಿಯಂತೆ ಮದುವೆಸಮಾರಂಭಕ್ಕೆ ಕೇವಲ 50 ಜನರಿಗೆ ಮಾತ್ರಅವಕಾಶ ನೀಡಲಾಗಿದೆ. ಭಾಗವಹಿಸುವವರಿಗೆತಾಲೂಕು ಆಡಳಿತದ ವತಿಯಿಂದ ಗುರುತಿನಚೀಟಿ ನೀಡಲಾಗುವುದು.

Advertisement

ಸೋಮವಾರ ಬೆಳಗ್ಗೆ6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ದಿನಸಿ,ತರಕಾರಿ, ಹಣ್ಣಿನ ವ್ಯಾಪಾರಿಗಳು, ಮೆಡಿಕಲ್‌ ಶಾಪ್‌ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಬಂದ್‌ಮಾಡಲಾಗುವುದು ಎಂದು ತಿಳಿಸಿದರು.ಶನಿವಾರ ಮತ್ತು ರವಿವಾರ ದಿನಸಿ, ತರಕಾರಿ,ಹಣ್ಣಿನ ವ್ಯಾಪಾರಿಗಳಿಗೆ ಬೆಳಗ್ಗೆ 6 ಗಂಟೆಯಿಂದ 9ಗಂಟೆ ವರೆಗೆ ತೆರೆಯಲು ಅನುಮತಿ ನೀಡಲಾಗಿದೆ.

ಅಲ್ಲದೇ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆಪುರಸಭೆ ವತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜಿನ ಬಯಲು ಪ್ರದೇಶದಲ್ಲಿ ಮಾರಾಟಕೇಂದ್ರ ಆರಂಭಿಸಲು ಸೂಚಿಸಲಾಗಿದೆ. ದಿನಸಿವರ್ತಕರು ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತುಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದು, ದರಏರಿಕೆ ಮಾಡಿದರೆ ಅಂತಹವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಪಿಡಿಒ, ಗ್ರಾಪಂ ಸದಸ್ಯರು, ಆಶಾ, ಅಂಗನವಾಡಿಕಾರ್ಯಕರ್ತರು ಜನಜಾಗƒತಿ ಮೂಡಿಸುತ್ತಿದ್ದಾರೆಎಂದರು.ತಾಲೂಕು ಆರೋಗ್ಯಾ ಧಿಕಾರಿ ಡಾ| ಸಿದ್ಧುಪಾಟೀಲ, ಪಿಎಸ್‌ಐ ಸಂಗಮೇಶ ಅಂಗಡಿ, ಪುರಸಭೆಮುಖ್ಯಾಧಿ ಕಾರಿ ಶರಣಯ್ಯಸ್ವಾಮಿ ಹಾಗೂವರ್ತಕರು, ಕಲ್ಯಾಣ ಮಂಟಪ ಮಾಲೀಕರು,ತರಕಾರಿ, ಹಣ್ಣು ವ್ಯಾಪಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next