Advertisement

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಕೇಂದ‹ದಿಂದ ಶೀಘ್ರ ಕ್ರಮ

06:00 AM May 23, 2018 | |

ಮುಂಬೈ/ನವದೆಹಲಿ: ಕರ್ನಾಟಕ ಫ‌ಲಿತಾಂಶದ ಬಳಿಕ ಗಗನಮುಖಿಯಾಗಿರುವ ಪೆಟ್ರೋಲ್‌, ಡೀಸೆಲ್‌ ದರದ ಮೇಲೆ ನಿಯಂತ್ರಣ ಹೇರುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ನವದೆಹಲಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಯೊಬ್ಬರು ಹೇಳಿದ ಪ್ರಕಾರ ಎಕ್ಸೆ„ಸ್‌ ಡ್ನೂಟಿ (ಅಬಕಾರಿ ಸುಂಕ) ತಗ್ಗಿಸುವುದರಿಂದ ಕೇವಲ ನಾಲ್ಕನೇ ಒಂದಂಶದಷ್ಟು ಮಾತ್ರ ದರ ತಗ್ಗಿಸಿದಂತಾಗುತ್ತದೆ. ಇತರ ಕ್ರಮವೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. ಕೇಂದ್ರ ಹಣಕಾಸು ಖಾತೆ ಸಚಿವಾಲಯ ಪೆಟ್ರೋಲಿಯಂ ಸಚಿವಾಲಯದ ಜತೆಗೆ ಮಾತುಕತೆ ನಡೆಸುತ್ತಿದೆ ಎಂದೂ ಅವರು ಹೇಳಿದ್ದಾರೆ. 

Advertisement

ಇಂದು ಸಭೆ?: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾತನಾಡಿ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಬುಧವಾರ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಕ್ರಮ ಕೈಗೊಳ್ಳಲಿದ್ದಾರೆ. ಏರಿಕೆಯಾಗಿರುವ ದರಗಳು ತಗ್ಗಲಿವೆ ಎಂದಿದ್ದಾರೆ.

ಚುನಾವಣೆಗಾಗಿ ಅಲ್ಲ: ಕರ್ನಾಟಕ ಚುನಾವಣೆಗಾಗಿ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ದರ ಪರಿಷ್ಕರಿಸದಂತೆ ಸೂಚಿಸಿಯೇ ಇಲ್ಲ. ಅಂತಾ ರಾಷ್ಟ್ರೀಯವಾಗಿ ಹೆಚ್ಚಾಗಿರುವ ಕಚ್ಚಾ ತೈಲದ ಬೆಲೆ ತಗ್ಗಲಿ ಎಂದು ಆಂತರಿಕವಾಗಿಯೇ ದರ ಹೆಚ್ಚಿಸದಂತೆ ನಿರ್ಧಾರ ಕೈಗೊಂಡಿದ್ದೆವು ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಓಸಿ) ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next