Advertisement

ಮುಂದಿನ ಹೋರಾಟಕ್ಕಾಗಿ ಸಮಾಲೋಚನ ಸಭೆ

02:19 PM Mar 25, 2022 | Team Udayavani |

ಕಟಪಾಡಿ: ಪಾಪನಾಶಿನಿ ನದಿಗೆ ಕಾಪು ತಾ|ಕುರ್ಕಾಲಿನಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಜಾರಿಗೆ ಬರಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಜನವಿರೋಧಿ, ರೈತ ವಿರೋಧಿಯಾಗಿದ್ದು, ಇದರ ವಿರುದ್ಧ ಮಣಿಪುರ, ಕುರ್ಕಾಲು, ಕುಂಜಾರು ಪ್ರದೇಶಗಳ ರೈತರು, ಸಾರ್ವಜನಿಕರು ಬುಧವಾರ ಸಭೆ ಸೇರಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಿದ್ದಾರೆ.

Advertisement

ನದಿಯ ಇಕ್ಕೆಲಗಳ ಜನತೆ ಮತ್ತು ಕೃಷಿಕರಲ್ಲದೆ ಸ್ಥಳೀಯಾಡಳಿತಗಳಿಗೂ ಮಾಹಿತಿ ನೀಡದೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ದೀರ್ಘಾವಧಿ ಬಾಳಿಕೆ ಬರಲು ಸಾಧ್ಯವೇ ಇರದ ಇದನ್ನು ಕಾರ್ಯಗತಗೊಳಿಸಿ ಜನರ ತೆರಿಗೆ ಹಣವನ್ನು ಪೋಲು ಮಾಡುವುದು ಸರಿಯಲ್ಲ. ಜತೆಗೆ ಕಿಂಡಿ ಅಣೆಕಟ್ಟಿನ ಆಸುಪಾಸಿನ ಪ್ರದೇಶಗಳ ಜನತೆಗೆ, ಕೃಷಿಕರಿಗೆ ಹೊಸ ರೀತಿಯ ಸಮಸ್ಯೆಗಳು ಉಂಟಾಗಲಿವೆ. ಆದ್ದರಿಂದ ಈ ಯೋಜನೆಯನ್ನು ನಿಲುಗಡೆಗೊಳಿಸಲು ಒಕ್ಕೊರಲ ನಿರ್ಧಾರ ತಳೆಯಲಾಯಿತು.

ಸಭೆಯಲ್ಲಿ ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಬಿಳಿಯಾರು ಮಹೇಶ್‌ ಶೆಟ್ಟಿ, ಸದಸ್ಯ ಸುದರ್ಶನ ರಾವ್‌, ಪ್ರವೀಣ್‌ ನೂಜಿ, ಮಣಿಪುರ ಗ್ರಾ.ಪಂ. ಸದಸ್ಯ ಸಂತೋಷ್‌ ಶೆಟ್ಟಿ, ಉಡುಪಿ ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು, ಶ್ರೀನಿವಾಸ ಭಟ್‌ ಕುದಿ, ರವೀಂದ್ರ ಗುಜ್ಜರಬೆಟ್ಟು, ಶ್ರೀನಿವಾಸ ಬಲ್ಲಾಳ್‌ ಮಲ್ಲಂಪಳ್ಳಿ, ದಿನೇಶ್‌ ಶೆಟ್ಟಿ ಹೆರ್ಗ ಹಾಗೂ ಯೋಜನೆ ತಡೆ ಹೋರಾಟ ಸಮಿತಿಯ ಸಂಚಾಲಕ ರವಿ ಪೂಜಾರಿ ಕುರ್ಕಾಲು, ಮಣಿರಾಜ, ನವೀನ್‌, ಶೌಕತ್‌ ಹುಸೈನ್‌ ಕುರ್ಕಾಲು, ಸಾಧು ಮಡಿವಾಳ, ಜೋಸೆಫ್‌ ಕುಂದರ್‌, ಸಂಪ ಪೂಜಾರಿ ಮಣಿಪುರ, ಕುರ್ಕಾಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೋಭಾ, ಸೋಮಯ್ಯ ಕಾಂಚನ್‌, ಪದ್ಮಾ ಮೆಂಡನ್‌, ಪುಷ್ಪಾ, ಗೀತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next