ಗದಗ: ಜಿಲ್ಲಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿಯೋಜಿತ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆದ್ಯತೆ ವಹಿಸಿ, ನಿಖರವಾಗಿ ತಯಾರಿಸಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಡಾ| ಎಸ್. ಬಸವರಾಜ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜರುಗಿದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ನಿಯೋಜಿತ ಎಲ್ಲ ಅಧಿಕಾರಿಗಳುಸೂಚನೆ ಮೇರೆಗೆ ಉತ್ತಮ ಮತದಾರರ ಪಟ್ಟಿ ಸಿದ್ಧಗೊಳಿಸಬೇಕು. ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಅಧಿಕಾರಿಗಳಿಗಿರುವ ಗೊಂದಲಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಪರಿಹಾರಕಂಡುಕೊಂಡು ನಿಖರ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲ ಅರ್ಹ ಮತದಾರರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದಹಕ್ಕು ದೊರೆಯುವಂತೆ ಅವಕಾಶಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮತದಾರರಪಟ್ಟಿ ಪರಿಷ್ಕರಣೆ ಪ್ರಮುಖವಾಗಿದೆ. ಈ ಕಾರ್ಯವನ್ನು ಅಧಿಕಾರಿಗಳು ಆದ್ಯತೆ ಮೇರೆಗೆ ಆಸಕ್ತಿ ವಹಿಸಿ ನಿರ್ವಹಿಸುವಮೂಲಕ ನಕಲಿ ಮತದಾರರನ್ನು ಗುರುತಿಸಿಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಪರಿಷ್ಕರಿಸುವಂತೆ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಒಂದೇ ಪ್ರದೇಶದ ಹಲವರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಅಲ್ಲದೇ ವಲಸೆ ಸಂತ್ರಸ್ತರ ಹೆಸರುಗಳು ದಿಢೀರನೇ ಮತದಾರರ ಪಟ್ಟಿಯಲ್ಲಿ ನೋಂದಾವಣೆಯಾಗುವುದೂ ಅಲ್ಲಲ್ಲಿ ಕಂಡುಬರುವುದನ್ನು ಗಮನದಲ್ಲಿರಿಸಿಕೊಂಡು ಅವ್ಯವಸ್ಥೆಗೆ ಅವಕಾಶ ನೀಡದೇ ನಿಖರ ಮತದಾರರ ಪಟ್ಟಿ ಪರಿಷ್ಕರಣೆಗೆ ತಾವು ಸಹಕರಿಸುವಂತೆ ಸೂಚಿಸಿದರು. ಮತದಾರರ ಪಟ್ಟಿಯಿಂದ ಮೃತರನ್ನು ಗುರುತಿಸಿ ಅವರನ್ನು ಪಟ್ಟಿಯಿಂದ ತೆಗೆದು ಹಾಕುವ ಹಾಗೂ ಹೊಸ ಮತದಾರರಿಗೆ ನೋಂದಾಯಿಸುವ ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ. ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನ. 18ರವರೆಗಿನ ಮಾಹಿತಿ ಯಂತೆ 4,33,675 ಪುರುಷ, 4,29,238 ಮಹಿಳೆಯರು ಹಾಗೂ 45 ಇತರರು ಸೇರಿದಂತೆ ಒಟ್ಟು 8,62,958 ಮತದಾರರಿದ್ದಾರೆ. ನಗರ ಪ್ರದೇಶದಲ್ಲಿ 348 , ಗ್ರಾಮೀಣ ಪ್ರದೇಶದಲ್ಲಿ 611 ಮತಗಟ್ಟೆ ಸೇರಿದಂತೆ ಒಟ್ಟು 959 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 959 ಬಿಎಲ್‌ಒಗಳನ್ನು ನೇಮಿಸಿ ಅವರಿಗೆ ನಿಯಮಿತವಾಗಿ ತರಬೇತಿನೀಡಲಾಗಿದೆ. ಅವರೆಲ್ಲರೂ ಮತದಾರರ ಪಟ್ಟಿ ನಿಖರ ತಯಾರಿಕೆಗೆ ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಆಯಾ ತಾಲೂಕಿನತಹಶೀಲ್ದಾರರು ಹಾಜರಿದ್ದರು.ಸಭೆ ನಂತರ ಗದಗ ಜಿಲ್ಲೆಯ ಮತದಾರರಪಟ್ಟಿ ವೀಕ್ಷಕ ಡಾ| ಎಸ್. ಬಸವರಾಜಚುನಾವಣೆ ಶಾಖೆಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಪರಿಶೀಲಿಸಿದರು