Advertisement
‘ಏ… ಹೇಗಿರಬಹುದೇ?ಅಮಿತಾಭ್‌ಥರಾ ಲಂಬೂನಾ ಅಥವಾ ಶಾರುಖ್ ಹಾಗೆ ಫುಲ್ ಸ್ಮಾರ್ಟಾ?’ ಗೆಳತಿ ಸಿರಿ, ನಮ್ಮನ್ನೆಲ್ಲಾ ಪ್ರಶ್ನಿಸುತ್ತಿದ್ದಳು. ನಮಗೆ ಒಂದೆಡೆ ನಗು. ಮತ್ತೂಂದೆಡೆ, ಮನಸ್ಸಿನಲ್ಲೇ ಕುತೂಹಲವೂ. ನನಗಂತೂ ಯಾಕೋ ಆರಡಿ ಎತ್ತರದಷ್ಟಪುಷ್ಟವಾದ ಸೂಟು-ಬೂಟು ಧರಿಸಿದ್ದ ಶಿಸ್ತಿನ ವ್ಯಕ್ತಿಯ ಚಿತ್ರವೇ ಕಣ್ಮುಂದೆ ಬರುತ್ತಿತ್ತು.
ಆಗಷ್ಟೇ ಹೈಸ್ಕೂಲ್ ಮುಗಿದು, ಕಾಲೇಜು ಶುರುವಾಗಿತ್ತು. ಈ ಹಿಂದೆ ಓದಿದ್ದು ನೂರಾರು ಮಕ್ಕಳಿದ್ದ ದೊಡ್ಡ ಸ್ಕೂಲು. ಅಲ್ಲಿ ನಮ್ಮ ಪ್ರಿನ್ಸಿಪಾಲರಿಗೆ ಅವರದ್ದೇ ಆದ ಪ್ರತ್ಯೇಕ ಕೊಠಡಿ ಮತ್ತು ಅಟೆಂಡರ್ ಇದ್ದರು.ಪ್ರಿನ್ಸಿಪಾಲ್ ಮೇಡಂ, ಸದಾ ಇಸಿŒ ಮಾಡಿದ ಗರಿಗರಿ ಕಾಟನ್ ಸೀರೆಯುಟ್ಟು ಶಿಸ್ತಾಗಿ ಸ್ಕೂಲಿಗೆ ಬರುತ್ತಿದ್ದರು.ಅವರನ್ನು ಯಾವಾಗ ಬೇಕೆಂದರೆ ಆವಾಗ ಒಳ ನುಗ್ಗಿ ಮೀಟ್ ಮಾಡುವಂತೆ ಇರಲಿಲ್ಲ. ಆದರೆ, ಮನೆಗೆ ಹತ್ತಿರದಲ್ಲಿದ್ದ ಈ ಕಾಲೇಜು, ನಮ್ಮ ಸ್ಕೂಲ್‌ಗೆ ಹೋಲಿಸಿದರೆ ಚಿಕ್ಕದಾಗಿತ್ತು.ಕಾಲೇಜು ಶುರುವಾಗಿ ವಾರವೇ ಕಳೆದಿದ್ದರೂ ನಾವು ಇನ್ನೂ . ಪ್ರಿನ್ಸಿಪಾಲ್‌ರನ್ನು ಕಂಡಿರಲಿಲ್ಲ. ಅವರಿಗೇ ಪುಟ್ಟ ಕೊಠಡಿ ಇದ್ದರೂ ಅಲ್ಲಿ ಹೆಚ್ಚಿನ ಸಮಯ ಯಾರೂ ಇರುತ್ತಿರಲಿಲ್ಲ. ಆದರೂ ನಾವು ಓಡಾಡುವಾಗಲೆಲ್ಲಾ ಅಲ್ಲಿ ಕುತೂಹಲದಿಂದ ಇಣುಕಿ ನೋಡುತ್ತಿದ್ದೆವು. ಸೀನಿಯರ್ ಕೇಳಿದರೆ “ಸ್ವಲ್ಪ ದಿನದಲ್ಲಿ ಸಿಗ್ತಾರೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ಪ್ರಿನ್ಸಿಪಾಲ್ ಕಾಣದಿದ್ದರೂ ಕಾಲೇಜಿನಲ್ಲಿ ಪಾಠ-ಪ್ರವಚನ ಸರಿಯಾಗಿ ನಡೆಯುತ್ತಿತ್ತು. ಸ್ಟಡಿ ಪೀರಿಯಡ್‌ನಲ್ಲಿ ಬೇಸರವಾಗಿ ಆಗಾಗ್ಗೆ ಮಾತಾಡುತ್ತಿದ್ದೆವು. ಆಗೆಲ್ಲಾ’ ಹುಷ್!ಗಲಾಟೆ ಮಾಡಬೇಡಿ, ಓದಿಕೊಳ್ಳಿ’ ಎನ್ನುವಧ್ವನಿ ಕೇಳುತ್ತಿತ್ತು. ಹಾಗೆ ಹೇಳುತ್ತಿದ್ದದ್ದು ನಾವು “ಸ್ವಾಮಿ’ ಎಂದು ಅಡ್ಡ ಹೆಸರಿಟ್ಟ ವ್ಯಕ್ತಿ. ಗಡ್ಡ ಮೀಸೆ ಬೆಳೆಸಿ, ಜುಬ್ಬ-ಪಂಚೆ ಉಟ್ಟು ಬರಿಕಾಲಿನಲ್ಲಿ ಓಡಾಡುತ್ತಾ ಇದ್ದ ಮನುಷ್ಯ. ಅವರುಯಾರು, ಏನು ಕೆಲಸ ಮಾಡುತ್ತಾರೆ ಎಂಬುದೇನೂ ನಮಗೆ ತಿಳಿದಿರಲಿಲ್ಲ. ಅವರ ಮುಂದೆಯೇ ನಮ್ಮ ಪ್ರಿನ್ಸಿಪಾಲ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿತ್ತು. ಸ್ವಾಮಿ ಮಾತ್ರ, ಓದಿಕೊಳ್ಳಿ ಎಂಬ ಮಂತ್ರವನ್ನು ಸದಾ ಜಪಿಸುತ್ತಿತ್ತು!
Related Articles
Advertisement
ಆಮೇಲೆ ತಿಳಿದ ವಿಷಯವೆಂದರೆ, ನಮ್ಮ ಪ್ರಿನ್ಸಿಪಾಲರು ಯಾವುದೋ ವ್ರತದ ಸಲುವಾಗಿ ಹಾಗಿದ್ದರಂತೆ; ನಮಗದು ಗೊತ್ತಿರಲಿಲ್ಲ ಅಷ್ಟೇ! ಆ ದಿನ ಹೇಳಿದಂತೆ ಕಾಲೇಜಿನ ಎರಡು ವರ್ಷ ಬರೀರೂಮ್‌ನಲ್ಲಿಕೂರದೇಎಲ್ಲಾ ಕಡೆ ಓಡಾಡುತ್ತಾ, ನಮ್ಮಎಲ್ಲಾ ಸಮಸ್ಯೆಗಳನ್ನು ಕೇಳಿ ಸಮಾಧಾನದಿಂದಉತ್ತರಕೊಟ್ಟು, ಧೈರ್ಯತುಂಬಿದರು.ನಾವು ಮಾತ್ರ ಅವರನ್ನು ಪ್ರೀತಿಯಿಂದ “ಸ್ವಾಮಿ ಸರ್’ ಎಂದೇ ಕರೆಯುತ್ತಿದ್ದೆವು!!!
- ಮಹತಿ ಸಿದ್ಧೇಶ್ವರ್