Advertisement

ದುಬೈ: ಹಬ್ಬದ ದಿನ ಜನನ, ಕುಟುಂಬದ ಸಂಭ್ರಮ ದುಪ್ಪಟ್ಟು

10:28 AM Aug 13, 2019 | Sriram |

ದುಬೈ: ಈದ್ ಅಲ್ ಅಜ್ಹಾ ಯುನೈಡೆಟ್ ಅರಬ್ ರಾಷ್ಟ್ರದಲ್ಲಿ ಈ ವರ್ಷ ತುಸು ಹೆಚ್ಚೇ ರಂಗೇರಿದೆ. ಅತೀ ಹೆಚ್ಚು ಮುಸ್ಲಿಂ ಸಮುದಾಯದ ಬಾಂಧವರು ವಾಸಿಸುತ್ತಿರುವ ಯುಎಇನಲ್ಲಿ ರವಿವಾರ ಹಬ್ಬ ಆಚರಿಸಲಾಗುತ್ತಿದೆ. ಅಲ್ಲಿ ರವಿವಾರ ಹಬ್ಬ ಆರಂಭಗೊಂಡು ಸೋಮವಾರ ಮುಗಿಯುತ್ತದೆ.

Advertisement

ಯುಎಇನ ಸಂಪ್ರದಾಯದಂತೆ ಈದ್ ಅಲ್ ಅಜ್ಹಾ ದಿನ ಮನೆಯಲ್ಲಿ/ಕುಟುಂಬದಲ್ಲಿ ಮಗು ಜನಿಸಿದರೆ ಹಬ್ಬಕ್ಕೆ ಮತ್ತಷ್ಟು ಕಳೆ ಬರುತ್ತದೆ ಎಂಬ ನಂಬಿಕೆ ಇದೆ. ಒಂದು ಕಡೆ ಹಬ್ಬ ಜತೆಗೆ ಕುಟುಂಬಕ್ಕೆ ನೂತನ ಸದಸ್ಯನ ಆಗಮನದ ಸುದ್ದಿ ಸಂಭ್ರಮಕ್ಕೆ ಮತ್ತಷ್ಟು ರಂಗು ತರುತ್ತದೆ. ಇಂತಹ ಅಪರೂಪದ ಸಂದರ್ಭದಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟಾಗುತ್ತದೆ. ರವಿವಾರ ಯುಎಇನ ಹಲವು ಆಸ್ಪತ್ರೆಗಳಲ್ಲಿ ಮಗುವಿನ ಜನನಗಳು ಆಗಿವೆ. ಆ ಕುಟುಂಬಗಳು ಸಂಭ್ರಮದ ಕಡಲಿನಲ್ಲಿ ತೇಳುತ್ತಿವೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಹಬ್ಬದ ದಿನದ ಮೊದಲ ಜನನಕ್ಕೆ ಅಬುದಾಬಿಯ ಬುರ್ಜೀಲ್ ಹಾಸ್ಪಿಟಲ್ ಸಾಕ್ಷಿಯಾಗಿದೆ. ಬಳಿಕ ಎನ್ಎಂಸಿಯಲ್ಲಿ ಮತ್ತೂಂದು ಕುಟುಂಬ ಮಗುವಿಗೆ ಜನ್ಮ ನೀಡಿದೆ. ಮೂರನೇ ಕುಟುಂಬ ಆರ್ಎಕೆ ಆಸ್ಪತ್ರೆಯಲ್ಲಿ ಜನ್ಮ ನೀಡಿದೆ. ಹೀಗೆ ಯುಎಇನ ಬಹುತೇಕ ಆಸ್ಪತ್ರೆಗಳಲ್ಲಿ ಜನನ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಹಬ್ಬದ ದಿನ ವಿಶೇಷ ಪ್ರಾರ್ಥನೆಗಳು ಮಸೀದಿಗಳಲ್ಲಿ ನಡೆಯುತ್ತದೆ. ಈ ಸಂದರ್ಭ ಮಗು ಜನನವಾದರೆ ಅದನ್ನು ವಿಶೇಷ ಎಂದು ಭಾವಿಸಲಾಗುತ್ತದೆ.

ಈ ಹಬ್ಬದ ದಿನ ಹೆರಿಗೆ ಮಾಡಿಸಿಕೊಂಡ ಕುಟುಂಬಗಳ ಜತೆ ಆಸ್ಪತ್ರೆಗಳೂ ವಿಶೇಷ ಸಂಭ್ರಮ ಪಡುತ್ತದೆ. ಇನ್ನು ಭಾರತೀಯ ಮೂಲದ ದಿನೇಶ್ ಮತ್ತು ಪ್ರಿಶಾ ದಂಪತಿ ತಮ್ಮ ಎರಡನೇ ಮಗುವಿಗೆ ದುಬೈನ ಪ್ರೈಮ್ ಆಸ್ಪತ್ರೆಯಲ್ಲಿ ರವಿವಾರ ಜನ್ಮ ನೀಡಿದ್ದಾರೆ. ಮಗು 2.3 ಕೆ.ಜಿ. ತೂಕ ಇದೆ ಎಂದು ಆಸ್ಪತ್ರೆ ತಿಳಿಸಿದೆ. ಹೀಗೆ ಯುಎಇನಲ್ಲಿ ನೆಲೆಸಿರುವ ಹಲವು ವಿದೇಶಿಗಳು ರವಿವಾರ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಯುಎಇನ ಕುಟುಂಬಗಳಷ್ಟು ಸಂಭ್ರಮ ಇವರಲ್ಲಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next