Advertisement

World’s Oldest Man: ಪ್ರಪಂಚದ ದೀರ್ಘಾಯುಷಿ ವ್ಯಕ್ತಿ ಅಬಾದ್‌ಗೆ 123 ವರ್ಷ?

10:52 PM Apr 10, 2024 | Team Udayavani |

ಲಿಮಾ(ಪೆರು): ಪ್ರಪಂಚದ ಅತಿ ದೀರ್ಘಾಯುಷಿ ವ್ಯಕ್ತಿ ಎಂಬ ಹೆಗ್ಗಳಿಕೆಯು ಪೆರು ದೇಶದ ಮರ್ಸೆಲಿನೋ ಅಬಾದ್‌ರ ಪಾಲಾಗುವ ಸಾಧ್ಯತೆಗಳಿವೆ. ಪೆರು ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ತಮ್ಮ ದೇಶದ ನಿವಾಸಿ ಅಬಾದ್‌ಗೆ ಬರೋಬ್ಬರಿ 123 ವರ್ಷಗಳು ತುಂಬಿದ್ದು, ಕಳೆದ ವಾರವಷ್ಟೇ 124ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Advertisement

ಅಲ್ಲದೆ, ಅಬಾದ್‌ರನ್ನು ಗಿನ್ನೆಸ್‌ ದಾಖಲೆಗೆ ಸೇರಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಮೂಲತಃ ಪೆರುವಿನ ಆ್ಯಂಡೀಸ್‌ ಪರ್ವತ ಶ್ರೇಣಿಯ ಛಗ್ಲದವರಾದ ಅಬಾದ್‌, ವೈವಿಧ್ಯಮಯ ಹಣ್ಣುಗಳು ಹಾಗೂ ಕುರಿ ಮರಿಯ ಮಾಂಸವೇ ತಮ್ಮ ದೀರ್ಘಾಯಸ್ಸಿನ ಹಿಂದಿನ ರಹಸ್ಯವೆಂದು ಹೇಳಿಕೊಂಡಿದ್ದಾರೆ. ಸದ್ಯ ಜೀವಂತ ದೀರ್ಘಾಯುಷಿ ದಾಖಲೆ ಬ್ರಿಟನ್ನಿನ ಬ್ರಿಟ್‌ ಜಾನ್‌ ಹೆಸರಿನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next