ನವದೆಹಲಿ : ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಖ್ಯಾತಿಯ ಸುರೇಖಾ ಯಾದವ್, ಈಗ ತಮ್ಮ ಸಾಧನೆಗೆ ಮತ್ತೊಂದು ಗರಿಯನ್ನು ಸೇರ್ಪಡೆಗೊಳಿಸಿಕೊಂಡಿದ್ದು, ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು ಚಲಾಯಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.
Advertisement
ಮುಂಬೈನ ಸೋಲಾಪುರ ಸ್ಟೇಷನ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಸಂಚರಿಸಿದ ವಂದೇ ಭಾರತ್ ರೈಲನ್ನು ಸುರೇಖಾ ಸೋಮವಾರ ಚಲಾಯಿಸಿದ್ದಾರೆ.
ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದು, ” ವಂದೇ ಭಾರತ್‌ಗೆ ನಾರಿಶಕ್ತಿಯ ಬಲ ದೊರೆತಿದೆ; ಸುರೇಖಾ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್ ಚಲಾಯಿಸಿದ ಮೊದಲ ಮಹಿಳಾ ಲೋಕೋ ಪೈಲಟ್’ ಎಂದಿದ್ದಾರೆ.