Advertisement

ಪಿಎಂಗೆ ಪಾಕ್‌ ಮಹಿಳೆಯ ರಾಖಿ

06:00 AM Aug 23, 2018 | |

ಹೊಸದಿಲ್ಲಿ: ಇದೇ 26ರಂದು ರಾಖಿ ಹಬ್ಬ ಆಚರಿಸಲಾಗುತ್ತದೆ.ಭಾತೃತ್ವದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಅವರಿಗೆ ಶುಭ ಹಾರೈಸುತ್ತಾರೆ. ಈ ಪವಿತ್ರ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ಥಾನದ ಮಹಿಳೆಯೊಬ್ಬರು ಕಳೆದ 36 ವರ್ಷಗಳಿಂದ ರಾಖಿ ಕಳುಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅಂದ ಹಾಗೆ ಅವರ ಹೆಸರು ಖುಮಾರ್‌ ಮೊಹ್ಸಿನ್‌ ಶೇಕ್‌. ಪಾಕಿಸ್ಥಾನದಲ್ಲೇ ಹುಟ್ಟಿ ಬೆಳೆದಿರುವ ಅವರು ಪಾಕಿಸ್ಥಾನದಲ್ಲಿದ್ದರೂ ತಾವು ಮಾನಸಿಕವಾಗಿ ಭಾರತೀಯರೇ ಎಂದು ಹೇಳಿ ಕೊಂಡಿರುವ ಅವರು, ಮೋದಿಯವರು ಪ್ರಧಾನಿಯಾಗಿದ್ದು ತಮಗೆ ಹೆಮ್ಮೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next