Advertisement

Cinema: ಯಶ್‌,ರಾಮ್‌ಚರಣ್‌, ರಜಿನಿ ಸಿನಿಮಾದ ಗಳಿಕೆ ಮೀರಿಸಿದ ಕುಳ್ಳ ನಟ…ಯಾರೀತ?

05:32 PM Oct 12, 2023 | ಸುಹಾನ್ ಶೇಕ್ |

ಬಣ್ಣದ ಲೋಕ ಎನ್ನುವುದು ಅದೃಷ್ಟ. ಸಿನಿಮಾದಲ್ಲಿ ನಟಿಸುವ ಕಲಾವಿದರು ಒಂದೊಂದೇ ಪಾತ್ರಗಳನ್ನು ಮಾಡುತ್ತಲೇ ಯಶಸ್ಸಿನ ಹಾದಿಯಲ್ಲಿ ನಡೆಯಲು ಶುರು ಮಾಡುತ್ತಾರೆ. ಅಂದುಕೊಂಡ ಹಾಗೆ ಈ ಹಾದಿಯಲ್ಲಿ ಹೆಜ್ಜೆ ಹಾಕುವುದು ಅಷ್ಟು ಸುಲಭದ ಮಾತಲ್ಲ. ಎಲ್ಲ ಸಂದರ್ಭದಲ್ಲಿ ಕಲಾವಿದರಿಗೆ ಯಶಸ್ಸೇ ಸಿಗಲ್ಲ. ಕೆಲವೊಮ್ಮೆ ಸೋಲೇ ಎದುರಾಗುತ್ತದೆ. ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಅಭಿಮಾನಿಗಳ ಹೃದಯವನ್ನು ಗೆದ್ದವ ಇಲ್ಲಿ ಸೂಪರ್‌ ಸ್ಟಾರ್‌ ಗಳಾಗುತ್ತಾರೆ.

Advertisement

ನೋಡಲು ಅತ್ಯಂತ ಕುಳ್ಳ ಅಂದರೆ, 4.8 ಅಡಿ ಎತ್ತರವಿರುವ ನಟನೊಬ್ಬನ ಬಣ್ಣದ ಲೋಕದ ಯಶೋಗಾಥೆಯ ಪರಿಚಯವಿದು. ಇವರು ಕಳೆದ 2 ವರ್ಷಗಳಲ್ಲಿ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. ಇವರ ಸಿನಿಮಾಗಳು ಸೂಪರ್‌ ಸ್ಟಾರ್‌ ಗಳ ಸಿನಿಮಾಗಳ ಗಳಿಕೆಯನ್ನೂ ಮೀರಿಸಿದೆ.!

ಭಾರತದ ಅತೀ ಕುಳ್ಳ ನಟ, ನಿರ್ದೇಶಕರ ಮೊದಲ ಆಯ್ಕೆ; ಯಾರು ಈ ಜಾಫರ್ ಸಾದಿಕ್? :

ಜುಲೈ 4 1995 ರಲ್ಲಿ ತಮಿಳುನಾಡಿನಲ್ಲಿ ಹುಟ್ಟಿದ ಜಾಫರ್‌ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಒಬ್ಬ ಡ್ಯಾನ್ಸರ್‌ ಹಾಗೂ ನೃತ್ಯ ಸಂಯೋಜಕರಾಗಿದ್ದಾರು. 20 ರ ಹರೆಯದಲ್ಲಿ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದ ಜಾಫರ್‌ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಗ್ಯಾಂಗ್ ಸ್ಟರ್‌, ಖಳನಾಯಕನ ಲುಕ್‌ ನಲ್ಲಿ, 4.8 ಅಡಿ ಎತ್ತರ ಜಾಫರ್‌ ಗ್ಯಾಂಗ್‌ ಸ್ಟರ್‌ ಗಳ ಗುಂಪಿನಲ್ಲಿ ಕಾಣಿಸಿಕೊಳ್ಳುವ ಪಾತ್ರದಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರಿಗೆ ಪರಿಚಿತರಾದರು.

Advertisement

2020 ರಲ್ಲಿ ತೆರೆ ಕಂಡ ತಮಿಳಿನ ʼಪಾವ ಕಡೈಗಲ್ʼ ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡರು. ಅಲ್ಲಿ ಮಿಂಚಿದ ಬಳಿಕ ಅವರಿಗೆ ದೊಡ್ಡ ಬಂಪರ್‌ ಆಫರ್‌ ರೀತಿಯಲ್ಲಿ ಕಮಲ್‌ ಹಾಸನ್‌ ಅವರ  ʼವಿಕ್ರಮ್‌ʼ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು. ಈ ಸಿನಿಮಾದಲ್ಲಿ ವಿಜಯ್‌ ಸೇತುಪತಿ ಅವರ ಆಪ್ತನಾಗಿ ಗ್ಯಾಂಗ್‌ ಸ್ಟರ್‌ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡರು. ʼವಿಕ್ರಮ್‌ʼ ಸಿನಿಮಾ 414 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು.

ಇದಾದ ಬಳಿಕ ಜಾಫರ್‌ “ವೆಂದು ತಾನಿಂದು ಕಾದು”ಸಿನಿಮಾದಲ್ಲಿ ನಟಿಸಿದರು. ಆ ನಂತರ ʼಸೈತಾನ್‌ʼ ವೆಬ್‌ ಸಿರೀಸ್‌ ನಲ್ಲಿ ನಟಿಸಿ ಗಮನ ಸೆಳೆದರು. ಇದಾದ ಬಳಿಕ ಅವರ ವೃತ್ತಿ ಜೀವನದಲ್ಲಿ ಮತ್ತೆ ದೊಡ್ಡ ಬ್ಯಾನರ್‌ ನ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂತು. ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಹಾಗೂ ಇತ್ತೀಚೆಗೆ ಬಂದ ಶಾರುಖ್‌ ಖಾನ್‌ ಅವರ ʼಜವಾನ್ʼ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾ ಅವರಿಗೆ ಇನ್ನಷ್ಟು ಬೇಡಿಕೆಯ ನಟನಾಗಿ ಮಾಡಿದೆ.

ಯಶ್‌, ರಾಮ್‌ ಚರಣ್‌, ಜೂ.ಎನ್‌ ಟಿಆರ್‌ ಸಿನಿಮಾದ ಗಳಿಕೆಯನ್ನೇ ಮೀರಿಸಿದ ಸಾಧನೆ.!  

ಜಾಫರ್ ಅವರ ಚಿತ್ರಗಳು ಕಡೆಯ ಮೂರು ಸಿನಿಮಾಗಳು (ಕೋವಿಡ್‌ ಅವಧಿಯಿಂದ) 2200 ಕೋಟಿ ರೂ. ಗಳಿಸಿವೆ. ಶಾರುಖ್ ಖಾನ್ (2100 ಕೋಟಿ ರೂ.), ಮತ್ತು ಜೂನಿಯರ್ ಎನ್‌ಟಿಆರ್, ರಾಮ್ ಚರಣ್ (ಇಬ್ಬರು 1300 ಕೋಟಿ ರೂ.), ಯಶ್ (ರೂ 1200 ಕೋಟಿ) ಮತ್ತು ರಜಿನಿಕಾಂತ್ (ರೂ. 650 ಕೋಟಿ) ಅವರ ಸಿನಿಮಾದ ಗಳಿಕೆಯನ್ನೇ ಮುರಿದಿದೆ.

ಮುಂದೆಯೂ ದೊಡ್ಡ ಸಿನಿಮಾದಲ್ಲಿ ನಟನೆ..

ಬಣ್ಣದ ಲೋಕದಲ್ಲಿ ಜಾಫರ್‌ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ʼಜವಾನ್‌ʼ ಬಳಿಕ ಜಾಫರ್‌ ಲೋಕೇಶ್‌ ಕನಕರಾಜ್‌ – ದಳಪತಿ ವಿಜಯ್‌ ಅವರ ʼಲಿಯೋ; ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಸೂರ್ಯ ಅವರ ಬಹು ನಿರೀಕ್ಷಿತ ಇನ್ನು ಟೈಟಲ್‌ ಅಂತಿಮಗೊಳ್ಳದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಇನ್ನು ‘ಪ್ಯಾರಡೈಸ್ ಸರ್ಕಸ್’ ಸಿನಿಮಾದಲ್ಲೂ ನಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next