Advertisement

ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಈಗ ಐಎಎಸ್ ಅಧಿಕಾರಿ

03:45 PM Aug 04, 2021 | ಗಣೇಶ್ ಹಿರೇಮಠ |
ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಕಷ್ಟ-ಕಾರ್ಪಣ್ಯಗಳು ಎದುರಾದರೂ ಸಾಧನೆಯ ಶಿಖರವನ್ನೇರಬಹುದು. ಗುರಿ ತಲುಪಲು ಬಡತನ ಅಡ್ಡಿಯಾಗದು ಎನ್ನುವ ಮಾತು ಸಾಕಷ್ಟು ಸಾರಿ ಸಾಬೀತಾಗಿದೆ. ಈ ಮೇಲಿನ ಮಾತುಗಳಿಗೆ ಸಾಕ್ಷಿ ಎಂಬಂತೆ ಕಾಣುತ್ತಿದ್ದಾರೆ ನಮ್ಮ ಕಣ್ಮುಂದೆ ಇರುವ ಈ ಸಾಧಕ. ಹೌದು, ಈತ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದವ. ಚಪ್ಪಲಿ ಅಂಗಡಿಯಲ್ಲಿ ಬೆವರು ಸುರಿಸಿ ದುಡಿದವ, ಶಾಲೆಗಾಗಿ ದಿನನಿತ್ಯ ಹತ್ತಾರೂ ಕಿ.ಮೀ ಪಯಣಿಸಿದವ. ಈತನ ಪಾಲಿಗೆ ಬಡತನ ಎನ್ನುವುದು ಒಂದು ಸಮಸ್ಯೆಯೇ ಆಗಲಿಲ್ಲ. ಕಷ್ಟ ಪಟ್ಟು ಓದಿ ಕಿರಿಯ ವಯಸ್ಸಿನಲ್ಲಿಯೇ ಯುಪಿಎಸ್ಸಿ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡವ...
Now pay only for what you want!
This is Premium Content
Click to unlock
Pay with

ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಕಷ್ಟ-ಕಾರ್ಪಣ್ಯಗಳು ಎದುರಾದರೂ ಸಾಧನೆಯ ಶಿಖರವನ್ನೇರಬಹುದು. ಗುರಿ ತಲುಪಲು ಬಡತನ ಅಡ್ಡಿಯಾಗದು ಎನ್ನುವ ಮಾತು ಸಾಕಷ್ಟು ಸಾರಿ ಸಾಬೀತಾಗಿದೆ. ಈ ಮೇಲಿನ ಮಾತುಗಳಿಗೆ ಸಾಕ್ಷಿ ಎಂಬಂತೆ ಕಾಣುತ್ತಿದ್ದಾರೆ ನಮ್ಮ ಕಣ್ಮುಂದೆ ಇರುವ ಈ ಸಾಧಕ. ಹೌದು, ಈತ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದವ. ಚಪ್ಪಲಿ ಅಂಗಡಿಯಲ್ಲಿ ಬೆವರು ಸುರಿಸಿ ದುಡಿದವ, ಶಾಲೆಗಾಗಿ ದಿನನಿತ್ಯ ಹತ್ತಾರೂ ಕಿ.ಮೀ ಪಯಣಿಸಿದವ. ಈತನ ಪಾಲಿಗೆ ಬಡತನ ಎನ್ನುವುದು ಒಂದು ಸಮಸ್ಯೆಯೇ ಆಗಲಿಲ್ಲ. ಕಷ್ಟ ಪಟ್ಟು ಓದಿ ಕಿರಿಯ ವಯಸ್ಸಿನಲ್ಲಿಯೇ ಯುಪಿಎಸ್ಸಿ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡವ. ಈತನ ಹೆಸರು ಶುಭಂ ಗುಪ್ತಾ.

Advertisement

ಶುಭಂ ಗುಪ್ತಾ ಎದೆಗುಂದದ ಛಲಗಾರ. ಅಂದುಕೊಂಡಿದ್ದ ಕೆಲಸ ಮುಗಿಯೋವರೆಗೆ ವಿಶ್ರಮಿಸದ ಶ್ರಮಗಾರ. ರಾಜಸ್ಥಾನದ ಜೈಪುರಿನಲ್ಲಿ ಜನಿಸಿದ ಶುಭಂ ಅವರದು ಆರ್ಥಿಕವಾಗಿ ಸದೃಢವಾದಂತಹ ಕುಟುಂಬವಲ್ಲ. ಹೊಟ್ಟೆ-ಬಟ್ಟೆಗೆ ಕೊರತೆ ಇಲ್ಲದಿದ್ದರೂ ಆರ್ಥಿಕವಾಗಿ ಸಮಸ್ಯೆ ಇದ್ದೆ ಇತ್ತು. ಭದ್ರವಾದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇವರ ತಂದೆ ಮಹಾರಾಷ್ಟ್ರದ ಪುಟ್ಟ ಹಳ್ಳಿಯೊಂದಕ್ಕೆ ವಲಸೆ ಹೋಗುತ್ತಾರೆ.

ಮಹಾರಾಷ್ಟ್ರದ ಹಳ್ಳಿಗೆ ವಲಸೆ ಬಂದ ಶುಭ ಕುಟುಂಬ ಅಲ್ಲಿಯೇ ನೆಲೆಯೂರಿ ಸುಂದರ ಭವಿಷ್ಯದ ಕನಸು ಕಾಣುತ್ತದೆ. ಆದರೆ, ಅಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇಲ್ಲದಿರುವುದು ಶುಭಂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಕಾರಣ ಮರಾಠಿ ಮಾಧ್ಯಮದಲ್ಲಿ ಓದುವುದು ಈತನಿಗೆ ಕಷ್ಟವಾಗುತ್ತದೆ. ಹೀಗಾಗಿ ಕೊನೆಗೆ ವಾಪಿ ಎಂಬಲ್ಲಿಯ ಶಾಲೆಯೊಂದಕ್ಕೆ ಪ್ರವೇಶ ಪಡೆದ ಶುಭಂಗೆ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಈ ಶಾಲೆ ಮನೆಯಿಂದ ಬಹು ದೂರ. ಹೀಗಾಗಿ ಪ್ರತಿ ನಿತ್ಯ ಟ್ರೈನ್ ನಲ್ಲಿ ಪ್ರಯಾಣ. ಸಹೋದರಿ ಜೊತೆ ಮುಂಜಾನೆ 6 ಗಂಟೆಯಿಂದ ಮನೆಯಿಂದ ಹೊರಟರೆ ಸಾಯಂಕಾಲ ವಾಪಸ್ ಬರುತ್ತಿದ್ದರು. ದಿನದ ಹೆಚ್ಚಿನ ಸಮಯ ಪ್ರಯಾಣದಲ್ಲಿ ಕಳೆದು ಹೋಗುತ್ತಿತ್ತು.

ಚಪ್ಪಲಿ ಅಂಗಡಿಯಲ್ಲಿ ಕೆಲಸ :
ಶುಭಂ 8 ರಿಂದ 12ನೇ ತರಗತಿ ವರೆಗೆ ವಿಪಾ ಶಾಲೆಯಲ್ಲಿ ಓದುತ್ತಾನೆ. ಇದೇ ವೇಳೆ ಆತನ ತಂದೆ ಹೊಸ ಬ್ಯುಸಿನೆಸ್ ಶುರು ಮಾಡುತ್ತಾರೆ. ಮಹಾರಾಷ್ಟ್ರದ ಧನು ರಸ್ತೆಯಲ್ಲಿ ಪುಟ್ಟ ‘ಶೂ’ ಅಂಗಡಿಯೊಂದನ್ನು ತೆರೆಯುತ್ತಾರೆ. 12 ನೇ ತರಗತಿ ನಂತರ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತ ಅಪ್ಪನಿಗೆ ನೆರವಾಗುತ್ತಾನೆ. ಗ್ರಾಹಕರ ಕಾಲುಗಳಿಗೆ ಶೂ ತೊಡಿಸುತ್ತ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದ. ಪಿಯುಸಿ ನಂತರ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ ಶುಭಂ, ಅಲ್ಲಿಯೇ ಬಿ.ಕಾಂ ಹಾಗೂ ಎಮ್ ಕಾಂ ಪದವಿ ಪಡೆಯುತ್ತಾನೆ. ಇದಾದ ನಂತರ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾನೆ.

ನಾಲ್ಕನೇ ಪ್ರಯತ್ನದಲ್ಲಿ ಆರನೇ Rank :
ಮೊದಲ ಪ್ರಯತ್ನಕ್ಕೆ ಎಲ್ಲವೂ ಸಿಗುವುದಿಲ್ಲ ಎನ್ನುವುದು ಶುಭಂ ಜೀವನದಲ್ಲೂ ಸತ್ಯವಾಯಿತು. ಮೊದಲ ಪ್ರಯತ್ನದಲ್ಲಿ ವಿಫಲಗೊಳ್ಳುವ ಇವರು 2016 ರಲ್ಲಿ ಎರಡನೇ ಭಾರಿ ಯುಪಿಎಸ್ಸಿ ಪರೀಕ್ಷೆ ಬರೆದು 366 Rank ಪಡೆದು ಪಾಸ್ ಆಗುತ್ತಾರೆ. ಇದರ ಫಲವಾಗಿ ಭಾರತೀಯ ಅಡಿಟ್ ಹಾಗೂ ಅಕೌಂಟ್ ಇಲಾಖೆಯಲ್ಲಿ ನೇಮಕಗೊಳ್ಳುತ್ತಾರೆ. ಆದರೆ, ಶುಭಂ ಅವರ ಕನಸು ಜಿಲ್ಲಾಧಿಕಾರಿಯಾಗುವುದಾಗಿತ್ತು. ಅದಕ್ಕಾಗಿ ಮತ್ತೆ ಪರೀಕ್ಷೆಗೆ ಸಜ್ಜಾಗುತ್ತಾರೆ. ಆದರೆ, ಮೂರನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಕೂಡ ಪಾಸಾಗುವುದಿಲ್ಲ. ಇದರಿಂದ ಎದೆಗುಂದದ ಅವರು 2018 ರಲ್ಲಿ ನಾಲ್ಕನೇ ಬಾರಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿರುತ್ತದೆ. 6 ನೇ ರ್ಯಾಂಕ್ ಪಡೆದು ಪಾಸಾದ ಶುಭಂ ತರಬೇತಿ ಮುಗಿಸಿಕೊಂಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ನಿಜವಾದ ಸಾಧನೆ ಅಂದ್ರೆ ಇದೆ ಅಲ್ವಾ ? ಶುಭಂ ರಿಯಲ್ ಸ್ಟೋರಿ ಹಲವು ಯುವಕರಿಗೆ ಸ್ಫೂರ್ತಿಯಾಗುವಂತಿದೆ. ಯುಪಿಎಸ್ಸಿ ನಮ್ಮಂದಿ ಸಾಧ್ಯವಾಗದು ಎಂದು ಯೋಚಿಸುವ ವಿದ್ಯಾರ್ಥಿಗಳು ಶುಭಂ ಅವರಿಂದ ಸ್ಫೂರ್ತಿ ಪಡೆಯಬಹುದಾಗಿದೆ.

*ಗಣೇಶ್ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.