Advertisement

ಫಾರೂಕ್‌, ಒಮರ್‌ ಭೇಟಿಗೆ ಅವಕಾಶ

10:53 AM Oct 07, 2019 | sudhir |

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದು ಬಳಿಕ ಗೃಹಬಂಧನದಲ್ಲಿರುವ ನ್ಯಾಷನಲ್‌ ಕಾನ್ಫರೆನ್ಸ್‌(ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾರನ್ನು ಭೇಟಿಯಾಗಲು ಪಕ್ಷದ ನಿಯೋಗಕ್ಕೆ ಜಮ್ಮು-ಕಾಶ್ಮೀರ ಆಡಳಿತ ಒಪ್ಪಿಗೆ ನೀಡಿದೆ. ಅದರಂತೆ, ಎನ್‌ಸಿ ಪ್ರಾಂತೀಯ ಅಧ್ಯಕ್ಷ ದೇವೇಂದರ್‌ ಸಿಂಗ್‌ ರಾಣಾ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರುಳ್ಳ ನಿಯೋಗವು ಜಮ್ಮುವಿನಿಂದ ರವಿವಾರ ಬೆಳಗ್ಗೆಯೇ ವಿಮಾನದ ಮೂಲಕ ಶ್ರೀನಗರಕ್ಕೆ ತೆರಳಿ, ಪಕ್ಷದ ವರಿಷ್ಠರನ್ನು ಭೇಟಿಯಾಗಲಿದೆ.ಇದಕ್ಕೆ ಸಂಬಂಧಿಸಿದಂತೆ ರಾಣಾ ಅವರು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಂದಲೇ ಅನುಮತಿ ಪಡೆದಿದ್ದಾರೆ. ಪ್ರಸ್ತುತ 81 ವರ್ಷದ ಫಾರೂಕ್‌ ಅಬ್ದುಲ್ಲಾ ತಮ್ಮ ಶ್ರೀನಗರದ ನಿವಾಸದಲ್ಲಿ ಗೃಹಬಂ ಧನದಲ್ಲಿದ್ದರೆ, ಒಮರ್‌ರನ್ನು ರಾಜ್ಯ ಅತಿಥಿ ಗೃಹದಲ್ಲಿ ವಶದಲ್ಲಿರಿಸಲಾಗಿದೆ.

Advertisement

ಶೀಘ್ರ ಬಿಡುಗಡೆ: ಈ ನಡುವೆ, ಕಣಿವೆ ರಾಜ್ಯದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿ ರುವ ನಾಯಕರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕ ರಾಮ್‌ಮಾಧವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next