Advertisement

4ರ ಪೋರ ಕಿರಿಯ ಲೇಖಕ : ಹನಿಕೂಂಬ್‌ ಪುಸ್ತಕದ ಕತೃ ಅಯಾನ್‌ ಗೆ ಗೌರವ

04:00 AM Jun 06, 2018 | Team Udayavani |

ಲಖೀಂಪುರ (ಅಸ್ಸಾಂ) : ಎರಡು ಸಾಲುಗಳನ್ನು ಸರಿಯಾಗಿ ಮಾತನಾಡಲು ಬಾರದಿರುವ ವಯಸ್ಸಿನಲ್ಲಿ ಅಸ್ಸಾಂನ ಬಾಲಕನೊಬ್ಬ ‘ದೇಶದ ಅತಿ ಕಿರಿಯ ಲೇಖಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. 4 ವರ್ಷ ವಯಸ್ಸಿನ ಅಯಾನ್‌ ಗೊಗೊಯ್‌ ಗೊಹೇನ್‌ ಈ ಸಾಧನೆ ಮಾಡಿರುವ ಬಾಲಕ. ಈ ಪುಟ್ಟ ಬಾಲಕ ಬಿಡುಗಡೆ ಮಾಡಿರುವ ‘ಹನಿಕೂಂಬ್‌’ ಪುಸ್ತಕ ಆತನನ್ನು ಈ ಗೌರವಕ್ಕೆ ಪಾತ್ರವಾಗಿಸಿದೆ.

Advertisement

ಲಖೀಂಪುರದ ಸೈಂಟ್‌ ಮೇರೀಸ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಯಾನ್‌ ಕಳೆದ ಜನವರಿಯಲ್ಲಿ ಹನಿಕೂಂಬ್‌ ಪುಸ್ತಕ ಬಿಡುಗಡೆ ಮಾಡಿದ್ದ. ಇದರಲ್ಲಿ 30 ಪುಟ್ಟ ಪುಟ್ಟ ಕಥೆಗಳಿವೆ. ಜೊತೆಗೆ ಅಯಾನ್‌ ರಚಿಸಿರುವ ಸಚಿತ್ರ ವಿವರಣೆಯೂ ಇದೆ. ಪುಸ್ತಕದ ಬೆಲೆ 250 ರೂ. ಈ ಪುಸ್ತಕವನ್ನು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಗುರುತಿಸಿ ಅಯಾನ್‌ ಗೆ ಪ್ರಶಸ್ತಿ ಪತ್ರ ಮತ್ತು ಫ‌ಲಕವನ್ನು ನೀಡಿ ಗೌರವಿಸಿದೆ. 

ಅಯಾನ್‌ ತನ್ನ ಅಜ್ಜ, ಅಜ್ಜಿ ಜೊತೆ ವಾಸಿಸುತ್ತಿದ್ದಾನೆ. ಆತನ ಪೋಷಕರು ಮಿಜೋರಾಂನಲ್ಲಿ ನೆಲೆಸಿದ್ದಾರೆ. ಆತ ತನ್ನ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ತನಗೆ ಖುಷಿ ಎನಿಸಿದ ವಿಷಯಗಳ ಬಗ್ಗೆ ಬರೆಯುತ್ತಾನೆ ಎಂದು ಆತನ ಅಜ್ಜ ಹೇಳುತ್ತಾರೆ. ಅಯಾನ್‌ ಗೆ ಆತನ ಅಜ್ಜನೇ ಮಾದರಿ ವ್ಯಕ್ತಿ ಮತ್ತು ನಾಯಕನಂತೆ. ಅಯಾನ್‌ ಒಬ್ಬ ಅಚ್ಚರಿಯ ಮಗು ಎಂದು ಆತನ ಅಜ್ಜ ಪುರ್ನೋ ಕಾಂತ ಗಗೋಯ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next