Advertisement

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

08:39 AM May 16, 2024 | Team Udayavani |

ರೀಸಿ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಹಾಜಿ ಕರಮ್‌ ದಿನ್‌ ಅವರಿಗೀಗ 102 ವರ್ಷ ವಯಸ್ಸು. ಆದರೆ ಕ್ರಿಕೆಟ್‌ ಮೇಲಿನ ಅವರ ಪ್ರೀತಿ, ಉತ್ಸಾಹ ಇನ್ನೂ ಬತ್ತಿಲ್ಲ. ಈಗಲೂ ಸ್ಥಳೀಯವಾಗಿ ಕ್ರಿಕೆಟ್‌ ಆಡುತ್ತಿರುವ ಅವರು ಅಸಾಮಾನ್ಯ ಸಾಧನೆಯಿಂದ ಗಮನ ಸೆಳೆದಿದ್ದಾರೆ.

Advertisement

1922ರಲ್ಲಿ ಜನಿಸಿರುವ ಹಾಜಿ ಕರಮ್‌ ದಿನ್‌, ಸ್ಥಳೀಯ ಕ್ರಿಕೆಟ್‌ ಮೈದಾನದಲ್ಲಿ ಅಭ್ಯಾಸಕ್ಕಾಗಿ ಬರುವ ಯುವಕರ ಜತೆಗೂಡಿ ತಾವೂ ಆಡುತ್ತಿದ್ದಾರೆ. ಕಾಲಿಗೆ ಪ್ಯಾಡ್‌ ಕಟ್ಟಿಕೊಂಡು, ಬ್ಯಾಟ್‌ ಎತ್ತಿಕೊಂಡು ಆಟದಲ್ಲಿ ತೊಡಗುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರ ಕ್ರಿಕೆಟ್‌ ಮೇಲಿನ ಪ್ರೀತಿ ನಮಗೆಲ್ಲ ಸ್ಫೂರ್ತಿ ತುಂಬುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಈ ಬಗ್ಗೆ ಮಾತನಾಡಿರುವ ಹಾಜಿ, “ನಾನು ಕ್ರಿಕೆಟ್‌ ಆಡುವುದನ್ನು ಇಷ್ಟಪಡುತ್ತೇನೆ. ಯುವಕರು ಹೇಗೆ ಆಡುತ್ತಾರೆ ಎಂದು ನೋಡಲು ಇಲ್ಲಿಗೆ ಬರುತ್ತೇನೆ. ನನ್ನ ವಯಸ್ಸಿನವರು ಇಲ್ಲಿ ಯಾರೂ ಇಲ್ಲ. ಅವರೆಲ್ಲ ಈಗ ವಿಧಿವಶರಾಗಿದ್ದಾರೆ’ ಎಂದರು.

ಹಾಜಿಯವರ ಮಗ, ಮೊಮ್ಮಗ ಸೇರಿದಂತೆ ಪರಿವಾರವೇ ಕ್ರಿಕೆಟ್‌ ಆಡಲು ಬರುತ್ತದೆ. ಆಗ ಹಾಜಿ ಕರಮ್‌ ಕೂಡ ಆಗಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next