ಮುಂಬಯಿ, ಫೆ. 18: ಮೀರಾರೋಡ್ ಪೂರ್ವದ ಭಾರತಿ ಪಾರ್ಕಿನ, ಶ್ರೀ ಲಕ್ಷ್ಮೀನಾರಾಯಣ ಮಂದಿರ ಮಾರ್ಗ, ಯುನಿಟ್ ಅಪಾರ್ಟ್‌ಮೆಂಟ್‌ನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ 19ನೇ ವಾರ್ಷಿಕ ಮಂಗಳ್ಳೋತ್ಸವದ ಅಂಗವಾಗಿ ಫೆ. 15ರಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೆಯು ವಿವಿಧ ಪೂಜಾ ಕೈಂಕರ್ಯದೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕೃಷ್ಣರಾಜ ತಂತ್ರಿ ಅವರ ಪೌರೋಹಿತ್ಯದಲ್ಲಿ ಗಣಹೋಮ, ಕಲಶ ಪ್ರತಿಸ್ಥಾಪನೆ, ದೀಪಪ್ರಜ್ವಲನೆ, ಏಕಾಹ ಭಜನೆಗೆ ಚಾಲನೆ, ಮಧ್ಯಾಹ್ನ ಮಹಾ ಆರತಿ ತದನಂತರ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆವಿತರಣೆಯಾಯಿತು. ವಸಂತ ಕೋಟ್ಯಾನ್ ದಂಪತಿ ಮತ್ತು ಶಂಕರ ಶೇರಿಗಾರ್ ದಂಪತಿ ಪೂಜಾವ್ರತ ಕೈಗೊಂಡಿದ್ದರು.
ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಅಧ್ಯಕ್ಷ ಹರೀಶ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಮಾಧವ ಬಿ. ಐಲ್, ಕೋಶಾಧಿಕಾರಿ ಸುಂದರ ಎ. ಪೂಜಾರಿ, ಉಪಾಧ್ಯಕ್ಷ ರಮೇಶ್ ಎಸ್. ಅಮೀನ್, ಜತೆ ಕಾರ್ಯದರ್ಶಿ ಸಂಪತ್ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಭಾಸ್ಕರ ಕುಂದರ್, ಭುವಾಜಿ ಶ್ರೀಧರ ಶೆಟ್ಟಿ, ಜಯಶೀಲ ಬಿ. ತಿಂಗಳಾಯ ಮಹಿಳಾ ವಿಭಾಗದ
ಕಾರ್ಯಧ್ಯಕ್ಷೆ ವಾರಿಜಾ ಜಿ. ಪೂಜಾರಿ, ಕಾರ್ಯದರ್ಶಿ ಸಂಗೀತಾ ಎಂ. ಐಲ್, ಆರ್ಚಕರಾದ ಜನಾರ್ಧನ ಪೂಜಾರಿ, ಶಂಕರ ಬಿ. ಶೇರಿಗಾರ್, ಕಾರ್ಯಕಾರಿ ಸಮಿತಿ, ಸದಸ್ಯರಾದ ಮಾಧವ ಸಿ. ಕೋಟ್ಯಾನ್, ಸುದರ್ಶನ್‌ರಾಜ್ ಕೊಡಿಯಾಲ್ ಬೈಲ್ , ವಸಂತ್ ಸಿ. ಕೋಟ್ಯಾನ್, ಹೇಮಂತ್ ಮುಚ್ಚಾರು, ಸುರೇಶ್ ಜೆ. ಕರ್ಕೇರ, ಜಿತೇಂದ್ರ ಏ. ಸನಿಲ್ , ಶಶಿಕಲಾ ಎಸ್. ಶೆಟ್ಟಿ, ವಿನೋದಾ ಎಂ. ಕೋಟ್ಯಾನ್, ಗೀತಾ ಎಸ್. ಪೂಜಾರಿ, ಕಲಾವತಿ ವಿ. ತಿಂಗಳಾಯ, ಕುಶಲಾ ಎಂ. ಬಂಗೇರ, ಲಕ್ಷ್ಮೀ ಜೆ. ಸನಿಲ್ , ಮನೋರಮಾ ಆರ್. ಅಮೀನ್, ಪ್ರತಿಭಾ ಕೋಟ್ಯಾನ್, ರತ್ನಾ ಎನ್. ಪೂಜಾರಿ, ಸರೋಜಿನಿ ಎಸ್. ಕೋಟ್ಯಾನ್, ನಳಿನಿ ಜಿ. ಪೂಜಾರಿ, ಉಷಾ ವಿ. ಶೆಟ್ಟಿ, ವಿನಯಾ ಎಸ್. ಸನಿಲ್ ಮೊದಲಾದವರು ಚಾಲನೆ ನೀಡಿದರು. ಸಮಾರಂಭದಲ್ಲಿ ಸ್ಥಳೀಯ ಮಾಜಿ ಶಾಸಕ ನರೇಂದ್ರ ಮೆಹ್ತಾ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕುಣಿತ ಭಜನ ಕಾರ್ಯಕ್ರಮ ನಡೆಯಿತು. ಏಕಾಹ ಭಜನೆಯಲ್ಲಿ ಶ್ರೀ ವಿಠಲ ಭಜನ ಮಂಡಳಿ ಮೀರಾರೋಡ್, ಬಂಟ್ಸ್ ಪೋರಮ್ ಮೀರಾ-ಭಾಯಂದರ್, ಶ್ರೀ ಹನುಮಾನ್ ಮಣಿಕಂಠ ಭಜನ ಮಂಡಳಿ ಭಾಯಂದರ್, ಶ್ರೀ ಹನುಮಾನ್ ಮಹಿಳಾ ಭಜನ ಮಂಡಳಿ ದಹಿಸರ್, ಶ್ರೀ ಕುಲಮಾಹಾಸ್ತಿಯಮ್ಮ ಭಜನ ಮಂಡಳಿ ಮೀರಾ – ಭಾಯಂದರ್, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡು ಸ್ಥಳೀಯ ಸಮಿತಿ, ದುರ್ಗಾ ಭಜನ ಸಮಿತಿ ಸಿಲ್ವರ್‌ಪಾರ್ಕ್ ಮೀರಾರೋಡ್, ಶ್ರೀ ಬಾಲಾಜಿ ಸನ್ನಿಧಿ ಭಜನ ಮಂಡಳಿ ಮೀರಾರೋಡ್, ಬಿಲ್ಲವರ ಅಸೋಸಿಯೇಶನ್ ವಸಾಯಿ ಸ್ಥಳೀಯ ಸಮಿತಿ, ಗೀತಾಂಬಿಕಾ ಭಜನ ಮಂಡಳಿ ಆಸಲ್ಪ ಘಾಟ್‌ಕೋಪರ್, ಜಗದಂಬಾ ಸೇವಾ ಸಮಿತಿ ವಿಕ್ರೋಲಿ, ಶ್ರೀ ವಿಷ್ಣು ಭಜನ ಮಂಡಳಿ ವಿರಾರ್, ಶ್ರೀ ಉಮಾಮಹೇಶ್ವರಿ ಭಜನ ಜರಿಮರಿ ಸಾಕಿನಾಕ, ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ ಅಂಧೇರಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಶನೀಶ್ವರ ಸೇವಾ ಸಮಿತಿ ನೆರೊಲ್, ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಭಜನ ಮಂಡಳಿ ಅಸಲ್ಪ, ಮುಂಬ್ರಾ ಮಿತ್ರ ಭಜನ ಮಂಡಳಿ ಡೊಂಬಿವಲಿ ಇವರು ಪಾಲ್ಗೊಂಡರು. ವಿವಿಧ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಪರಿಸರದ ಸಂಘಟನೆಗಳ ಪ್ರತಿನಿಧಿಗಳು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
-ಚಿತ್ರ-ವರದಿ: ರಮೇಶ್ ಅಮೀನ್.