ಮುಂಬಯಿ: ಮೀರಾ ರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ 6 ನೇ ವಾರ್ಷಿಕ ವಸಂತ ಸಂಸ್ಕೃತ ಸಾಂಸ್ಕೃತಿ ಶಿಬಿರವು ಮೇ 25 ಆರಂಭಗೊಂಡಿದೆ.
ಉಡುಪಿ ಮಠದ ಪರ್ಯಾಯ ಶ್ರೀ ಪಲಿಮಾರು ಶ್ರೀ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ ಹಾಗೂ ಸಲಹೆಯಂತೆ ನಡೆಯುವ ಶಿಬಿರವನ್ನು ಪಲಿಮಾರು ಮಠದ ಪ್ರಧಾನ ಅರ್ಚಕ ಹಾಗೂ ಸಂಪನ್ಮೂಲ ವ್ಯಕ್ತಿ ವಿದ್ವಾನ್ ರಮಣ ಆಚಾರ್ಯ ಅವರು ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಕೃಷ್ಣಮೂರ್ತಿ ಭಟ್, ರಾಘವೇಂದ್ರ ನಕ್ಷತ್ರಿ, ಜಯರಾಮ ಭಟ್, ಪ್ರದೀಪ್ ದೇಗಾಂವ್ಕರ್, ಕರಮ ಚಂದ್ರ ಗೌಡ ಹಾಗೂ ಶಿಬಿರದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ವಿದ್ವಾನ್ ರಮಣ ಆಚಾರ್ಯ ಅವರು ವಸಂತ ಸಂಸ್ಕೃತಿ, ಸಾಂಸ್ಕೃತಿಕ ಶಿಬಿರದ ಬಗ್ಗೆ ವಿವರಿಸಿ, ಮಕ್ಕಳ ಸುಪ್ತ ಪ್ರತಿಭೆಗಳು ವಿಕಾಸ ಹೊಂದಲು ಇಂತಹ ಶಿಬಿರಗಳು ಬಹಳಷ್ಟು ಸಹಕಾರಿಯಾಗಲಿದೆ. ಆಧ್ಯಾತ್ಮಿಕ ಚಿಂತನೆಗಳನ್ನು ವೈಜ್ಞಾನಿಕವಾಗಿ ದೃಢಪಡಿಸಿ ಬೋಧಿಸಿದಾಗ ಮಕ್ಕಳು ಸುಸಂಸ್ಕೃತ ನಾಗರಿಕರಾಗುತ್ತಾರೆ ಎಂದು ನುಡಿದು, ಟ್ರಸ್ಟಿ ಸಚ್ಚಿದಾನಂದ ರಾವ್, ಪ್ರಬಂಧಕ ರಾಧಾಕೃಷ್ಣ ಭಟ್ ಅವರ ಸಹಕಾರದೊಂದಿಗೆ ಹತ್ತು ದಿನಗಳ ಶಿಬಿರಗಳನ್ನು ಉಚಿತವಾಗಿ ಆಯೋಜಿಸಲಾಗಿದೆ. ಜೂ. 3 ರವರೆಗೆ ಸಂಜೆ 4 ರಿಂದ ರಾತ್ರಿ 7 ರವರೆಗೆ ನಡೆಯುವ ಶಿಬಿರದಲ್ಲಿ ಪ್ರತಿದಿನ ಉಚಿತವಾಗಿ ಲಘು ಉಪಾಹಾರ, ಶಾಲಾ ಪರಿಕರ ಹಾಗೂ ಶ್ರೀ ಸನ್ನಿಧಿಯ ಪ್ರಸಾದೊಂದಿಗೆ ಮಕ್ಕಳನ್ನು ಗೌರವಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಿಬಿರಾರ್ಥಿಗಳಿಗೆ ಹಿಂದಿ ಹಾಗೂ ಸಂಸ್ಕೃತಗಳಲ್ಲಿ ಪಾಠ-ಪ್ರವಚನ ಗಳನ್ನು ಕಲಿಸಲಾಗುವುದು. ಜಾತಿ, ಭೇದಗಳಿಲ್ಲದೆ ಎಲ್ಲಾ ಪ್ರಾಂತ್ಯಗಳ 10 ರಿಂದ 18 ನೇ ವಯೋಮಿತಿಯ ಬಾಲಕ- ಬಾಲಕಿಯರು ಭಾಗವಹಿಸ ಬಹುದು. ಶ್ರೀ ಕೃಷ್ಣಷ್ಟೋತ್ತರ ಶತನಾಮ ಸ್ತೊÅàತ್ರ, ರಾಮನಾಮ ವ್ರತ, ಕೃಷ್ಣಾಷ್ಟಕ, 12 ನೇ ಅಧ್ಯಾಯದ ಭಗವದ್ಗೀತಾ, ಸಂಸ್ಕೃತ ಸಂಭಾಷಣೆ, ಸುಭಾಷಿತ, ಕಥೆ, ಹನುಮಾನ್ ಚಾಲೀಸ, ಆಚಾರ-ವಿಚಾರಗಳ ಬಗ್ಗೆ ತಿಳಿಸಲಾಗುವುದು. ಮೊದಲ ದಿನದಲ್ಲಿಯೇ ಸುಮಾರು 50 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿದ್ವಾನ್ ರಮಣ ಆಚಾರ್ಯ ಅವರು ನುಡಿದು, ಪಾಲ್ಗೊಂಡ ಮಕ್ಕಳಿಗೆ ಪಾಲಕರಿಗೆ, ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಚಿತ್ರ-ವರದಿ:
ರಮೇಶ್ ಅಮೀನ್