ಚಾಮರಾಜನಗರ: ಸಾಹಿತಿ, ವಿಚಾರವಾದಿ ಪೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರ ಭಾವಚಿತ್ರಕ್ಕೆ ಶಿವಾಜಿ ನೇತಾಜಿ ಸೇನಾ ಸಮಿತಿಯ ಕಾರ್ಯಕರ್ತರು ಅಭಿಷೇಕ ಮಾಡಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಶುಕ್ರವಾರ ಸೇನಾ ಸಮಿತಿಯ ಪದಾಧಿಕಾರಿಗಳು ಮೀರಾ ಪರ ಜೈಕಾರ ಹಾಕಿದರು. ಬಳಿಕ ಮೀರಾಭಾವಚಿತ್ರಕ್ಕೆ ಹಾಲಾಭಿಷೇಕ ಮಾಡಿದರು. ಮೀರಾ ಮಾಡಿರುವ ಕೆಲಸ ಹಿಂದೂ ವಿರೋಧಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ನೇತಾಜಿ ಸೇನಾ ಸಮಿತಿಯ ಕಾರ್ಯದರ್ಶಿ ಕೃಷ್ಣ ಮಾತನಾಡಿ, ಹಿಂದು ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಇಂಥ ದೇಶದ್ರೋಹಿಗಳಿಗೆ ಮೀರಾ ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ :ಮೀರಾ ರಾಘವೇಂದ್ರ ಬಂಧನಕ್ಕೆ ಒತ್ತಾಯ
ಈ ವೇಳೆ ಶಿವಾಜಿ ನೇತಾಜಿ ಸೇನಾ ಸಮಿತಿ ಅಧ್ಯಕ್ಷ ಆರ್. ಸುಂದರರಾಜ್, ನಗರಸಭಾ ಸದಸ್ಯರಾದ ಶಿವರಾಜು, ರಾಘವೇಂದ್ರ, ಮನೋಜ್ ಪಟೇಲ್, ಮುಖಂಡರಾದ ಚಂದ್ರಶೇಖರ್ ರಾವ್, ಮಾರ್ಕೇಟ್ಕುಮಾರ್, ಕೂಸಣ್ಣ, ಮಹೇಶ್ ಇತರರಿದ್ದರು.