Advertisement
ಅವರು ಮಾ. 19ರಂದು ವಿರಾರ್ ಪಶ್ಚಿಮದ ವಿಷ್ಣು ಪ್ರತಿಭಾ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮೀರಾ -ಡಹಾಣು ಬಂಟ್ಸ್‌ನ 7ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಈ ಬಾರಿ ಯುವ ನಾಯಕ ಅರವಿಂದ್ ಎ. ಶೆಟ್ಟಿಯವರನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಬಹಳಷ್ಟು ಸಂತಸ ನೀಡಿದೆ. ಇವರ ದಕ್ಷ ನೇತೃತ್ವದಲ್ಲಿ ಮತ್ತು ಪದಾಧಿಕಾರಿಗಳು ಮತ್ತು ನಾಲ್ಕು ಪ್ರಾದೇಶಿಕ ವಲಯಗಳ ಅಧ್ಯಕರು ಮತ್ತು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದಲ್ಲಿ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ತನಗೆ ಸಹಕರಿಸಿದ ವಿರಾರ್ ಶಂಕರ್ ಶೆಟ್ಟಿ ಪ್ರಕಾಶ್ ಹೆಗ್ಡೆಯವರಿಗೂ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ಸಮಾಜ ಸೇವರ ಕಾರ್ಪೋರೇಟರ್ ಅರವಿಂದ ಎ. ಶೆಟ್ಟಿ ಅವರನ್ನು ಮೀರಾ – ಡಹಾಣು ಬಂಟ್ಸ್‌ನ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರನ್ನು ಸಂಘದ ನಿಕಟಪೂರ್ವ ಅಧ್ಯಕ್ಷ ಬೊಯಿಸರ್ ಭುಜಂಗ ಶೆಟ್ಟಿಯವರು ಮತ್ತು ವೇದಿಕೆಯ ಗಣ್ಯರು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಗೌರವಿಸಿ ಅಭಿನಂದಿಸಿದರು. ನೂತನ ಅಧ್ಯಕ್ಷ ಅರವಿಂದ ಶೆಟ್ಟಿ ಇವರು ಸದಸ್ಯರೊಂದಿಗೆ ನೇರ ಸಂವಾದ ನಡೆಸಿ, ಸದಸ್ಯರ ಸಲಹೆ-ಸೂಚನೆಗಳನ್ನು ಆಲಿಸಿ, ಸದಸ್ಯರ ಹೆಚ್ಚಳದ ಆವಶ್ಯಕತೆಯನ್ನು ಹೇಳಿ ಎಲ್ಲರ ಸಹಕಾರವನ್ನು ಬಯಸಿದರು.
ಅಲ್ಲದೆ ನೂತನವಾಗಿ ಆಯ್ಕೆಯಾದ ಸರ್ವ ಪದಾಧಿಕಾರಿಗಳು ಮತ್ತು ನಾಲ್ಕು ವಲಯಗಳ ಅಧ್ಯಕ್ಷರುಗಳನ್ನು ಮತ್ತು ಪದಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯ ವತಿಯಿಂದ ಸಂಘದ ನಿರ್ಗಮನ ಅಧ್ಯಕ್ಷರಾದ ಭುಜಂಗ ಶೆಟ್ಟಿ ಬೊಯಿಸರ್ ದಂಪತಿಯನ್ನು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ವೇದಿಕೆಯ ಗಣ್ಯರು ಸಮ್ಮಾನಿಸಿದರು.
ಸ್ಥಳೀಯ ನಗರ ಸೇವಕ ಪ್ರವೀಣ್ ಶೆಟ್ಟಿ ದಂಪತಿಯನ್ನು ಮೀರಾ – ಡಹಾಣು ಬಂಟ್ಸ್ ವತಿಯಿಂದ ಶಾಲು ಹೊದೆಸಿ, ಪುಷ#ಗುತ್ಛ ನೀಡಿ ಗೌರವಿಸಲಾಯಿತು. ನಗರ ಸೇವಕ ಪ್ರವೀಣ್ ಶೆಟ್ಟಿಯವರು ಮಾತನಾಡಿ, ಸಮ್ಮಾನಿಸಿದ್ದಕ್ಕೆ ಕೃತಜ್ಞತೆಗಳು. ಮೀರಾ – ಡಹಾಣು ಬಂಟ್ಸ್‌ನ ನೂತನ ಅಧ್ಯಕ್ಷರಾದ ನಗರ ಸೇವಕ ಅರವಿಂದ್ ಎ. ಶೆಟ್ಟಿ ಮತ್ತು ಅವರ ಬಳಗಕ್ಕೆ ಶುಭ ಹಾರೈಸಿದರು. ಛತ್ರಪತಿ ಶಿವಾಜಿ ಮಹಾರಾಜ್ ಸಾಧನ ಪ್ರಶಸ್ತಿ ಪುರಸ್ಕೃತರಾದ ವಿರಾರ್ ಶಂಕರ್ ಬಿ. ಶೆಟ್ಟಿಯವರನ್ನು ಮೀರಾ-ಡಹಾಣು ಬಂಟ್ಸ್ ನ ನೂತನ ಸಮಿತಿಯು ಶಾಲು ಹೊದೆಸಿ, ಪುಷ#ಗುತ್ಛ ನೀಡಿ ಗೌರವಿಸಿತು.
ಲೇಖಕ ಅರುಣ್ ಶೆಟ್ಟಿ ಎರ್ಮಾಳ್, ಶಂಕರ ಆಳ್ವ, ಶಾಲಿನಿ ಸುಧಾಕರ ಶೆಟ್ಟಿ, ದಿವ್ಯಾ ರೈ, ಗಣೇಶ್ ಆಳ್ವ ಮಾತನಾಡಿದರು. ಕಾರ್ಯಕ್ರಮವನ್ನು ಚಂದ್ರಶೇಖರ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಸಂಪತ್ ಶೆಟ್ಟಿ ವಂದಿಸಿದರು.
ಸಭೆಯಲ್ಲಿ ಸೇರಿರುವ ಸದಸ್ಯರನ್ನು ಕಂಡು ಆನಂದವಾಗುತ್ತಿದೆ. ಜೂಹೂದಾನಿ ದೇವಿಯ ಕೃಪೆಯಿಂದ ಮೀರಾ-ಡಹಾಣುವರೆಗಿನ ಗ್ರಾಮೀಣ ಪ್ರದೇಶದ ಬಂಟ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸುವ ಉದ್ಧೇಶದಿಂದ ಮೀರಾ-ಡಹಾಣು ಬಂಟ್ಸ್‌ನ್ನು ಸ್ಥಾಪಿಸಲಾಗಿದೆ. ಇಂದು ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯಿಂದ ಸಂಘದ ಪುನರ್ ಪ್ರತಿಷ್ಠೆಯಾಗಿದೆ. ನಗರ ಸೇವಕರೊಬ್ಬರು ಸಂಘದ ಸಾರಥ್ಯ ವಹಿಸುತ್ತಿರುವುದು ಅಭಿಮಾನಪಡುವ ವಿಷಯವಾಗಿದೆ. ಅವರಿಂದ ಸಂಘವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ. ಪ್ರಸ್ತುತ ಕಾರ್ಯಕಾರಿ ಸಮಿತಿಯಲ್ಲಿ ಉತ್ಸಾಹಿ ಯುವಕರಿದ್ದಾರೆ. ನಿಮಗೆ ನಮ್ಮೆಲ್ಲರ ಸಹಕಾರ ಸದಾಯಿದೆ. ಮೀರಾ-ಡಹಾಣು ಬಂಟ್ಸ್ ಗ್ರಾಮೀಣ ಪ್ರದೇಶದ ಬಂಟ ಬಾಂಧವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಇದೊಂದು ಗ್ರಾಮೀಣ ಭಾಗದ ಸಮಾಜ ಬಾಂಧವರ ಸಂಸ್ಥೆಯಾಗಿದೆ. ಸಂಸ್ಥೆಯನ್ನು ಒಗ್ಗಟ್ಟಿನಿಂದ ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ.-ವಿರಾರ್ ಶಂಕರ್ ಶೆಟ್ಟಿ,
ಗೌರವಾಧ್ಯಕ್ಷರು, ಮೀರಾ-ಡಹಾಣು ಬಂಟ್ಸ್