Advertisement

ಪಂಚಭೂತಗಳಲ್ಲಿ ನೀರಿಗೆ ಪ್ರಥಮ ಸ್ಥಾನ: ಸಚಿವೆ ಮೀನಾಕ್ಷಿ ಲೇಖಿ

08:28 PM Oct 29, 2022 | Team Udayavani |

ಹೊಸಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ಪಂಚಭೂತಗಳಲ್ಲಿ ನೀರಿಗೆ ಪ್ರಥಮ ಸ್ಥಾನವಿದ್ದು, ಜೀವಜಲ ಸಂರಕ್ಷಣೆಗಾಗಿ ಪ್ರತಿಯೊಬ್ಬ ನಾಗರಿಕರು ಸಂಕಲ್ಪ ಮಾಡಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಲಸಂಕಟ ಎದುರಾಗಲಿದೆ ಎಂದು ಕೇಂದ್ರ ವಿದೇಶಾಂಗ ಮತ್ತು ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಜಲಂ- ಜಲತತ್ವ ಕುರಿತ ಭಾರತೀಯ ಚಿಂತನೆಗಳು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆನಾಧಿ ಕಾಲದಿಂದಲೂ ದೇಶದಲ್ಲಿ ಪ್ರಕೃತಿಯನ್ನು ಪೂಜಿಸುವ ಪರಂಪರೆ ಇದೆ. ನೀರನ್ನು ಮಾತೃತ್ವ ಭಾವನೆಯಿಂದ ಸ್ವೀಕಾರ ಮಾಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ಮಾತ್ರ ಜಲಜೀವವನ್ನು ರಕ್ಷಣೆ ಮಾಡಬಹುದು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಗಂಗಾ-ಯಮುನಾ ಸಂಗಮವನ್ನು ಯಾರು ಮೆರೆಯಬಾರದು. ಆಧುನಿಕ ಜೀವನ ಪದ್ಧತಿಯ ಪರಿಣಾಮ ಸಮುದ್ರ, ನದಿ, ಹಳ್ಳ,ಕೊಳ್ಳಗಳು ಕಲುಷಿತಗೊಳ್ಳುತ್ತಿವೆ. ನದಿಗಳನ್ನು ಪೂಜ್ಯ ಭಾವನೆಯಿಂದ ನೋಡಿದಾಗ ಮಾತ್ರ ನದಿಗಳನ್ನು ಪವಿತ್ರವಾಗಿಡಲು ಸಾಧ್ಯವಾಗಲಿದೆ ಎಂದರು.

ಊಟೋಪೋಚಾರದಿಂದ ಹಿಡಿದು, ಪ್ರತಿಯೊಂದಕ್ಕೆ ನಾವೆಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಅನೇಕ ವಸ್ತುಗಳು ನದಿಗಳಿಗೆ ಮಾರಕವಾಗಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಈಗಾಗಲೇ ನಾವೆಲ್ಲರೂ ಎಚ್ಚರದಿಂದ ನೀರನ್ನು ಮಿತ ಬಳಕೆ ಮಾಡುವುದರ ಜೊತೆಯಲ್ಲಿ ನಾಡಿನ ನದಿಗಳನ್ನು ಸ್ವಚ್ಚತೆ ಕಾಪಾಡಿಕೊಳ್ಳಬೇಕಿದೆ ಎಂದರು.

ಪದ್ಮಶ್ರೀ ಪುರಸ್ಕೃತೆ, ಖ್ಯಾತ ಪರಿಸರವಾದಿ ತುಳಸಿ ಗೌಡ ಮಾತನಾಡಿ, ಬಾಲ್ಯದಿಂದಲೂ ಗಿಡ ಬೆಳೆಸುವುದನ್ನು ಮೈಗೂಡಿಸಿಕೊಂಡ ಪರಿಣಾಮ ಪರಿಸರದ ಬಗ್ಗೆ ನನಗೆ ಅತೀವ ಕಾಳಜಿ ಮೂಡಿತು. ಗಿಡ ಬೆಳೆಸುವುದು ನನಗೆ ತುಂಬಾ ಖಷಿ ಕೊಡುತ್ತದೆ. ನಿಮ್ಮ ಮಕ್ಕಳಿಗೆ ಈಗಿನಿಂದಲೇ ಪರಿಸರದ ಬಗ್ಗೆ ಅರಿವು ಮೂಡಿಸಿ, ಗಿಡ ಬೆಳೆಸುವುದನ್ನು ಕಲಿಸಿ ಎಂದು ಸಲಹೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ಮಾತನಾಡಿ, ಪ್ರಕೃತಿ ಪೂಜೆ ಮಾಡುವುದು ಶಿವನ ಪೂಜೆ ಮಾಡುವುದು ಒಂದೇ ಎಂದ ಅವರು, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಸಬೇಕಿದೆ. ಅರಣ್ಯ ಉಳಿಸುವುದು ಅರಣ್ಯ ಬೆಳಸಬೇಕು. ಜೊತೆಗೆ ನೀರಿನ ಮಹತ್ವ ಅರಿಯಬೇಕು ಎಂದರು.

Advertisement

ಇದನ್ನೂ ಓದಿ : ಅಂಕೋಲಾ : ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ, ದೂರು ದಾಖಲು

ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಮಾತನಾಡಿ, ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಪ್ರಕೃತಿ ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಇದಕ್ಕೆ ಮಹಾಮಾರಿ ಕೋವಿಡ್‌ನಿಂದ ಉತ್ತರ ಕಂಡು ಕೊಂಡಿದ್ದೇವೆ. ಈಗಾಗಲಾದರೂ ನಾವು ಪ್ರಕೃತಿ ಮೇಲೆ ಮಾಡುವ ದಾಳಿಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೀನ್‌ದಯಾಳ್ ಸಂಶೋಧಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್ ಹಾಗೂ ಕನ್ನಡ ವಿವಿಯ ಕುಲಪತಿ ಡಾ.ಸ.ಚಿ.ರಮೇಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ.ಅಲಗೂರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಬಿ.ಸಿ.ಪಾಟೀಲ್ ಸ್ವಾಗತಿಸಿದರು. ಸಂಸದ ವೈ ದೇವೇಂದ್ರಪ್ಪ ಕನ್ನಡ ವಿವಿಯ ಕುಲಸಚಿವ ಡಾ.ಸುಬ್ಬಣ್ಣ ರೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next