Advertisement

ಮೀಡಿಯಂ ಫೋನ್‌

05:13 AM Jun 15, 2020 | Lakshmi GovindaRaj |

ಮೀಡಿಯಂ ಫೋನ್ ‌ಸ್ಯಾಮ್‌ಸಂಗ್‌ ಮಧ್ಯಮ ದರ್ಜೆಯಲ್ಲಿ ಎಂ ಸರಣಿಯ ಫೋನ್‌ಗಳನ್ನು ಹಾಗೂ ಮೇಲ್ಮಧ್ಯಮ ದರ್ಜೆಯ ಫೋನ್‌ಗಳನ್ನು ಎ ಸರಣಿಯಲ್ಲಿಯೂ ಹೊರತರುತ್ತಿದೆ. ಎ ಸರಣಿಯ ಹೊಸ ಫೋನ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ  ಎ31, ಇದೀಗ ಬಿಡುಗಡೆಯಾಗಿದೆ. 

Advertisement

ಸ್ಯಾಮ್‌ಸಂಗ್‌ ಕಂಪನಿ ಎ31ಎಂಬ ಹೊಸ ಫೋನನ್ನು ಇದೀಗ ಭಾರತಕ್ಕೆ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಗೆಲಾಕ್ಸಿ ಎ ಸ್ಮಾರ್ಟ್‌ಫೋನ್‌ನ 3ನೇ ಮಾದರಿಯಾಗಿದೆ. ಗೆಲಾಕ್ಸಿ ಎ31 6.4 ಸೂಪರ್‌ ಅಮೊಲೆಡ್‌ ಇನ್ಫಿನಿಟಿಯು ಡಿಸ್ಪ್ಲೇ ,  48 ಎಂಪಿ ಕ್ವಾಡ್‌ ಕ್ಯಾಮರಾ, ಶಕ್ತಿಶಾಲಿ 5000ಎಂಎಎಚ್‌ ಬ್ಯಾಟರಿಯನ್ನು ಒಳಗೊಂಡಿದೆ. ಈಗಾಗಲೇ ಸ್ಯಾಮ್‌ಸಂಗ್‌ ಗೆಲಾಕ್ಸಿ ಎ71 ಮತ್ತು ಗೆಲಾಕ್ಸಿ ಎ51 ಮಾದರಿಗಳನ್ನು ಸ್ಯಾಮ್‌ಸಂಗ್‌ ಭಾರತಕ್ಕೆ ಬಿಡುಗಡೆ ಮಾಡಿತ್ತು. ಎ 31, ಈ  ಎರಡೂ ಮಾದರಿಗಳಿಗಿಂತ ಕಡಿಮೆ ಬೆಲೆಯ ಫೋನ್‌ ಆಗಿದೆ.

ಪರದೆ ಮತ್ತು ಕ್ಯಾಮರಾ: ಇದು 6.4 ಇಂಚು ಎಫ್ಎಚ್‌ಡಿ+ ಇನ್ಫಿನಿಟಿ- ಯು ಡಿಸ್ಪ್ಲೇ ಹೊಂದಿದ್ದು, ಸೂಪರ್‌ ಅಮೊಲೆಡ್‌ ಪರದೆ ಇದೆ. 48ಎಂಪಿ ಮುಖ್ಯ ಕ್ಯಾಮರಾ ಇದ್ದು, 8ಎಂಪಿ ಅಲ್ಟ್ರಾ ವೈಡ್‌ ಕ್ಯಾಮರಾ 123 ಡಿಗ್ರಿಗಳಷ್ಟು ಅಗಲವಾದ ದೃಶ್ಯವನ್ನು ಹಿಡಿದಿಡಲು ಸಹಾಯಕವಾಗಿದೆ. 5ಎಂಪಿ  ಮೈಕ್ರೋ ಕ್ಯಾಮರಾ ಹತ್ತಿರದ ಚಿತ್ರಗಳನ್ನು ತೆಗೆಯಲು, 5 ಎಂಪಿ ಡೆಪ್ತ್‌ ಕ್ಯಾಮರಾ, ಲೈವ್‌ ಫೋಕಸ್‌ ಶಾಟ್‌ ಗಳನ್ನು ತೆಗೆಯಲು ಅವಕಾಶ ಮಾಡಿಕೊಡುತ್ತದೆ. ಗೆಲಾಕ್ಸಿ ಎ31 20ಎಂಪಿ  ಮುಂಬದಿ ಕ್ಯಾಮರಾ ಹೊಂದಿದೆ. ಇದರಿಂದ ಹೆಚ್ಚು ಸ್ಪಷ್ಟತೆಯ ಸೆಲ್ಫಿಗಳನ್ನು ತೆಗೆಯಲು ಅವಕಾಶವಿದೆ.

ಬ್ಯಾಟರಿ, ಪ್ರೊಸೆಸರ್‌: ಇದು 5000ಎಂಎಎಚ್‌ ಬ್ಯಾಟರಿ ಹೊಂದಿದ್ದು, 22 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್‌ ನೀಡುತ್ತದೆ. ಜೊತೆಗೆ, 15 ವ್ಯಾಟ್‌ ವೇಗದ ಜಾರ್ಜಿಂಗ್‌ ಜೊತೆಗೆ ಬರುತ್ತದೆ. ಯು.ಎಸ್‌.ಬಿ ಟೈಪ್‌ ಸಿ ಪೋರ್ಟ್‌ ಹೊಂದಿದೆ.  ಇದು ಮೀಡಿಯಾಟೆಕ್‌ ಹೀಲಿಯೋ ಪಿ65 ಆಕ್ಟಾ-ಕೋರ್‌ ಪೊ›ಸೆಸರ್‌ ಹೊಂದಿದೆ. ಸ್ಯಾಮ್‌ ಸಂಗ್‌ನ ಎಕ್ಸಿನಾಸ್‌ ಅಥವಾ ಸ್ನ್ಯಾಪ್‌ಡ್ರಾ ಗನ್‌ ಪ್ರೊಸೆಸರ್‌ ಇರದಿರುವುದು ಸ್ವಲ್ಪ ಆಶ್ಚರ್ಯವೇ. 128ಜಿಬಿ ಆಂತರಿಕ ಸಂಗ್ರಹ ಹೊಂದಿದ್ದು, 512  ಜಿಬಿವರೆಗೆ ಎಸ್ಡಿ ಕಾರ್ಡ್‌ ಹಾಕಿಕೊಳ್ಳಬಹುದು ಅಲ್ಲದೇ 6ಜಿಬಿ ರ್ಯಾಮ್‌ ಹೊಂದಿದೆ. ಆನ್‌- ಸ್ಕ್ರೀನ್‌ ಫಿಂಗರ್‌ ಪ್ರಿಂಟ್‌ ಸ್ಕಾನರ್‌ ಇರುವುದು ವಿಶೇಷ. ಅಂಡ್ರಾಯ್ಡ್‌ 10 ಕಾರ್ಯಾಚರಣೆ ಇದೆ.

ಬೆಲೆ ಮತ್ತು ಲಭ್ಯತೆ: ಗೆಲಾಕ್ಸಿ ಎ31 ನೀಲಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರುತ್ತದೆ. ರಿಟೇಲ್‌ ಮಳಿಗೆಗಳು, ಸ್ಯಾಮ್‌ ಸಂಗ್‌ ಒಪೇರಾ ಹೌಸ್‌, ಸ್ಯಾಮ್‌ಸಂಗ್‌.ಕಾಮ್‌ ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಟಾಟಾ ಕ್ಲಿಕ್‌ ಸೇರಿ ಆನ್‌ಲೈನ್‌  ಸ್ಟೋರ್‌ಗಳಲ್ಲಿ ದೊರಕುತ್ತದೆ. ಇದರ ಬೆಲೆ 21,999 ರೂ.

Advertisement

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next