Advertisement
ಮಾನಸಿಕ ಒತ್ತಡ ನಿವಾರಿಸುವಲ್ಲಿ ಧ್ಯಾನದಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಬೆಳಗ್ಗೆ, ಸಂಜೆ ಅರ್ಧ ಅಥವಾ ಮುಕ್ಕಾಲು ಗಂಟೆ ಧ್ಯಾನ ಮಾಡುವುದು ಒಳಿತು ಎಂಬುದನ್ನು ಮಾಲೂರು ತಾಲೂಕಿನ ಪ್ರತಿಯೊಬ್ಬರಿಗೂ ಮನನ ಮಾಡಿಸುವ ಅಭಿಯಾನ ಆರಂಭವಾಗಿದೆ.
Related Articles
Advertisement
80 ಸಾವಿರ ಮಂದಿ ಕುಳಿತು ಧ್ಯಾನ: ತೆಲಂಗಾಣ ಹೈದರಾಬಾದಿನ ರಂಗಾರೆಡ್ಡಿ ಜಿಲ್ಲೆಯ ಕನ್ಹಾ ಶಾಂತಿ ವನದಲ್ಲಿ 1945 ರಲ್ಲಿ ಆರಂಭವಾದ ಸಂಸ್ಥೆಯು 1500 ಎಕರೆಗಳ ವಿಶಾಲ ಜಾಗದಲ್ಲಿ ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಕೇಂದ್ರವು ನೆಲೆಗೊಂಡಿದೆ. ಒಮ್ಮೆಲೆ 80 ಸಾವಿರ ಮಂದಿ ಕುಳಿತು ಧ್ಯಾನ ಮಾಡುವ ಮಂದಿರವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ.
2023ರ ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿರುವ ಕಮಲೇಶ್ ಡಿ. ಪಟೇಲ್ (ದಾಜಿ) ಇದರ ನೇತೃ ತ್ವವಹಿಸಿ ದ್ದಾರೆ. 160 ದೇಶಗಳಲ್ಲಿ 15 ಲಕ್ಷ ಸ್ವಯಂ ಸೇವಕರು ಹಾಗೂ ಧ್ಯಾನ ಕಲಿಸಲು 10 ಸಾವಿರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಾ ತರಬೇತುದಾರರಿದ್ದಾರೆ. ಈ ಸಂಸ್ಥೆಯಿಂದ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ಮಾಧುರಿ ಎಂಬುವರು ಹೊತ್ತುಕೊಂಡಿದ್ದಾರೆ.
ಏನಿದು ಅಭಿಯಾನ: ಪ್ರತಿ ಮನೆಯಲ್ಲಿ ಧ್ಯಾನ, ಪ್ರತಿದಿನ ಧ್ಯಾನ ಅಭಿಯಾನವು ಈಗಾಗಲೇ ಮಧ್ಯಪ್ರ ದೇಶ ರಾಜ್ಯದ 1.2 ಕೋಟಿ ಜನರಿಗೆ ತಲುಪಿದೆ. ತೆಲಂಗಾಣ ಹಾಗೂ ತಮಿಳುನಾಡಿನ ಚೆಂಗಲ್‌ಪೇಟೆ ಜಿಲ್ಲೆಯಲ್ಲಿ ಹಲವು ಲಕ್ಷ ಮಂದಿ ಈ ಅಭಿಯಾನದ ಲಾಭ ಪಡೆದುಕೊಂಡು ನಿತ್ಯವೂ ಧ್ಯಾನಸ್ಥರಾಗುತ್ತಿದ್ದಾರೆ. ಇದೇ ರೀತಿಯ ಅಭಿಯಾನವನ್ನು ಮಾಲೂರಿನ ತಾಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿ ಮನೆಯ ಪ್ರತಿಯೊಬ್ಬರಿಗೂ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಆಯ್ಕೆಗೆ ಕಾರಣವೇನು?: ಮಾಲೂರು ತಾಲೂಕಿನಲ್ಲಿ ಹಾರ್ಟ್‌ಫುಲ್‌ನೆಸ್ ಸಂಸ್ಥೆ ಯಲ್ಲಿ ತರಬೇತಿ ಪಡೆದ 200ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಿದ್ದಾರೆ. ಈಗಾಗಲೇ 100 ಮಂದಿ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಿಂದ ಪ್ರಾಯೋಗಿಕವಾಗಿ ಅಭಿಯಾನವನ್ನು ನಡೆಸಲು ಸುಗಮವಾಗುತ್ತದೆ ಎಂಬ ಕಾರಣಕ್ಕೆ ಮಾಲೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 2 ತಿಂಗಳಿನಿಂದಲೂ ತರಬೇತುದಾರರು ಅಭಿಯಾನದ ಚಟುವಟಿಕೆ ಆರಂಭಿಸಿದ್ದು, ಮಾಲೂರಿನ ಜನತೆಗೆ ಧ್ಯಾನ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಆರು ತಿಂಗಳೊಳಗಾಗಿ ಮಾಲೂರಿನ 200ಕ್ಕೂ ಗ್ರಾಮಗಳನ್ನು ತಲುಪಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಜಿಪಂ ಮಾಲೂರು ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇಡೀ ತಾಲೂಕಿನಲ್ಲಿ ಅಭಿಯಾನ ಪೂರ್ಣಗೊಂಡ ನಂತರ ಇದರ ಪ್ರಯೋಜನಗಳ ಆಧಾರದ ಮೇಲೆ ಇಡೀ ರಾಜ್ಯ ದಲ್ಲಿ ಪ್ರತಿ ಮನೆಯಲ್ಲಿ ಧ್ಯಾನ ಪ್ರತಿ ದಿನ ಧ್ಯಾನ ಅಭಿಯಾನ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಮಾಲೂರು ತಾಲೂಕಿನಲ್ಲಿ ನಮ್ಮ ಹಾರ್ಟ್‌ಫುಲ್‌ನೆಸ್ ಸಂಸ್ಥೆಯಿಂದ ತರಬೇತಿ ಪಡೆದ ಸ್ವಯಂ ಸೇವಕರು ಹೆಚ್ಚಾಗಿದ್ದುದ್ದರಿಂದ ಪ್ರತಿ ಮನೆಯಲ್ಲಿ ಧ್ಯಾನ, ಪ್ರತಿ ದಿನ ಧ್ಯಾನ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 25ಕ್ಕೂ ಹೆಚ್ಚು ಗ್ರಾಮ ಧ್ಯಾನಸ್ಥ ಗ್ರಾಮಗಳಾಗಿಸಿದ್ದೇವೆ. 200 ಗ್ರಾಮ ತಲು ಪುವ ಗುರಿಯೊಂದಿಗೆ ಇಡೀ ತಾಲೂಕಿನ ಜನರನ್ನು ಜಾತಿ, ಧರ್ಮ, ವರ್ಗ, ವರ್ಣ, ರಾಜಕೀಯವನ್ನು ಮೀರಿ ಧ್ಯಾನಸ್ಥರನ್ನಾಗಿಸಲು ಅಭಿಯಾನದಡಿ ಶ್ರಮಿಸುತ್ತಿದ್ದೇವೆ. – ಆರ್. ಮಾಧುರಿ, ವಲಯ ಸಮನ್ವಯಾಧಿಕಾರಿ, ಹಾರ್ಟ್‌ಫುಲ್‌ನೆಸ್ ಸಂಸ್ಥೆ, ಕೋಲಾರ.
– ಕೆ.ಎಸ್.ಗಣೇಶ್