Advertisement

ಎಂಎಸ್‌ಐಎಲ್‌ನಿಂದ ಔಷಧ ಮಳಿಗೆ ಆರಂಭ

02:16 PM Jul 03, 2022 | Team Udayavani |

ಬೆಂಗಳೂರು: ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ವತಿಯಿಂದಲೇ ಪ್ರತ್ಯೇಕವಾಗಿ ಔಷಧ ಮಳಿಗೆ ತೆರೆಯಲು ನಿರ್ಧರಿಸಲಾಗಿದೆ ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯಾದ್ಯಂತ 87 ಜನೌಷಧಿ ಮಳಿಗೆಯನ್ನು ನಡೆಸಲಾಗುತ್ತಿದೆ. 2021-22ನೇ ಸಾಲಿನಲ್ಲಿ 10.81 ಕೋಟಿ ರೂ. ವಹಿವಾಟು ನಡೆಸಿ 1.47 ಕೋಟಿ ರೂ. ಲಾಭ ಗಳಿಸಿದೆ. ಮುಂದಿನ ದಿನದಲ್ಲಿ ಎಂಎಸ್‌ಐಎಲ್‌ನಿಂದ ಪ್ರತ್ಯೇಕ ಔಷಧ ಮಳಿಗೆ ತೆರೆಯುವ ಮೂಲಕ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.

ರಾಜ್ಯಾದ್ಯಂತ 979 ಎಂಎಸ್‌ಐಎಲ್‌ ಮದ್ಯ ಮಳಿಗೆಗಳಿದ್ದು, ಈ ಪೈಕಿ 200 ಮಳಿಗೆಗಳನ್ನು ನವೀಕರಿಸಲಾಗುವುದು. ಮುಂದಿನ ದಿನದಲ್ಲಿ ಚಿಟ್‌ ಫ‌ಂಡ್‌ ಶಾಖೆಗಳನ್ನು ಜಿಲ್ಲೆ , ತಾಲೂಕು ಕೇಂದ್ರದಲ್ಲಿ ಆರಂಭಿಸಲಾಗುವುದು. ಈಗಿರುವ ಎಲ್ಲ ಶಾಖೆಗಳನ್ನು ಕೇರಳ ಮಾದರಿಯಲ್ಲಿ ಕಂಪ್ಯೂಟರೀಕರಣಗೊಳಿಸಲಾಗುವುದು. ತರಬೇತಿ ಪಡೆಯುವುದಕ್ಕಾಗಿ ತಂಡವೊಂದನ್ನು ಕೇರಳಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

110 ಕೋಟಿ ರೂ. ಲಾಭದ ಗುರಿ
ಪ್ರಸ್ತುತ ಹಣಕಾಸು ವರ್ಷ(2021-22)ದಲ್ಲಿ ಎಂಎಸ್‌ಐಎಲ್‌ ಮದ್ಯ ಮಾರಾಟದಿಂದ 2,399 ಕೋಟಿ ರೂ., ಚಿಟ್‌ ಫ‌ಂಡ್‌ ಮೂಲಕ 308 ಕೋಟಿ ರೂ., ನೋಟ್‌ ಬುಕ್‌ ಸಹಿತ ಕಾಗದ ವಿಭಾಗದಿಂದ 80 ಕೋಟಿ ರೂ., ನವೀಕರಿಸಬಹುದಾದ ಇಂಧನದಿಂದ 9.2 ಕೋಟಿ ರೂ. ಸಹಿತ ವಾರ್ಷಿಕ 2,901 ಕೋಟಿ ರೂ. ವಹಿವಾಟು ನಡೆಸಿದ್ದು, 91.01 ಕೋಟಿ ನಿವ್ವಳ ಲಾಭ ಗಳಿಸಿದೆ. 2022-23ನೇ ಸಾಲಿನಲ್ಲಿ 3,350 ಕೋಟಿ ರೂ. ಗುರಿ ನೀಡಲಾಗಿದ್ದು, 110 ಕೋಟಿ ರೂ. ನಿವ್ವಳ ಲಾಭ ಹೊಂದುವ ಗುರಿ ಹೊಂದಲಾಗಿದೆ ಎಂದರು.

ಎಂಎಸ್‌ಐಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಇಲಾಖೆಯಲ್ಲಿ ಕಾರ್ಯ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 57 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next