Advertisement
ತಾಲೂಕು ವೈದ್ಯಾಧಿಕಾರಿ ಅಶೋಕ್ ಮೈದೊಳಲಿನ ಕುಡಿಯುವ ನೀರಿನ ಮೂಲಗಳನ್ನು ಗ್ರಾಪಂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕ್ ನಿಂದ ಬಿಡುವ ನೀರು ಕುಡಿದವರ ಆರೋಗ್ಯದಲ್ಲಿ ಏರುಪೇರಾಗಿದೆ. ಟ್ಯಾಂಕ್ ಪರೀಶಿಲಿಸಿದಾಗ ಟ್ಯಾಂಕ್‌ನ ವಾಲ್‌ನಲ್ಲಿ ಉಂಟಾಗಿದ ಪ್ಯಾಚ್‌ನಿಂದ ತ್ಯಾಜ್ಯ ನೀರು ಟ್ಯಾಂಕ್ ಸೇರಿರಬಹುದು ಎಂದು ಶಂಕಿಸಿ. ಇನ್ನೆರಡು ದಿನ ಟ್ಯಾಂಕ್‌ನಿಂದ ನಲ್ಲಿಗಳಿಗೆ ನೀರು ಹರಿಸದಂತೆ ಹೇಳಿದರು.
Related Articles
Advertisement
ಕಳೆದ ಮೂರು ವರ್ಷಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ಉಂಟಾಗಿದ ಕಾಲರಕ್ಕೆ ತುತ್ತಾಗಿ ಗ್ರಾಮದಲ್ಲಿ ಸಾವು ನೋವುಗಳು ಸಂಭವಿಸಿದರು ಗ್ರಾಪಂ ಎಚ್ಚೆತ್ತುಕೊಂಡಿಲ್ಲ. ಕಳೆದ ಮಂಗಳವಾರ ಬುಧವಾರ ಮೈದೊಳಲಿನಲ್ಲಿ ಹಬ್ಬ ನಡೆದ ಪ್ರಯುಕ್ತ ಗ್ರಾಪಂ ಎರಡ್ಮೂರು ಕೊಳವೆ ಬಾವಿಗಳ ನೀರನ್ನು ಒಟ್ಟಿಗೆ ಸೇರಿಸಿ ಸರಬರಾಜು ಮಾಡಿದರಿಂದ ಗ್ರಾಮಸ್ಥರಲ್ಲಿ ಅನಾರೋಗ್ಯ ಉಂಟಾಗಿದೆ. ಗ್ರಾಪಂನ ಅವ್ಶೆಜ್ಞಾನಿಕ ನೀರು ನಿರ್ವಹಣೆಯಿಂದಲೆ ಶೀತಜ್ವರ, ವಾಂತಿ ಭೇದಿ ಪ್ರಕರಣಗಳು ಹೆಚ್ಚಾದವು ಎಂದು ಕೆಲ ಗ್ರಾಮಸ್ಥರು ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಪರೀಶಿಲನೆಗೆ ಬಂದ ಗ್ರಾಪಂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತ ಪಡಿಸಿದರು.