ನೆಲಮಂಗಲ : ಗುಣಮಟ್ಟವಿಲ್ಲದ ಆಹಾರ ಹಾಗೂ ಕೆಲಸದ ಒತ್ತಡದಿಂದ ನಗರ ಹಾಗೂ ಹಳ್ಳಿ ಪ್ರದೇಶದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಉಂಟಾಗುತ್ತಿದ್ದು ಪ್ರಮುಖವಾಗಿ ಹಳ್ಳಿಯಲ್ಲಿಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯಬೇಕಾಗಿದೆ ಎಂದು ಭವಾನಿಶಂಕರ್ ಛೇರಮೆನ್ ಭವಾ ನಿಶಂಕರ ಭೈರೇಗೌಡ್ರು ಅಭಿಪ್ರಾಯ ಪಟ್ಟರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಯ ಹಳ್ಳಿಯ ಜನರಿಗೆ ಅನುಕೂಲವಾಗಲು ಭವಾನಿಶಂಕರ್ ಗ್ರೂಪ್ ವತಿಯಿಂದ ಸಪ್ತಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಸೋಲದೇವನಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರ
ತಿಯೊಬ್ಬರು ಗುಣಮಟ್ಟ ಆಹಾರ ಹಾಗೂ ಪ್ರತಿನಿತ್ಯ ವ್ಯಾಯಮದಿಂದ ಆರೋಗ್ಯವಂತವ್ಯಕ್ತಿಗಳಾಗಿ ಜೀವನ ಪಡೆಯಬಹುದು. ಆದರೆ, ಇತ್ತೀಚಿಗೆ ರಾಸಾಯನಿಕ ಆಹಾರ ಹಾಗೂ ದೇಹ ದಂಡಿಸುವಲ್ಲಿ ವಿಫಲವಾಗುತ್ತಿದ್ದು ಇದರಿಂದ ಹಳ್ಳಿ ಜನರಿಗೂ ಬಹಳಷ್ಟು ಕಾಯಿಲೆಗಳು ದಾಳಿ ಮಾಡುತ್ತಿವೆ ಎಂದರು.
ನಗರ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಬೇಗನೇ ಸಿಗುವುದರಿಂದ ಹಣ ಖರ್ಚು ಮಾಡಿ ಪ್ರಾಣ ಕಾಪಾಡಿಕೊಳ್ಳುತ್ತಾರೆ. ಆದರೆ ಹಳ್ಳಿ ಜನರಿಗೆ ಆರ್ಥಿಕ ಸಂಕಷ್ಟದ ಜತೆ ಉತ್ತಮ ವೈದ್ಯಕೀಯ ಸೇವೆ ದೊರೆಯದೇ ಬಹಳಷ್ಟು ಕಷ್ಟ ಅನುಭವಿಸುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಆದ್ದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲು ಉಚಿತ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಶಿಬಿರ ಆಯೋಜನೆ ಸ್ವಾಗತಾರ್ಹ: ಸೋಲದೇವನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಸಂದೀಪ್ ಮಾತನಾಡಿ, ಗ್ರಾಮೀಣ ಜನರಿಗೆ ಅನುಕೂಲವಾಗಲು ಭವಾನಿ ಶಂಕರ್ ಗ್ರೂಪ್‌ನ ಭೈರೇಗೌಡ್ರುಹಾಗೂ ಮಂಜುನಾಥ್‌ನವರು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ. ಈ ಶಿಬಿರದಿಂದ ನಮ್ಮ ಗ್ರಾಮೀಣ ಭಾಗದ ಬಹಳಷ್ಟು ಜನರಿಗೆ ಅನುಕೂಲವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು.
ತಪಾಸಣೆ ಶಿಬಿರಕ್ಕೆ ಚಾಲನೆ : ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಕ್ಕಳ ಚಿಕಿತ್ಸೆ, ಹೃದಯರೋಗ,ಕಣ್ಣಿನ ತಪಾಸಣೆ, ಚರ್ಮರೋಗ, ಮೂಳೆರೋಗ, ಮೂತ್ರಶಾಸ್ತ್ರ, ಕಣ್ಣಿನ ಲೇಸರ್ ಚಿಕಿತ್ಸೆ, ಬಿಪಿ, ಮಧುಮೇಹ, ಉಚಿತ ಕನ್ನಡಕ ವಿತರಣೆ ಸೇರಿದಂತೆಹತ್ತಾರು ಸಮಸ್ಯೆಗಳ ಬಗ್ಗೆ ಸಪ್ತಗಿರಿ ಆಸ್ಪತ್ರೆಯ ತಜ್ಞವೈದ್ಯರ ತಂಡದಿಂದ ತಪಾಸಣೆ ಮಾಡಲಾಗಿದ್ದು ಔಷಧಿಯನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಶಿಬಿರದಿಂದ ಗ್ರಾಮೀಣ ಭಾಗದ ನೂರಾರು ಜನರು ಅನುಕೂಲ ಪಡೆದುಕೊಂಡರು.
ಈ ಸಂದರ್ಭದಲ್ಲಿ ಯುವಮುಖಂಡ ಭವಾನಿ ಶಂಕರ್ ಮಂಜುನಾಥ್, ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಷ್ಪಕೃಷ್ಣಪ್ಪ, ಸದಸ್ಯರಾದ ವೈ.ಆರ್.ಶ್ರೀನಿವಾಸ್, ಸಂದೀಪ್, ರಾಮಕೃಷ್ಣಪ್ಪ, ಕೃಷ್ಣ ಮೂರ್ತಿ, ಮುಖಂಡರಾದ ಜಿ.ಎಚ್.ಗೌಡ್ರು,ಪ್ರಭಣ್ಣ, ನಾರಾಯಣ್,ಗೋಪಾಲ್,ದೀಪಕ್, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಶಂಕರಪ್ಪ, ಮುಖ್ಯಶಿಕ್ಷಿ ದೇಔಕಿ ಮತ್ತಿತರರಿದ್ದರು.