Advertisement
ಘಟನೆ 2: ನಗರದ ಕಾಲೇಜಿನ ಫಿಸಿಯೋಥೆರಪಿ ವಿದ್ಯಾರ್ಥಿನಿ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದಳು. ಅಲ್ಲಿದ್ದವರು ‘ಫಿಟ್ಸ್’ ಎಂದು ಆಕೆಯ ಕೈಗೆ ಕಬ್ಬಿಣವನ್ನು ಕೈಯಲ್ಲಿಟ್ಟು ಉಪಚರಿಸಿದರು. ತತ್‌ಕ್ಷಣ ಆ್ಯಂಬುಲೆನ್ಸ್‌ನವರನ್ನು ಕರೆಸಿ ಆಸ್ಪತ್ರೆಗೆ ದಾಖಲಿಸಿದಾಗ ಗೊತ್ತಾಯಿತು’ ಆಕೆಗೆ ಫಿಟ್ಸ್ ಅಲ್ಲ, ನರ ಸಂಬಂಧಿ ಕಾಯಿಲೆ ಎಂದು!
Related Articles
Advertisement
ಪರಿಣತಿ ಹೊಂದಿದ ಪ್ಯಾರಾ ಮೆಡಿಕಲ್ ಸಿಬಂದಿ ಪ್ರತಿ ನಿತ್ಯ ಇಲ್ಲಿ ಸೇವೆಯಲ್ಲಿರುತ್ತಾರೆ. ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ತತ್‌ಕ್ಷಣದ ಚಿಕಿತ್ಸೆ ದೊರೆಯಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ಸೇವೆ ಕೂಡ ನಿಯೋಜಿಸಲು ನಿರ್ಧರಿಸಲಾಗಿದೆ.
ಎಟಿಎಂ ಸೇವೆ ಮರು ಆರಂಭ?ಸೆಂಟ್ರಲ್ ನಿಲ್ದಾಣ ವ್ಯಾಪ್ತಿಯಲ್ಲಿ ಬ್ಯಾಂಕ್ ಎಟಿಎಂ ಸೇವೆ ಕೆಲವು ತಿಂಗಳಿನಿಂದ ದೊರೆಯುತ್ತಿರಲಿಲ್ಲ. ಮೂರು ಎಟಿಎಂಗಳು ಕಾರ್ಯಾಚರಿಸುತ್ತಿದ್ದ ಜಾಗದಲ್ಲಿ ಈಗ ಒಂದೂ ಕೂಡ ಇಲ್ಲದೆ ಪ್ರಯಾಣಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ರೈಲ್ವೇ ಇಲಾಖೆಗೆ ಬ್ಯಾಂಕಿನವರಿಂದ ನಿಗದಿಪಡಿಸಿದ ಠೇವಣಿ ಮೊತ್ತ ದುಬಾರಿ ಎಂಬ ಕಾರಣ ನೀಡಿ ಎಟಿಎಂಗಳು ಬಾಗಿಲು ಹಾಕಿದ್ದವು. ಇದನ್ನು ಮನಗಂಡ ರೈಲ್ವೇ ಇಲಾಖೆ ಇದೀಗ ನಿಯಮಾವಳಿಯಲ್ಲಿ ಸರಳೀಕರಣ ಮಾಡಿದೆ. ಅದರಂತೆ ಠೇವಣಿಯನ್ನು ಕೈಬಿಟ್ಟು, ಟೆಂಡರ್ ಆಧಾರದಲ್ಲಿ ಎಟಿಎಂ ಸೇವೆಗೆ ಬ್ಯಾಂಕಿನವರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಟೆಂಡರ್‌ನಲ್ಲಿ ಭಾಗವಹಿಸಿ ಆಯ್ಕೆಯಾದವರಿಗೆ ಎಟಿಎಂ ಮಾಡಲು ಅವಕಾಶವಿದೆ. ಈ ಕಾರಣದಿಂದ ಹಲವು ಬ್ಯಾಂಕ್‌ನವರು ರೈಲ್ವೇ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 15 ದಿನದೊಳಗೆ ಕಾರ್ಯಾರಂಭ
ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೆಡಿಕಲ್ ಕಿಯೋಸ್ಕ್ ಆರಂಭಿಸಲು ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಮುಂದಿನ 15 ದಿನಗಳೊಳಗೆ ನೂತನ ಉಚಿತ ಕಿಯೋಸ್ಕ್ ಸೇವೆ ಆರಂಭವಾಗಲಿದೆ. ಈ ಮೂಲಕ ರೈಲು ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ತುರ್ತು ಆರೋಗ್ಯ ಸ್ಪಂದನೆಯ ನಿಟ್ಟಿನಲ್ಲಿ ಕಿಯೋಸ್ಕ್ ಕಾರ್ಯನಿರ್ವಹಿಸಲಿದೆ.
– ಕಿಶನ್ ಕುಮಾರ್
ಎಂ.ಎಸ್., ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ (ವಾಣಿಜ್ಯ),
ಮಂಗಳೂರು ಸೆಂಟ್ರಲ್ ವಿಶೇಷ ವರದಿ