Advertisement

ವೈದ್ಯಕೀಯ ವಿಜ್ಞಾನ ಸಂಸ್ಥೆ: ಪರಿಸರ ದಿನಾಚರಣೆ

08:18 PM Jun 05, 2019 | Team Udayavani |

ಮಡಿಕೇರಿ:ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್‌ ರೆಡ್‌ಕ್ರಾಸ್‌ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವೈದ್ಯಕೀಯ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಭಾ ಕಾರ್ಯಕ್ರಮ ನಡೆಯಿತು.

Advertisement

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್‌ ಕುಮಾರ್‌ ಅವರು ಮಾತನಾಡಿ ಹನಿಹನಿ ಕೂಡಿದರೆ ಹಳ್ಳವೆಂಬಂತೆ ಪ್ರಕೃತಿಯನ್ನು ಉಳಿಸುವಲ್ಲಿ ನಾವು ಮಾಡುವ ಸಣ್ಣ ಕಾರ್ಯವೇ ದೊಡ್ಡದಾಗಿ ಪರಿವರ್ತನೆಗೊಂಡು ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಗಿಡ ನೆಡಬೇಕು ವ್ಯಾಸಂಗ ಮುಗಿಸಿ ತೆರಳುವಾಗ ಕಿರಿಯ ವಿದ್ಯಾರ್ಥಿಗಳಿಗೆ ಆ ಗಿಡಗಳನ್ನು ಪೋಷಣೆ ಮಾಡುವ ಕರ್ತವ್ಯವನ್ನು ವಹಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಡಿಕೇರಿ, ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷರು ರವೀಂದ್ರ ರೈ , ಖೀಡಿಕೇರಿ, ಯೂತ್‌ ರೆಡ್‌ ಕ್ರಾಸ್‌ನ ಅಧ್ಯಕ್ಷ ಧನಂಜಯ್‌ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್‌ ರೆಡ್‌ಕ್ರಾಸ್‌ನ ಉಪಾಧ್ಯಕ್ಷರು ಚಂದನಾ, ಸಂಸ್ಥೆಯ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ವೃಂದದವರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್‌ ರೆಡ್‌ ಕ್ರಾಸ್‌ ಘಟಕದ ಸಂಯೋಜಕರಾದ ಡಾ| ವೀಣಾ, ಉಪಸ್ಥಿತರಿದ್ದರು. ಕಾಲೇಜಿನ ಆವರಣವನ್ನು ಶುಚಿಗೊಳಿಸಲಾಯಿತು ವರಣದಲ್ಲಿ ಗಿಡಗಳನ್ನು ನೆಡಲಾಯಿತು.ಅನುಶ್ರೀ ಅವರು ವಂದಿಸಿದರು, ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next