Advertisement
ಜಿಲ್ಲೆಗೆ ಪ್ರತ್ಯೇಕ ಆರ್‌ಟಿಪಿಸಿಆರ್ ಪ್ರಯೋಗಾಲಯ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಪ್ರಮುಖವಾಗಿ ಐಸಿಯು ಹಾಸಿಗೆ, ವೆಂಟಿಲೇಟರ್ ಸ್ಥಾಪನೆಯಾಗಿವೆ. ತಜ್ಞವೈದ್ಯರು, ವೈದ್ಯರು, ಸಿಬ್ಬಂದಿಯೂ ಹೆಚ್ಚಳವಾಗಿದ್ದಾರೆ.
Related Articles
Advertisement
3ನೇ ಅಲೆ ಎದುರಿಸಲು ಸಿದ್ಧತೆ: ಸಂಭವನೀಯ ಕೋವಿಡ್ 3ನೇ ಅಲೆ ಎದುರಿಸಲು ಈಗಿರುವ ವ್ಯವಸ್ಥೆ ಬಲಪಡಿಸಲಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಗಳಿಂದ ಬಂದ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ವೈದ್ಯರಿಗೆದಾದಿಯರಿಗೆ ತರಬೇತಿ ನೀಡಲಾಗುತ್ತಿದೆ. ನೂತನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಮಕ್ಕಳ ವಿಭಾಗ ತೆರೆಯಲಾಗುತ್ತಿದೆ. ಕೋವಿಡ್ 3ನೇಅಲೆ ಭೀತಿ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಿಲ್ಲಾಡಳಿತದಿಂದ ತೀವ್ರ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ.
ಕೇರಳ ರಾಜ್ಯದಿಂದ ಬಸ್, ವೈಯಕ್ತಿಕ ಸಾರಿಗೆ ಮೂಲಕ ಕರ್ನಾಟಕ ಪ್ರವೇಶಿಸುವವರು 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ, 72 ಗಂಟೆ ಒಳಗೆಮಾಡಿಸಿದ ಆರ್‌ಟಿಪಿಸಿಆರ್ ಪರೀಕ್ಷಾ ನೆಗೆಟಿವ್‌ಪ್ರಮಾಣ ಪತ್ರ ಹೊಂದುವುದು ಕಡ್ಡಾಯ. ಜಿಲ್ಲಾವ್ಯಾಪ್ತಿಯ ಎಲ್ಲಾ ಮುಜರಾಯಿ, ಖಾಸಗಿ ದೇವಾಲಯಗಳಲ್ಲಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿಪ್ರಾಧಿಕಾರದ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ, ದೇವರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಎಲ್ಲಾಉತ್ಸವ, ಸೇವೆ, ತೀರ್ಥ, ಪ್ರಸಾದ, ದಾಸೋಹ,ಮುಡಿಸೇವೆ ನಿರ್ಬಂಧಿಸಲಾಗಿದೆ. ಶನಿವಾರ ಮತ್ತುಭಾನುವಾರ ಭಕ್ತಾದಿಗಳಗೆ ದರ್ಶನಕ್ಕೆ ಅವಕಾಶ ಇಲ್ಲ.ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ರೆಸಾರ್ಟ್, ಲಾಡ್ಜ್,ಹೋಂ ಸ್ಟೇ, ವಸತಿ ಗೃಹ, ಅರಣ್ಯ ವಸತಿ ಗೃಹಗಳಲ್ಲಿ ಪ್ರವಾಸಿಗರು ತಂಗಲು ಮತ್ತು ಸಫಾರಿಯಲ್ಲಿಭಾಗವಹಿಸಲು, 72 ಗಂಟೆ ಒಳಗೆ ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ. ಅರಣ್ಯಇಲಾಖೆ ಸಫಾರಿಯನ್ನು ವಾರಾಂತ್ಯದಲ್ಲಿ ನಿರ್ಬಂಧಿಸಿದೆ.ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಭರಚುಕ್ಕಿ,ಹೊಗೇನಕಲ್ ಜಲಪಾತ ಪ್ರದೇಶಗಳಲ್ಲಿ ವಾರಾಂತ್ಯಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಜಿಲ್ಲಾಸ್ಪತ್ರೆ ನವೀಕರಿಸಿ ಅಗತ್ಯ ಸೌಲಭ್ಯ
ಪ್ರಮುಖವಾಗಿ ಜಿಲ್ಲಾಸ್ಪತ್ರೆಯ ಹಳೆಕಟ್ಟಡವನ್ನು ಕೋವಿಡ್ ಹಿನ್ನೆಲೆ ನವೀಕರಣಗೊಳಿಸಲಾಯಿತು.ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸೌಕರ್ಯವೇ ಇರಲಿಲ್ಲ.ಕೋವಿಡ್ ಬಳಿಕ ಇಲ್ಲಿ50 ಹಾಸಿಗೆಗಳ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ.25 ವೆಂಟಿಲೇಟರ್ ಅಳವಡಿಸಲಾಗಿದೆ. ಮೊದಲು55 ಆಕ್ಸಿಜನ್ ಬೆಡ್‌ಗಳಿದ್ದವು. ಈಗ155ಆಕ್ಸಿಜನ್ ಬೆಡ್‌ಗಳಿವೆ.
8 ಬೆಡ್‌ಗಳಿಗೆ ಹೈ ಫ್ಲೋ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದೆ.8 ಬೈ ಪ್ಯಾಪ್ ಮೆಷಿನ್‌ಗಳಿವೆ.ಕೋವಿಡ್ ಬಳಿಕ ಜಿಲ್ಲಾಸ್ಪತ್ರೆಗೆ 70 ಮಂದಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ 35 ಮಂದಿ ತಜ್ಞವೈದ್ಯರಿದ್ದಾರೆ. 50 ಮಂದಿ ಪ್ರಯೋಗಾಲಯ ತಂತ್ರಜ್ಞರು, ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
450 ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇದೆ. ಮಕ್ಕಳ ಚಿಕಿತ್ಸೆಗಾಗಿ 4 ವೆಂಟಿಲೇಟರ್ ಸಿದ್ಧಗೊಳ್ಳುತ್ತಿವೆ.1.79ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆರ್‌ಟಿಪಿಸಿಆರ್, ಮಾಲಿಕ್ಯುಲರ್ ಲ್ಯಾಬ್ ಸ್ಥಾಪಿಸಲಾಗಿದೆ. ಇದರಲ್ಲಿ ಕೋವಿಡ್ ಟೆಸ್ಟ್ ಮಾತ್ರವಲ್ಲ, ಇನ್ನುಳಿದ ಗಂಭೀರ ಕಾಯಿಲೆಗಳ ಪತ್ತೆಗಾಗಿಯೂ ಬಳಕೆಯಾಗಲಿದೆ. ಅರಣ್ಯ, ತೋಟಗಾರಿಕೆ ಇಲಾಖೆಯೂ ಈ ಲ್ಯಾಬ್ ಬಳಸಿಕೊಳ್ಳಬಹುದಾಗಿದೆ. ಅಗತ್ಯಬಿದ್ದಾಗ ಹೊರ ಜಿಲ್ಲೆಗಳ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನೂ ಈ ಲ್ಯಾಬ್‌ನಿಂದ ಮಾಡಲಾಗುತ್ತಿದೆ.
ಕೆ.ಎಸ್. ಬನಶಂಕರ ಆರಾಧ್ಯ