Advertisement

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

04:31 PM May 10, 2021 | Team Udayavani |

ಪಣಂಬೂರು: ಭಾರತದೊಂದಿಗಿನ ಸಧೃಡ  ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈತ್ ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್, ಆಕ್ಸಿಜನ್, ಟ್ಯಾಂಕ್ಸ್, ಆಕ್ಸಿಜನ್ ಕಾನ್ಸೆನ್ಟ್ರೇಟರ್  ಪೂರೈಕೆಗೆ ನಿರ್ಧರಿಸಿದ್ದು, ಒಂದು ಹಡಗು ಸೋಮವಾರ ನವಮಂಗಳೂರು ಬಂದರಿಗೆ ಆಗಮಿಸಿತು.

Advertisement

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು. ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ ಗಳಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಗೆ ಕುವೈಟ್ ಮುಂದಾಗಿದೆ.

ಕುವೈತ್ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದ್ದಾರೆ.

ಈ ವೇಳೆ ಕೆ.ವಿ,ಎನ್ ಎಂಪಿಟಿ ಚೇಯರ್ ಮನ್ ಎ.ವಿ ರಮಣ್, ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ಮಾಜಿ ಸಚಿವ ನಾಗರಾಜ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು , ಉಮಾನಾಥ ಕೋಟ್ಯಾನ್, ಸಹಾಯಕ ಆಯುಕ್ತ ಮದನ್ ಮೋಹನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next