Advertisement

ಏಕಾಏಕಿ ವೈದ್ಯಾಧಿಕಾರಿ ವರ್ಗಾವಣೆ : ಗ್ರಾಮಸ್ಥರಿಂದ ಪ್ರತಿಭಟನೆ

06:14 PM Jan 31, 2022 | Team Udayavani |

ಪಿರಿಯಾಪಟ್ಟಣ : ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ಕೋಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಂಜುನಾಥ್ ಮಾತನಾಡಿ ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 25 ಕ್ಕೂ ಹೆಚ್ಚು ಗ್ರಾಮಗಳಿದ್ದು, 50 ಸಾವಿರಕ್ಕೂ ಹೆಚ್ಚು ಜನತೆ ವಾಸವಾಗಿದ್ದಾರೆ, ಇವರಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಈ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ಪ್ರಕಾಶ್ ರವರು ಕೊರೋನಾ ದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ, ಹಬ್ಬಹರಿದಿನಗಳನ್ನು ಲೆಕ್ಕಿಸದೆ, ಕೆಲಸದ ಒತ್ತಡ ಎಂದು ಸಭಾಬು ಹೇಳದೆ ಸ್ಥಳೀಯವಾಗಿ ವಾಸವಿದ್ದು ಜನರಿಗೆ ಆರೋಗ್ಯ ಸೇವೆ ನೀಡುತ್ತ ಜನರ ಆರೋಗ್ಯ ಕಾಯುತ್ತಿದ್ದಾರೆ ಹೀಗಿರುವಾಗ ಇವರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಒತ್ತಡ ತಂದು ಏಕಾಏಕಿ ವರ್ಗಾವಣೆ ಮಾಡಿದ್ದಾರೆ, ನಮ್ಮ ಮನಸಿಗೆ ಘಾಸಿಯಾಗಿದೆ ಆದ್ದರಿಂದ ವರ್ಗಾವಣೆ ಮಾಡಿರುವ ಕ್ರಮವನ್ನು ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಸಚಿವರು, ತಾಲ್ಲೂಕು ಆರೋಗ್ಯಾಧಿಕಾರಿಗಳು ವರೆಗೂ ಪ್ರಕಾಶ್ ರವರನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಗಣೇಶ್ ಮಾತನಾಡಿ ಈ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪ್ರಕಾಶ್ ರವರು ಕೊರೋನಾದಂತ ಸಂದೀಗ್ದ ಸಮಯದಲ್ಲಿ ಬಡವರು ಅನಾರೋಗ್ಯಕ್ಕೆ ತುತ್ತಾದರೆ ಅವರ ಮನೆಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವುದಲ್ಲದೆ ದಿನವಿಡಿ ಸಮಯವನ್ನು ಲೆಕ್ಕಿಸದೆ ಆರೋಗ್ಯ ಕೇಂದ್ರಕ್ಕೆ ಬರುವ ಎಲ್ಲರಿಗೂ ವ್ಯವದಾನದಿಂದ ಚಿಕಿತ್ಸೆ ನೀಡುತ್ತಾರೆ ಹೀಗಿರುವಾಗ ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇವರನ್ನು ವಾರ್ಗಾಯಿಸಿರುವುದು ಖಂಡನೀಯ ಎಂದರು.

ಇದನ್ನೂ ಓದಿ : ಪರಪ್ಪನ ಅಗ್ರಹಾರದಲ್ಲಿದ್ದವರು: ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಗೆ ಬಿಜೆಪಿ ಟಾಂಗ್

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಸ್ ಅವರನ್ನು ಏಕಾಏಕಿ ವರ್ಕ ಮಾಡಿರುವುದು ದುರುದ್ದೇಶದಿಂದ ಕೂಡಿದೆ ಸ್ಥಳೀಯ ಅಧಿಕಾರಿಗಳು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ವರ್ಗವಣೆಯಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದಾರೆ ಇವರಿಗೆ ಸೇವೆಗಿಂತ ಪ್ರತಿಷ್ಠೆಯ ಮುಖ್ಯವಾಗಿದೆ ಎಂದು ದೂರಿದರು.

Advertisement

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಿರಿಯ ಅಧಿಕಾರಿಗಳಿಗೆ ಕೆಲವು ದಿನಗಳ ಕಾಲ ಗಡುವು ನೀಡಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ವಿಎಸ್ಎಸ್ಎನ್ ಅಧ್ಯಕ್ಷ ಚಂದ್ರಹಾಸ್, ಮಾಜಿ ಅಧ್ಯಕ್ಷ ದಶರಥ, ಎಪಿಎಂಸಿ ಮಾಜಿ ಅಧ್ಯಕ್ಷ ನಟರಾಜು, ಮುಖಂಡರಾದ ಹೊಸಳ್ಳಿ ಬೋರೇಗೌಡ. ಗುರುರಾಜು, ತೆಲುಗಿನಕುಪ್ಪೆ ನಾಗಣ್ಣ ಶಿವರಾಜ್, ರಘುನಾಥ್, ದಾಸೇಗೌಡ, ದೇವರಾಜ್, ಶಂಕರೇಗೌಡ, ಈರೇಗೌಡ, ಪಟೇಲ್ ನಾಗೇಶ್, ಸ್ವಾಮಿಗೌಡ, ಸ್ವಾಮಿಗೌಡ, ನರಸಿಂಹ, ಸೇರಿದಂತೆ ರೈರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next