Advertisement

ಆಶ್ರಯದ ವೈದ್ಯಕೀಯ ಸೌಲಭ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ಡಾ|ಸುರೇಶ್‌ ರಾವ್‌

06:35 PM Oct 19, 2019 | Suhan S |

ನವಿ ಮುಂಬಯಿ, ಅ. 18: ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಸಾಯನ್‌ ಇದರ ಅಮೃತ ಮಹೋತ್ಸವದ ಸವಿನೆನಪಿಗಾಗಿ ನೇರೂಲ್‌ ಸೀವುಡ್ಸ್‌ನಲ್ಲಿ ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ “ಆಶ್ರಯ’ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಜ್ಯೇಷ್ಠ ನಾಗರಿಕರ ದಿನಾಚರಣೆಯನ್ನು ಅ. 13ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾಲ್ಟನ್‌ ಕ್ಯಾಪಿಟಲ್‌ ಆಡ್ವೆಸರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ‌ ನಿರ್ದೇಶಕ ಯು. ಆರ್‌. ಭಟ್‌, ವೀ ಕ್ಲಬ್‌ ಸಂಸ್ಥಾಪಕರಾದ ಕವಲ್‌ ರೇಖೀ ಮತ್ತು ಸರೋಜಾ ರೇಖೀ ಹಾಗೂ ಆಶ್ರಯದ ಹಿರಿಯ ನಾಗರಿಕರು ಉಪಸ್ಥಿತರಿದ್ದು ಜ್ಯೋತಿ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಜಗದೀಶ್‌ ಆಚಾರ್ಯ ಅವರು ತಮ್ಮ ಮಾತೃಶ್ರೀ ದಿ| ರತ್ನಾ ಆಚಾರ್ಯ ಅವರ ಸ್ಮಾರಣಾರ್ಥ ಸ್ಥಾಪಿಸಿದ “ಆಶ್ರಯ ಸ್ಟಾರ್‌ ಅವಾರ್ಡ್‌’ ಬಗ್ಗೆ ತಿಳಿಸಿದ ಬಳಿಕ 2019 ನೇ ಸಾಲಿನ ಪುರಸ್ಕಾರನ್ನು ಅನ್ನಪೂರ್ಣ ರಾವ್‌ ಮತ್ತು ನಾಗರಾಜ್‌ ದಂಪತಿಗೆ ಪ್ರದಾನಿಸಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಯು. ಆರ್‌. ಭಟ್‌ ಮಾತನಾಡಿ, ಬಾಳ ಸಂಜೆಯಲ್ಲಿರುವ ಹಿರಿಯರು ಗೌರವಯುತರಾಗಿ, ನೆಮ್ಮದಿಯಾಗಿ ಬಾಳುವಂತೆ ಅನುಕೂಲ ಕಲ್ಪಿಸಿಕೊಟ್ಟು ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದ ಬಿಎಸ್‌ಕೆಬಿ ಸಂಸ್ಥೆಯ ಪದಾಧಿಕಾರಿಗಳ ಪ್ರಯತ್ನ ಅತ್ಯಂತ ಸ್ತುತ್ಯರ್ಹ ಎಂದು ನುಡಿದು, ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ ಹಿರಿಯ ನಾಗರಿಕರನ್ನು ಅಭಿನಂದಿಸಿದರು.

ಆಶ್ರಯದಲ್ಲಿ ಈಗಾಗಲೇ ಹಿರಿಯರಿಗೆ ಬೇಕಾದ ಮೂಲಭೂತ ಅಗತ್ಯತೆಗಳನ್ನು ನಾವು ಒದಗಿಸಿದ್ದರೂ, ಈಗಿರುವ ಕಟ್ಟಡದಲ್ಲಿ ಇನ್ನೂ ಎರಡು ಮಹಡಿ ವಿಸ್ತರಿಸಿ ಸಿಯೋ ಥೆರಪಿ ಮುಂತಾದ ವೈದ್ಯಕೀಯ ಸೌಲಭ್ಯಗಳನ್ನು ಇಲ್ಲೇ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗೋಕುಲ ಪುನರ್‌ ನಿರ್ಮಾಣದ ಕಾರ್ಯ ಪೂರ್ಣಗೊಂಡ ಆನಂತರ ಈ ಕೆಲಸ ಕೈಗೊಳ್ಳಲಿದ್ದೇವೆ. ಇದಕ್ಕಾಗಿ ಸರ್ವರ ತುಂಬು ಸಹಕಾರದ ಅಗತ್ಯವಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸುರೇಶ್‌ ರಾವ್‌ ತಿಳಿಸಿದರು.

ವೀಕ್ಲಬ್‌ ಆಫ್‌ ವಸಂತ್‌ ವಿಹಾರ್‌ನ ಡಾ| ಅರುಣ್‌ ರಾವ್‌, ಅಶೋಕ್‌ ಮೇಲ್ಮನೆ, ಸವಿತಾ ನಾಯಕ್‌ ಪ್ರಾಯೋಜಕತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶೈಲಿನಿ ರಾವ್‌, ಕೋಶಾಧಿಕಾರಿ ಹರಿದಾಸ್‌ ಭಟ್‌, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್‌ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಲಿಜಬೆತ್‌ ಪರೇರಾ ಪಂಡಿತ್‌, ಫರಾಶಾ ಕವರಾನ ಮತ್ತು ಹರ್ಷಿತಾ ಗೋವಿಂದಾನಿಯವರ ನೃತ್ಯ ಸಂಯೋಜನೆಯಲ್ಲಿ ಆಶ್ರಯದ ಹಿರಿಯ ನಾಗರಿಕರಿಂದ ನೃತ್ಯ ವೈವಿಧ್ಯ ನಡೆಯಿತು.

Advertisement

60ರಿಂದ 95 ವರ್ಷದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಯಬದ್ಧವಾಗಿ ಹೆಜ್ಜೆ ಹಾಕಿ ನರ್ತಿಸಿ ಪ್ರೇಕ್ಷಕರ ಮನರಂಜಿಸಿದರು. ಯುವ ವಿಭಾಗದ ವತಿಯಿಂದ ದಾಂಡಿಯಾ ರಾಸ್‌ ಕಾರ್ಯಕ್ರಮ ಜರಗಿತು. ನೂರಾರು ಹಿರಿ-ಕಿರಿಯ ಸದಸ್ಯರು ಪಾಲ್ಗೊಂಡರು. ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಆಶ್ರಯ ನಿವಾಸಿ ಧರ್ಮಾಂಬಾಳ್‌ ಪ್ರಾರ್ಥನೆಗೈದರು. ಉಪಾಧ್ಯಕ್ಷರಾದ ವಾಮನ್‌ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿತ್ರಾ ಮೇಲ್ಮನೆ ಅತಿಥಿಗಳನ್ನು

ಪರಿಚಯಿಸಿದರು. ಡಾ| ಸುರೇಶ್‌ ರಾವ್‌ ಅತಿಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಪದಾಧಿಕಾರಿಗಳು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನೃತ್ಯ ಸಂಯೋಜಕರು, ಪ್ರಾಯೋಜಕರನ್ನು ಹಾಗೂ ಆಶ್ರಯ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು. ಗೌರವ ಕಾರ್ಯದರ್ಶಿ ಎ. ಪಿ. ಕೆ ಪೋತಿ ಆಶ್ರಯದ ಸೌಕರ್ಯ, ಸವಲತ್ತು, ಮತ್ತು ಅಲ್ಲಿಯ ಚಟುವಟಿಕೆಗಳನ್ನು ಸಾಕ್ಷಚಿತ್ರದ ಮೂಲಕ ಪ್ರಸ್ತುತಪಡಿಸಿದರು. ಚಂದ್ರಾವತಿ ರಾವ್‌ ವಂದಸಿದರು.

 

 ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next