ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಡೀರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದು,ಉಳಿದ ಸ್ವಾಮೀಜಿಗಳು ಇದೇ ರೀತಿಯಕಾರ್ಯಕ್ಕೆ ಮುಂದಾದರೆ ಹೆಚ್ಚಿನ ಅರ್ಥಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿಯೋಜನೆ ವತಿ ಯಿಂದ ಮೊದಲ ಕಂತಿನಲ್ಲಿ300 ಆಕ್ಸಿಜನ್ ಕಾನ್ಸನೆóàಟರ್‌ಗಳು, 20 ವೆಂಟಿಲೇಟರ್‌ಗಳು ಹಾಗೂ ಹೈ- ಫೋ› ಯಂತ್ರಗಳನ್ನು ಕಾವೇರಿ’ ನಿವಾಸದಲ್ಲಿ ಶನಿವಾರಸ್ವೀಕರಿಸಿ ಸಾಂಕೇತಿಕವಾಗಿ ಹಸ್ತಾಂತರಿಸಿದಬಳಿಕ ಮಾತನಾಡಿದರು. ಧರ್ಮಸ್ಥಳದಧರ್ಮಾ ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಅವರು ಕೋವಿಡ್ ಸಂದರ್ಭದಲ್ಲಿ ಇಡೀರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಹಾಗೆಯೇ ಬೆಂಗ ಳೂರಿಗೂ ಹಲವುವೈದ್ಯಕೀಯ ಉಪಕರಣ ಗಳನ್ನು ಕಳುಹಿಸಿಕೊಟ್ಟಿದ್ದು, ರಾಜ್ಯದ ಜನತೆ ಪರವಾಗಿ ಅವರಿಗೆಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ವೀರೇಂದ್ರಹೆಗ್ಗಡೆಯವರು ಕೈಗೊಂಡಿರುವ ಕಾರ್ಯಗಳಮಾದರಿಯÇÉೇ ಇತರೆ ಸ್ವಾಮೀಜಿಗಳು ಮಾಡಿದರೆ ಬಹಳಷ್ಟು ಅರ್ಥ ಬರುತ್ತದೆ. ಕಾಗಿನೆಲೆಮಠದ ಶ್ರೀಗಳು, ಸುತ್ತೂರು ಶ್ರೀಗಳು,ಆದಿಚುಂಚನಗಿರಿ ಮಠದ ಶ್ರೀಗಳು, ಉಳಿದಶ್ರೀಗಳು ಇದೇ ರೀತಿಯ ಕಾರ್ಯ ದಲ್ಲಿತೊಡಗಿಸಿಕೊಂಡಿದ್ದು, ಎಲ್ಲರಿಗೂ ಅಭಿನಂ ದನೆಸಲ್ಲಿಸಲಾಗುವುದು ಎಂದು ತಿಳಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜ ನೆಯ ಸಿಇಒ ಡಾ.ಎಚ್.ಎಲ್ ಮಂಜು ನಾಥ್, ಕೋವಿಡ್ ಪರಿಸ್ಥಿತಿಯನ್ನುಮುಖ್ಯ ಮಂತ್ರಿಗಳು ಬಹಳ ಉತ್ತಮವಾಗಿನಿರ್ವ ಹಣೆ ಮಾಡುತ್ತಿದ್ದಾರೆ ಎಂದು ಶ್ರೀಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಒಂದೂ ವರೆ ತಿಂಗಳಿನಿಂದ ಕ್ಷೇತ್ರವು ಕೋವಿಡ್‌ಸಂಬಂ ಧಿತ ಹಲವು ಕೆಲಸಗಳ ಮೂಲಕ ಸರ್ಕಾರಕ್ಕೆ ಬೆಂಬಲವಾಗಿ ಕಾರ್ಯ ನಿರ್ವಹಿಸುತ್ತಿದೆಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆಲಮಂಗಲತಾಲೂಕು ವೈದ್ಯಾಧಿಕಾರಿ ಡಾ.ಹರೀಶ್‌ಕುಮಾರ್ ಅವರಿಗೆ ಸಾಂಕೇತಿಕವಾಗಿ ಉಪಕರಣ ವನ್ನು ಹಸ್ತಾಂತರಿಸಿದರು. ಶ್ರೀಕ್ಷೇತ್ರಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಅಖೀಲಕನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷರಾಮಸ್ವಾಮಿ ಇದ್ದರು.