Advertisement

ವೈದ್ಯಕೀಯ ಕಾಲೇಜುಗಳು ಶುಲ್ಕ ಹೆಚ್ಚಿಸದಂತೆ ಕ್ರಮ

11:09 PM Feb 12, 2020 | Lakshmi GovindaRaj |

ಬೆಂಗಳೂರು: ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಪ್ರವೇಶ ಶುಲ್ಕ ಹೆಚ್ಚಳ ಮಾಡದಂತೆ ಕ್ರಮವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಬುಧವಾರ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಭೇಟಿ ನೀಡಿ, ಸೇವೆಗಳ ಗುಣಮಟ್ಟ ಪರಿಶೀಲಿಸಿ ಮಾತನಾಡಿ, ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ವರ್ಷದಿಂದ ವರ್ಷಕ್ಕೆ ವೈದ್ಯಕೀಯ ಪ್ರವೇಶ ಶುಲ್ಕ ಹೆಚ್ಚಳ ಮಾಡುತ್ತಿವೆ.

Advertisement

ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇದರ ಬಗ್ಗೆ ಗಂಭೀರವಾಗಿ ಪರಾಮರ್ಶಿಸಿ, ಹೆಚ್ಚುವರಿ ಶುಲ್ಕ ನಿಗದಿ ಮಾಡದಂತೆ ನೋಡಿಕೊಳ್ಳಲಾ ಗುವುದು. ಇನ್ನು ರಾಜ್ಯದಲ್ಲಿ ಈಗಾಗಲೇ ಇರುವ ಕಾಲೇಜುಗಳ ಜತೆಗೆ 17-18 ನೂತನ ವೈದ್ಯಕೀಯ ಕಾಲೇಜುಗಳು ಸೇರ್ಪಡೆಯಾಗುತ್ತಿವೆ ಎಂದರು. ಶಿಕ್ಷಣ ಹಾಗೂ ಆರೋಗ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ. ಆರೋಗ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡಬೇಕಿದೆ.

ನಾನು ವೈದ್ಯ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ನಂಬಿಕೆಯಿಟ್ಟು ಈ ಖಾತೆ ನೀಡಿದ್ದಾರೆ. ಆಸ್ಪತ್ರೆಯ ಎಲ್ಲ ಘಟಕಗಳನ್ನೂ ಪರಿಶೀಲಸಿದ್ದೇನೆ ಎಂದರು. ರಾಮನಗರ ಜಿಲ್ಲೆಗೆ ವೈದ್ಯಕೀಯ ಕಾಲೇಜು ನೀಡುವ ಬಗ್ಗೆ ಸ್ಪಂದಿಸಿದ ಅವರು, ರಾಮನಗರಕ್ಕೆ ಈಗಾಗಲೇ ಆರೋಗ್ಯ ವಿವಿ ನೀಡಬೇಕು ಎಂದು ಕೇಳಿದ್ದಾರೆ. ರಾಜೀವ್‌ಗಾಂಧಿ ಆರೋಗ್ಯ ವಿವಿ ಜಾಗವಿದ್ದರೂ ನ್ಯಾಯಾಲಯದಲ್ಲಿ ತಕರಾರು ಇರುವುದರಿಂದ ಮೊದಲು ಅದನ್ನು ಬಗೆಹರಿಸಬೇಕು. ಬಳಿಕ ಆದಷ್ಟು ಶೀಘ್ರ ಪ್ರಾರಂಭ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next