Advertisement
ರವಿವಾರ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರು ನಟಿಸಿದ ಕೋಣನ ಮುಂದೆ ಕಿನ್ನೋರಿ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತು ಇಂದು ವೇಗವಾಗಿ ಹೋಗುತ್ತಿದೆ. ಇದಕ್ಕೆ ಮಾಧ್ಯಮವೇ ಕಾರಣ. ಜನರಲ್ಲಿ ಜಾಗೃತಿ ಹಾಗೂ ಸೂಕ್ತ ಮಾಹಿತಿಯನ್ನು ಮಾಧ್ಯಮಗಳಿಂದು ಸ್ಪರ್ಧೆ ಎನ್ನುವ ರೀತಿ ಕೊಡುತ್ತಿವೆ. ಮಾಧ್ಯಮಗಳ ಸಲಹೆ, ಟೀಕೆಗಳನ್ನು ಸರ್ಕಾರ ಸಕರಾತ್ಮಕವಾಗಿ ಸ್ವೀಕರಿಸಿ ಸ್ಪಂದಿಸುತ್ತಿದೆ ಎಂದರು.
ಸಂಬಂಧಪಟ್ಟಂತೆ ಟೀಕೆ ಹಾಗೂ ಮೆಚ್ಚುಗೆಯ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ಇದನ್ನು ತಾವು ಅವಲೋಕಿಸುತ್ತಿದ್ದೇನೆ ಎಂದು ಹೇಳಿದರು. ಅಲ್ಲದೇ ಪತ್ರಿಕಾ ಭವನದಲ್ಲಿ ನಡೆಯುತ್ತಿರುವ ಸಭಾ ಮಂಟಪಕ್ಕೆ ಅಗತ್ಯ ಪೀಠೊಪಕರಣಗಳಿಗೆ ಮಹಾನಗರ ಪಾಲಿಕೆ ವತಿಯಿಂದ 10 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ನಿಷ್ಪಕ್ಷಪಾತ ವರದಿ ಹಾಗೂ ಸಾಮಾಜಿಕ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಮಾಧ್ಯಮಗಳು ಸಮರ್ಪಕವಾದ ಪಾತ್ರ ನಿರ್ವಹಿಸುತ್ತಿವೆ ಎಂದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಸಹ ಮಾತನಾಡಿದರು.
Related Articles
Advertisement
ಪ್ರಶಸ್ತಿ ಪ್ರದಾನ: ದಿ| ವಿ. ಎನ್. ಕಾಗಲಕರ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗೋವಿಂದರಾವ್ ಖಮಿತಕರ್ ಅವರಿಗೆ ನೀಡಲಾಯಿತು. ಪತ್ರಕರ್ತರಾದ ಶೇಷಗಿರಿ ಎಚ್., ಮಂಜುನಾಥ ಅಂಜುಟಗಿ, ಶರಣಬಸಪ್ಪ ವಡಗಾಂವ, ವಿಜಯಕುಮಾರ ಕಲ್ಲಾ, ನಾಗಯ್ಯ ಸ್ವಾಮಿ ಬೊಮ್ಮನಳ್ಳಿ , ನರಸಿಂಗ್ ಕುದಂಪುರೆ, ಶಿವರಾಜ ವಾಲಿ, ಮಲ್ಲಿಕಾರ್ಜುನ ಮೂಡಬೂಳಕರ್, ಆಸ್ಮಾ ಇನಾಂದಾರ್, ಶರಣಬಸಪ್ಪ ಅನ್ವರ್, ಅರುಣ ಕದಮ್, ವಿಜಯಕುಮಾರ ವಾರದ (ಛಾಯಾಗ್ರಾಹಕ), ಮಿರ್ಜಾ ಸರ್ಪರಾಜ್ (ಇನ್‌ಕಿಲಾಬ್ ಡೆಕ್ಕನ್), ಆನಂದ ರಾಜಪ್ಪ (ಮುದ್ರಣ ವಿಭಾಗ), ನಾಗಶೆಟ್ಟಿ ಡಾಕುಳಗಿ (ಜಾಹೀರಾತು ವಿಭಾಗ), ಸಿದ್ಧಾರೂಢ ಬಿರಾದಾರ (ಪ್ರಸಾರಂಗ ವಿಭಾಗ) ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿದರು. ಪ್ರಭುಲಿಂಗ ನೀಲೂರೆ ಹಾಗೂ ಸುರೇಶ ಬಡಿಗೇರ ನಿರೂಪಿಸಿದರು. ಖಜಾಂಚಿಚಂದ್ರಕಾಂತ ಹಾವನೂರ ಸನ್ಮಾನಿತರ ಪರಿಚಯ ಮಾಡಿದರು. ನಂತರ ಪತ್ರಕರ್ತ ಡಾ| ಶಿವರಾಮ ಅಸುಂಡಿ ರಚನೆಯ ಕೋಣನ ಮುಂದೆ ಕಿನ್ನೂರಿ
ನಾಟಕವನ್ನು ಪತ್ರಕರ್ತರೆಲ್ಲರೂ ಪ್ರದರ್ಶಿಸಿದರು. ಪತ್ರಕರ್ತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉದಯವಾಣಿ ಇಬ್ಬರಿಗೆ ಪ್ರಶಸ್ತಿ
ಉದಯವಾಣಿ ಕಲಬುರಗಿ ಆವೃತ್ತಿಯ ಜಾಹೀರಾತು ವಿಭಾಗದ ಮ್ಯಾನೇಜರ್ ನಾಗಶೆಟ್ಟಿ ಡಾಕುಳಗಿ, ಜೇವರ್ಗಿ ತಾಲೂಕು ಪ್ರತಿನಿಧಿ ವಿಜಯಕುಮಾರ ಕಲ್ಲಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.