Advertisement
ಪಟ್ಟಣದ ತೆಲಗಿ ರಸ್ತೆಯ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಎಡ ಮತ್ತು ಬಲ ಭಾಗದ ಮುಖ್ಯ ರಸ್ತೆ ಉದ್ದಕ್ಕೂ ಕುರಿ, ಕೋಳಿ, ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಮುಜುಗರಕ್ಕೆ ಒಳಗಾಗಿ ಏನಪ್ಪಾ. ನಾವು ಯಾವ ಸ್ಥಳಕ್ಕೆ ಬಂದಿದ್ದೇವೆ ಎಂದು ಕೊಳ್ಳುವಂತಾಗಿದೆ.
Related Articles
Advertisement
ಆರೋಗ್ಯದ ಮೇಲೆ ಪರಿಣಾಮ: ರಾಜ್ಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಮಟನ್, ಚಿಕನ್, ಮೀನು ಮಾರಾಟ ಮಳಿಗೆಗಳಿದ್ದು ಹೊರಗಡೆ ಮಾಂಸಾಹಾರ ತೂಗು ಹಾಕಿರುತ್ತಾರೆ. ಹೆದ್ದಾರಿ ಮೇಲೆ ನಿತ್ಯ ನೂರಾರು ವಾಹನಗಳು ಚಲಿಸುವುದರಿಂದ ರಸ್ತೆ ಮೇಲಿನ ತ್ಯಾಜ್ಯ ಮತ್ತು ವಾಹನಗಳ ಮಾಲಿನ್ಯ ಮಾಂಸಾಹಾರ ಮೇಲೆ ಪರಿಣಾಮ ಬೀಳುತ್ತದೆ. ಈ ಮಾಂಸಾಹಾರ ಸೇವನೆ ಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾಂಸಾಹಾರ ಅಂಗಡಿಗಳನ್ನು ಮುಚ್ಚು ಅಂತ ಹೇಳುತ್ತಿಲ್ಲ. ಮಾಂಸಾಹಾರ ಸೇವನೆ ಮಾಡುವುದು ಅವರವರ ಭಾವನೆಗೆ ಬಿಟ್ಟಿದ್ದು. ಆದರೆ ಅದಕ್ಕೊಂದು ಪ್ರತ್ಯೇಕ ಮಾರುಕಟ್ಟೆ ನಿರ್ಮಾಣ ಮಾಡಿದರೆ ಮಾತ್ರ ಸೂಕ್ತವಾಗುತ್ತದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
ಬಸವಣ್ಣನವರು ಜನ್ಮವೆತ್ತಿದ ಈ ಸ್ಥಳದಲ್ಲಿ ರಸ್ತೆ ಮೇಲೆ ಮಾಂಸ ಮಾರಾಟ ಮಾಡಿದರೆ ಇನ್ನೊಬ್ಬರ ಭಾವನೆ ಮತ್ತು ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮಾಂಸಾಹಾರ ಮಾರಾಟದ ಮಳಿಗೆಗಳನ್ನು ಸ್ಥಳಾಂತರಿಸಬೇಕು.•ಶಿವಪ್ರಕಾಶ ಶಿವಾಚಾರ್ಯರು, ಹಿರೇಮಠ
ರಸ್ತೆಯ ಅಕ್ಕ ಪಕ್ಕ ಖಾಸಗಿ ಮತ್ತು ಅವರವರ ಸ್ವಂತ ಅಂಗಡಿಗಳಲ್ಲಿ ಮಾಂಸಾಹಾರ ಮಾರಲಾಗುತ್ತಿದೆ. ಮಾಂಸಾಹಾರ ಮಾರುಕಟ್ಟೆ ನಿರ್ಮಾಣಕ್ಕಾಗಿ ಸೂಕ್ತ ಸ್ಥಳ ಪರಿಶೀಲನೆ ಮಾಡುತ್ತಿದ್ದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆ ಪುರಸಭೆ ಹೊಂದಿದೆ.•ಬಿ.ಎ. ಸೌದಾಗರ, ಪುರಸಭೆ ಮುಖ್ಯಾಧಿಕಾರಿ
ಪಟ್ಟಣದಲ್ಲಿ ಪರವಾನಗಿ ಪಡೆದಿರುವ ಒಟ್ಟು 15 ಚಿಕನ್ ಮತ್ತು ಮಟನ್ ಅಂಗಡಿಗಳು ಇವೆ. ಅನಧಿಕೃತ ಅಂಗಡಿಗಳು ಇಲ್ಲ. ಪುರಸಭೆಯಿಂದ ನಾವು ಪರವಾನಗಿ ನೀಡುವ ಮುನ್ನ ಯಾವುದೇ ಹಲವಾರು ನಿರ್ಬಂಧನೆ ಹೇರಿರುತ್ತೇವೆ. ಅದನ್ನು ಪಾಲಿಸವುದು ಅವರ4 ಕರ್ತವ್ಯ.•ಸಿದ್ದಾರ್ಥ ಕಳ್ಳಿಮನಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ
•ಪ್ರಕಾಶ ಬೆಣ್ಣೂರ