Advertisement

ಅಣವಾರ-ಮೋತಕಪಳ್ಳಿ ರಸ್ತೆ ಸುಧಾರಣೆಗೆ ಕ್ರಮ

12:58 PM May 16, 2022 | Team Udayavani |

ಚಿಂಚೋಳಿ: ತಾಲೂಕಿನ ಅಣವಾರ-ಮೋತಕಪಳ್ಳಿ ಗ್ರಾಮದ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣಕ್ಕಾಗಿ ಶಾಸಕ ಡಾ| ಅವಿನಾಶ ಜಾಧವ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

Advertisement

ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿಯಿಂದ ಪೋಲಕಪಳ್ಳಿ-ಅಣವಾರ ಗ್ರಾಮಕ್ಕೆ ಹೊಸ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಮಾಡುವುದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ 95ಲಕ್ಷ ರೂ. ಮಂಜೂರಿ ಮಾಡಲಾಗಿದೆ. ಆದರೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್‌ ಹತ್ತಿರದಿಂದ ಅಣವಾರ ಗ್ರಾಮಪಂಚಾಯಿತಿ ಕಚೇರಿ ವರೆಗೆ ಸುಮಾರು ಎರಡು ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ರಸ್ತೆ ಅತ್ಯಂತ ಕಿರಿದಾಗಿದೆ. ಇದರಿಂದ ಆಟೋ, ದ್ವಿಚಕ್ರ ವಾಹನಗಳು, ಎತ್ತಿನ ಬಂಡಿಗಳು ಓಡಾಡಲು ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥ ವಿಶ್ವನಾಥ ಪಾಟೀಲ ಶಾಸಕರ ಗಮನಕ್ಕೆ ತಂದರು.

ಪೋಲಕಪಳ್ಳಿ-ಅಣವಾರ ಗ್ರಾಮದ ರಸ್ತೆ ಅನೇಕ ವರ್ಷಗಳಿಂದ ಹದಗೆಟ್ಟಿದ್ದರಿಂದ ಹೊಸ ರಸ್ತೆ ನಿರ್ಮಾಣವಾಗುತ್ತಿದೆ. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಎಇಇ ಮಹ್ಮದ್‌ ಅಹೆಮದ್‌ ಹುಸೇನ, ತಾಪಂ ಇಒ ಅನಿಲಕುಮಾರ ರಾಠೊಡ, ಎಇಇ ಆನಂದ ಕಟ್ಟಿ, ಎಇಇ ಪ್ರಕಾಶ ಕುಲಕರ್ಣಿ, ಸಿಪಿಐ ಮಹಾಂತೇಶ ಪಾಟೀಲ, ಗ್ರಾಪಂ ಅಧ್ಯಕ್ಷ ಜಾಕೀರ ಪಟೇಲ, ನಂದಕುಮಾರ ಪಾಟೀಲ, ಹಣಮಂತ ಭೋವಿ, ಬಕ್ಕಪ್ಪ ಪೂಜಾರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next