Advertisement

ಆಡುಮಲ್ಲೇಶ್ವರ ಕಿರು ಮೃಗಾಲಯ ಅಭಿವೃದ್ಧಿಗೆ ಕ್ರಮ

03:32 PM Feb 09, 2021 | Team Udayavani |

ಚಿತ್ರದುರ್ಗ: ನಗರಕ್ಕೆ ಹೊಂದಿರಕೊಂಡಿ ರುವ ಆಡುಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈಗಾಗಲೇ 3.12 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರೊಟ್ಟಿಗೆ ಡಿಎಂಎಫ್‌ ನಿ ಯಿಂದಲೂ ರೂ.3.50 ಕೋಟಿ ನೀಡಲಾಗಿದೆ ಎಂದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

Advertisement

ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಸೋಮವಾರ ಕರ್ನಾಟಕ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಯ ಆಡುಮಲ್ಲೇಶ್ವರ ಕಿರು ಮೃಗಾಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ವಲಯ ಅರಣ್ಯ ಕಚೇರಿ, ಕರಡಿ ಮನೆ ಆವರಣ, ಚುಕ್ಕೆ ಜಿಂಕೆ ಆವರಣ ನಿರ್ಮಾಣ, ಚೈನ್‌ ಲಿಂಕ್‌ ಮೆಶ್‌, ಪ್ರವೇಶದ್ವಾರ, ಚಿರತೆ, ಕೃಷ್ಣ ಮೃಗ, ಝೀಬ್ರಾ ಆವರಣ, ರಸ್ತೆ, ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಒಟ್ಟು 3.12 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಇದನ್ನೂ ಓದಿ:ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಕಿರು ಮೃಗಾಲಯದ ನಿರ್ವಹಣೆ, ಅಭಿವೃದ್ಧಿ ಕಾಮಗಾರಿ, ಆಸ್ಪತ್ರೆ ಖರ್ಚು ಸೇರಿದಂತೆ 2018-19ನೇ ಸಾಲಿನಿಂದ 2020-21 ರವರೆಗೆ ಒಟ್ಟು 1.73 ಕೋಟಿ ರೂ. ಖರ್ಚಾಗಿದೆ.2018-19 ರಲ್ಲಿ 21.76 ಲಕ್ಷ ರೂ., 2019-2020 ರಲ್ಲಿ 26.86 ಲಕ್ಷ ರೂ.  ಹಾಗೂ 2020-21ರಲ್ಲಿ 13.77 ಲಕ್ಷರೂ. ಆದಾಯವಾಗಿ ಬಂದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next