Advertisement

ಮೌಲ್ಯಮಾಪನ ದೋಷ ಸರಿಪಡಿಸಲು ಕ್ರಮ: ನಾಗೇಶ್‌

01:01 AM Mar 29, 2022 | Team Udayavani |

ಬೆಂಗಳೂರು:ಪಿಯುಸಿ ದ್ವಿತೀಯ ವರ್ಷದ ಉತ್ತರ ಪತ್ರಿಕೆಗಳ ಅಸರ್ಮಕ ಮೌಲ್ಯಮಾಪನದಿಂದ ಕಳೆದ 3 ವರ್ಷ
ಗಳಲ್ಲಿ 2,777 ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು, ಮೌಲ್ಯಮಾಪನ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು ನಿಜ. ಇಲಾಖೆ ದಂಡ ವಸೂಲಿ ಮಾಡಿಲ್ಲ. ಇದು ಯಾಕೆ ಎಂಬುದು ಗೊತ್ತಿಲ್ಲ. ಈಗಿನದ್ದು ಪೈಪೋಟಿಯ ಕಾಲ. ಪಾಯಿಂಟ್‌ಗಳಲ್ಲಿ ಅಂಕಗಳನ್ನು ಅಳೆಯಲಾಗುತ್ತದೆ. ಹೀಗಿರುವಾಗ 6ಕ್ಕಿಂತ ಕಡಿಮೆ ಅಥವಾ 6ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸದ ಬಗ್ಗೆಯೂ ಪರಿಶೀಲಿಸಬೇಕಾಗಿದೆ ಎಂದರು.

ಮರು ಮೌಲ್ಯಮಾಪನದಲ್ಲಿ 2019ರಲ್ಲಿ 1,008 ವಿದ್ಯಾರ್ಥಿಗಳಿಗೆ 6ಕ್ಕಿಂತ ಹೆಚ್ಚು ಮತ್ತು 6ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ 66 ವಿದ್ಯಾರ್ಥಿಗಳಿಗೆ ಆಗಿದೆ. 2020ರಲ್ಲಿ 6 ಅಂಕಕ್ಕಿಂತ ಹೆಚ್ಚು 1,540 ಮತ್ತು 6ಕ್ಕಿಂತ ಕಡಿಮೆ 124 ವಿದ್ಯಾರ್ಥಿಗಳಿಗೆ ವ್ಯತ್ಯಾಸವಾಗಿದೆ. ಅದೇ ರೀತಿ 2021ರಲ್ಲಿ 6ಕ್ಕಿಂತ ಹೆಚ್ಚು 31 ಮತ್ತು 6ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ 8 ವಿದ್ಯಾರ್ಥಿಗಳಿಗೆ ಆಗಿದೆ. ಮೌಲ್ಯಮಾನಪನ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

10ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಮಾಡುವ ಮೌಲ್ಯಮಾಪಕರಿಗೆ ಪರೀಕ್ಷಾ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ರಾಗಿ, ಜೋಳ ಖರೀದಿಗೆ ಕ್ರಮ ಕೈಗೊಳ್ಳಲು ಆಗ್ರಹ

Advertisement

ಎಂಎಲ್‌ಸಿಗಳ ಸಭೆ
ಮೂರು ವರ್ಷ ಸೇವೆ ಪೂರ್ಣಗೊಳಿಸಿದವರನ್ನು ಮೌಲ್ಯಮಾಪನಕ್ಕೆ ನಿಯೋಜಿಸಬೇಕು ಎಂಬ ನಿಯಮವಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಜೆಪಿ ಸದಸ್ಯ ಎಸ್‌. ವಿ. ಸಂಕನೂರು ಆಗ್ರಹಿಸಿದರು. ಈ ವಿಚಾರವಾಗಿ ಸಂಬಂಧಪಟ್ಟ ಎಲ್ಲ ವಿಧಾನಪರಿಷತ್‌ ಸದಸ್ಯರ ಸಭೆ ಕರೆದು ಚರ್ಚಿಸುವುದಾಗಿ ಸಚಿವರು ಭವರಸೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next