Advertisement

ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ

03:45 PM May 07, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಮುಂಜಾಗ್ರತಾ ಕ್ರಮವಾಗಿ 325 ಲಕ್ಷ ರೂ.ಗಳ 177 ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

Advertisement

ಬೇಸಿಗೆ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು, ಶಾಸಕರ ನೇತೃತ್ವದಲ್ಲಿ ಟಾಸ್ಕಫೋರ್ಸ ಸಮಿತಿಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಜಿಲ್ಲಾ ಪಂಚಾಯತಿಗೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ, 10 ತಾಲೂಕಗಳಿಂದ ಶಾಸಕರ ನೇತೃತ್ವದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯತಿಗೆ ಆಯಾ ವಿಭಾಗದವರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೇಸಿಗೆ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ಒಟ್ಟು 177 ಕಾಮಗಾರಿಗಳನ್ನೊಳಗೊಂಡ 325 ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಇಲಾಖೆಯ ಆಯುಕ್ತರು ಅನುಮೋದನೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಂಟಾದರೆ ಗ್ರಾಮಸ್ಥರು ಎಲ್ಲ ಉಪವಿಭಾಗ ಕೇಂದ್ರಗಳಲ್ಲಿರುವ ಸಹಾಯವಾಣಿ ಕೇಂದ್ರಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತಮ್ಮ ದೂರನ್ನು ದಾಖಲಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಉಪವಿಭಾಗ ಎನ್‌.ಕೆ.ಮೋಹಿತೆ ದೂ. ಸಂಖ್ಯೆ-0831-2447322, ಜಿ.ಎನ್‌.ಕಾರೇಕರ, ದೂ. ಸಂಖ್ಯೆ:08336223708 ಖಾನಾಪೂರ ಉಪವಿಭಾಗ. ಎ.ಆರ್‌.ಗುರವನ್ನವರ ದೂ.ಸಂಖ್ಯೆ:-08288-233341 ಬೈಲಹೊಂಗಲ ಉಪವಿಭಾಗ. ಎಂ.ಎಚ್‌ ಗುಡಗುಡಿಗಿ ದೂ. ಸಂಖ್ಯೆ;-08330-222066 ಸವದತ್ತಿ ಉಪವಿಭಾಗ. ಎಂ.ಎಚ್‌ ಮುಲ್ಲಾ ದೂ. ಸಂಖ್ಯೆ:- 08335-242633 ರಾಮದುರ್ಗ ಉಪವಿಭಾಗ. ಗೋಪಾಲ ಅವಳೆ ಮೊ. ಸಂಖ್ಯೆ:-9741266377 ಅಥಣಿ ಉಪವಿಭಾಗ. ಮಹೇಶ ಮೊ. ಸಂಖ್ಯೆ: 94806-34211 ಚಿಕ್ಕೋಡಿ ಉಪವಿಭಾಗ. ಎಸ್‌.ಐ.ಮೊಮಿನ ದೂ. ಸಂಖ್ಯೆ:08332-225132 ಹಾಗೂ ಮೊ. ಸಂಖ್ಯೆ 6360747464 ಗೋಕಾಕ್‌ ಉಪವಿಭಾಗ. ನಾಗಯ್ಯ ಹಿರೇಮಠ ಮೊ. ಸಂಖ್ಯೆ:-94488-45039 ಹುಕ್ಕೇರಿ ಉಪವಿಭಾಗ ಹಾಗೂ ಎಸ್‌,ಬಿ ಮಾನೆ ಮೊ. ಸಂಖ್ಯೆ:-9741280225 ರಾಯಬಾಗ ಉಪವಿಭಾಗಗಳಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next