Advertisement

Malpe: ಬೋಟ್‌ಗಳ ಸುರಕ್ಷತೆಗೆ ಕ್ರಮ; ಮಲ್ಪೆ ಬಂದರಿಗೆ ಬಿಗಿ ಭದ್ರತೆ

04:22 PM Jun 08, 2024 | Team Udayavani |

ಮಲ್ಪೆ: ಜೂನ್‌ 1ರಿಂದ ಜುಲೈ 31ರವರೆಗೆ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದ ರಿಂದ ಮಲ್ಪೆ ಬಂದರಿನಲ್ಲಿ ದೋಣಿಗಳ ನಿಲುಗ ಡೆಗೆ ಅವಕಾಶ ನೀಡಲಾಗಿದೆ. ಕೋಟ್ಯಂತರ ಮೌಲ್ಯದ ಸಾವಿರಾರು ಬೋಟುಗಳ ಸುರಕ್ಷೆಯ ದೃಷ್ಟಿಯಿಂದ ಬಂದರಿನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.

Advertisement

ಬಂದರಿನಲ್ಲಿ ಅಗತ್ಯ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವ ಬಗ್ಗೆ ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್‌ ಆರ್‌. ಅವರ ಅಧ್ಯಕ್ಷತೆಯಲ್ಲಿ ಮೀನುಗಾರರು ಮತ್ತು ವಿವಿಧ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ರಾತ್ರಿ ವೇಳೆ ನಿತ್ಯ ಪೊಲೀಸ್‌ ಗಸ್ತು ಇರಿಸಬೇಕು ಮತ್ತು ಅಗ್ನಿ ಆಕಸ್ಮಿಕ ನಿಯಂತ್ರಿಸಲು ಅಗ್ನಿ ಶಾಮಕದಳ ಸನ್ನದ್ಧರಾಗಿರಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಇಲಾಖಾಧಿಕಾರಿಗಳನ್ನು ಆಗ್ರಹಿಸಿದರು.

ಮೀನುಗಾರರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರ್‌, ನಾಡದೋಣಿ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಗೋಪಾಲ್‌ ಆರ್‌. ಕೆ., ಯಾಂತ್ರಿಕ ಟ್ರಾಲ್‌ ದೋಣಿ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌, ಡೀಪ್‌ ಸೀ ಟ್ರಾಲ್‌ ದೋಣಿ ಮೀನುಗಾರರ ಅಸೋಸಿಯೇಷನ್‌ ಅಧ್ಯಕ್ಷ ಸುಭಾಷ್‌ ಮೆಂಡನ್‌,ಆಳಸಮುದ್ರ ಬೋಟ್‌ ಮಾಲಕರ ಸಂಘದ ಕಾರ್ಯದರ್ಶಿ ಹರಿಶ್ಚಂದ್ರ, ಯಾಂತ್ರಿಕ ಟ್ರಾಲ್‌ ಮೀನುಗಾರರ ಸಹಕಾರ ಸಂಘದ ನಿರ್ದೇಶಕ ಕಿಶೋರ್‌ ಡಿ. ಸುವರ್ಣ, ಪರ್ಸೀನ್‌ ಮೀನುಗಾರರ ಸಂಘದ ಉಪಾಧ್ಯಕ್ಷ ಮಧುಕರ್‌ ಸುವರ್ಣ, ವಿವಿಧ ಮೀನುಗಾರ ಸಂಘಟನೆಗಳು ಪ್ರತಿನಿಧಿಗಳು, ಮಲ್ಪೆ ಪೊಲೀಸ್‌
ಠಾಣೆ, ಕರಾವಳಿ ಪೊಲೀಸ್‌ ಪಡೆ, ಅಗ್ನಿಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು. ಮೀನುಗಾರಿಕೆ ಉಪ ನಿರ್ದೇಶಕಿ ಸವಿತಾ ಖಾದ್ರಿ ಕೆ. ಎಸ್‌. ಸ್ವಾಗತಿಸಿ, ವಂದಿಸಿದರು.

ಏನೇನು ಸುರಕ್ಷತಾ ಕ್ರಮ?
* ಬೋಟ್‌ಗಳ ದುರಸ್ತಿಗಾಗಿ ಜನರೇಟರ್‌ ಬಳ ಸಲು ಮೀನುಗಾರಿಕೆ ಇಲಾಖೆ ಅನುಮತಿ ಪಡೆಯಬೇಕು.

* ಪ್ರತಿ ದಿನ ಬೆಳಗ್ಗೆ 9ರಿಂದ ಸಂಜೆ 6 ರವರೆಗೆ ಮಾತ್ರ ದೋಣಿ ದುರಸ್ತಿ ನಡೆಸಲು ಅವಕಾಶ.

Advertisement

* ಸೀ ವಾಕ್‌ವೇಗೆ ಹೋಗುವ ವಾಹನಗಳನ್ನು ತಪಾಸಣೆ ಮಾಡಿಯೇ ಅನುಮತಿ ನೀಡಬೇಕು.

* ಸಂಜೆ 6 ಗಂಟೆ ಬಳಿಕ ವಾಹನಗಳನ್ನು ಬಂದರಿನೊಳಗೆ ಸಂಚಾರಿಸಲು ನಿಷೇಧ ಹೇರಲಾಗುವುದು.

* ಬಂದರಿನಲ್ಲಿ ರಾತ್ರಿ ಪೊಲೀಸ್‌ ಗಸ್ತು ತಿರುಗುವುದು, ಅಗ್ನಿ ಶಾಮಕ ದಳ ಸನ್ನದ್ಧರಾಗಿರುವುದು

* ಬಂದರಿನ ಎಲ್ಲ ಡೀಸೆಲ್‌ ಬಂಕ್‌ಗಳಲ್ಲಿ ಭದ್ರತಾ ಸಿಬಂದಿ ನೇಮಕ

* ಆಯಕಟ್ಟಿನ ಪ್ರದೇಶಗಳಲ್ಲಿ ದಿನದ 24 ಗಂಟೆ ಸಿ.ಸಿ. ಕೆಮೆರಾ ಕಾರ್ಯ ನಿರತವಾಗಿರಬೇಕು.

* ಹೊರರಾಜ್ಯದ ಬೋಟ್‌ಗಳು ತುರ್ತು ಪರಿಸ್ಥಿತಿ ಹೊರತುಪಡಿಸಿ, ಉಳಿದ ಸಂದರ್ಭದಲ್ಲಿ ಪ್ರವೇ ಶವಿಲ್ಲ

*ಸಿನೆಮಾ ಚಿತ್ರೀಕರಣಕ್ಕೆ ಅವಕಾಶವಿಲ್ಲ.

ಮುಂಜಾಗ್ರತ ಕ್ರಮ
ಮಲ್ಪೆ ಬಂದರಿನಲ್ಲಿ ಬೋಟ್‌ಗಳ ಸುರಕ್ಷತೆಗೆ ಅಗತ್ಯ ಪೂರ್ವ ಸಿದ್ಧತೆ ಮತ್ತು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳ ಲಾಗುವುದು. ಯಾವುದೇ ಕಳ್ಳತನ, ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗುವುದು.
*ವಿವೇಕ್‌ ಆರ್‌., ಮೀನುಗಾರಿಕೆ ಜಂಟಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next