ಬೀಳಗಿ: ಮತಕ್ಷೇತ್ರದ 268 ಬೂತ್ ಮಟ್ಟದಲ್ಲಿ ಪ್ರತಿ ಬೂತ್‌ಗೆ 25 ಬಡ, ನಿರ್ಗತಿಕ ಕುಟುಂಬಗಳಿಗೆ ಹಾಗೂ ಮುಧೋಳ, ಬಾದಾಮಿ, ಬಾಗಲಕೋಟೆ ತಾಲೂಕಿನ ಕೆಲ ಪ್ರದೇಶಗಳ ಬಡ ಕುಟುಂಬಗಳು, ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಕೆಳವರ್ಗದ ಸಿಬ್ಬಂದಿ ಸೇರಿದಂತೆ ಸುಮಾರು 9 ಸಾವಿರ ಕುಟುಂಬಗಳಿಗೆ ವೈಯಕ್ತಿಕ ಖರ್ಚಿನಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಆಹಾರ ಧಾನ್ಯ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಬಿಡಾರ ಹೂಡಿರುವ ಅಲೆಮಾರಿ ಬಡ ಕುಟುಂಬಗಳಿಗೆ ಶನಿವಾರ ಆಹಾರ ಧಾನ್ಯಗಳ ಕಿಟ್ ವಿತರಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್ 19 ಮಹಾಮಾರಿಯ ಅಟ್ಟಹಾಸಕ್ಕೆ ಅದೆಷ್ಟೋ ಬಡಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಸರಕಾರ ಮತ್ತು ತಾವು ನೊಂದವರ ಮತ್ತು ಬಡವರ ಜತೆಗೆ ಸದಾ ಇರುತ್ತದೆ ಎಂದು ಹೇಳಿದರು.
5 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ, 1 ಕೆಜಿ ತೊಗರಿ ಬ್ಯಾಳಿ, 1 ಕೆಜಿ ಒಳ್ಳೆಣ್ಣಿ, 200 ಗ್ರಾಂ ಸ್ಯಾನಿಟೈಸರ್ ಹಾಗೂ ಮಾಸ್ಕ್ ಒಳಗೊಂಡ ಒಟ್ಟು 600 ರೂಪಾಯಿ ಮೌಲ್ಯದ ಕಿಟ್‌ಗಳನ್ನು ಸ್ಥಳೀಯವಾಗಿ ನೆಲೆಸಿರುವ ಸುಮಾರು 85 ಅಲೆಮಾರಿ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಇನ್ನು ಮತಕ್ಷೇತ್ರದಾತ್ಯಂದ ಹಾಗೂ ಬದಾಮಿ, ಬಾಗಲಕೋಟೆ, ಮುಧೋಳ ತಾಲೂಕಿನ ಕೆಲ ಪ್ರದೇಶಗಳು ಸೇರಿ ಸುಮಾರು 9 ಸಾವಿರ ಕಟುಂಬಗಳಿಗೆ ತಲಾ 2 ಕೆಜಿ ಜೋಳ, ಗೋ , ಸಕ್ಕರೆ, ತಲಾ 1 ಕೆಜಿ ರವಾ, ತೊಗರಿ ಬ್ಯಾಳಿ, ಒಳ್ಳೆಣ್ಣೆ ಹಾಗೂ ಚಹಾಪುಡಿ, ಸ್ನಾನದ 1 ಸೋಪು, 200 ಗ್ರಾಂ ಸ್ಯಾನಿಟೈಸರ್, ಮಾಸ್ಕ್ ಒಳಗೊಂಡ 500 ರೂ, ಮೌಲ್ಯದ ಒಟ್ಟು 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಟ್‌ಗಳನ್ನು ಹಂಚಲು ಸಿದ್ಧತೆ ನಡೆದಿದೆ ಎಂದರು.
ಪೊಲೀಸ್, ವೈದ್ಯಕೀಯ, ಪಪಂ, ಗ್ರಾಪಂ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರು ಕೊರೊನಾ ತಡೆಗೆ ಸೈನಿಕರಂತೆ ಹೋರಾಡುತ್ತಿರುವುದಕ್ಕೆ ಅಭಿನಂದಿಸಲಾಗುವುದು. ಅಲ್ಲದೆ, ಪ್ರತಿಯೊಬ್ಬರೂ ವಿನಾಃಕಾರಣ ಸುತ್ತಾಡದೆ ಮನೆಯಲ್ಲಿರುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಸಂಗಪ್ಪ ಕಟಗೇರಿ, ಮಲ್ಲಪ್ಪ ಶಂಭೋಜಿ, ದಾûಾಯಿಣಿ ಜಂಬಗಿ, ಪಪಂ ಸದಸ್ಯ ವಿಠಲ ಬಾಗೇವಾಡಿ, ಮುತ್ತು ಬೋರ್ಜಿ, ನಿಂಗಪ್ಪ ದಂಧರಗಿ, ಮಲ್ಲಯ್ಯ ಸುರಗಿಮಠ, ಕಿರಣ ಬಡಿಗೇರ ಇತರರು ಇದ್ದರು.