Advertisement

ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮ

01:09 PM Feb 11, 2017 | Team Udayavani |

ಕುಂದಗೋಳ: 9 ತಿಂಗಳಿಂದ 15 ವರ್ಷ ವಯಸ್ಸಿನೊಳಗಿರುವ ಎಲ್ಲರಿಗೂ ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ, ರಾಷ್ಟ್ರವನ್ನು ದಡಾರ ಮತ್ತು ರುಬೆಲ್ಲಾ ಮುಕ್ತವನ್ನಾಗಿಸಲು ಕುಟುಂಬಗಳು ಮುಂದೆ ಬರಬೇಕು ಎಂದು ತಹಶೀಲ್ದಾರ ಎಂ.ಎಸ್‌. ಬಣಸಿ ಕರೆ ನೀಡಿದರು. 

Advertisement

ಪಟ್ಟಣದ ಶಂಭುಲಿಂಗ ದೇವಸ್ಥಾನದಲ್ಲಿ ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಈ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಾಮಾರಿ ದಡಾರ ಹಾಗೂ ರುಬೆಲ್ಲಾ ರೋಗಗಳನ್ನು ಹೋಗಲಾಡಿಸಲು ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಿಸಬೇಕು ಎಂದರು. 

ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ ಅಧ್ಯಕ್ಷತೆ ವಹಿಸಿದ್ದರು. ಬಿಇಒ, ಸಿಡಿಪಿಒ, ಎಸ್‌ಡಿಎಂಸಿ ಸದಸ್ಯರು ಹಾಗೂ ವೈದ್ಯಾಧಿಕಾರಿಗಳು ಇದ್ದರು. ಒಟ್ಟು 295 ಲಸಿಕಾ ಸಿಬ್ಬಂಧಿದಿ ಭಾಗವಹಿಸಿದ್ದು, 44,058 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ರಾಮನಗೌಡ ದ್ಯಾವನಗೌಡ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next