Advertisement

ಕೆಜಿಎಫ್ ನಲ್ಲಿ ಅರ್ಥಪೂರ್ಣ ರಾಜ್ಯೋತ್ಸವ

02:13 PM Nov 02, 2019 | Suhan S |

ಕೆಜಿಎಫ್: ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಎಸ್‌ಪಿ ಎಂ.ಎಸ್‌.ಮೊಹಮ್ಮದ್‌ ಸುಜೀತ ಮಾತನಾಡಿ, ರಾಜ್ಯದಲ್ಲಿ ಕೆಜಿಎಫ್ಪೊ ಲೀಸ್‌ ಜಿಲ್ಲೆಯು ವಿಶೇಷ ಸ್ಥಾನವನ್ನು ಪಡೆದಿದೆ. ಕನ್ನಡ ನಾಡು-ಚಿನ್ನದ ಬೀಡು ಎಂಬ ಹೆಸರು ಬರಲು ಕಾರಣವಾದ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಪೊಲೀಸ್‌ ಇಲಾಖೆಯು ಉತ್ತಮ ಸೇವೆ ಸಲ್ಲಿಸುತ್ತಿದೆ.

Advertisement

ನಾಡು, ನುಡಿಯ ಅಭಿವೃ ದ್ಧಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲು ನಾಗರಿಕರಿಗೆ ಸಲಹೆ ನೀಡಿದರು. ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶ, ನಾಡಿನ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಜೊಡಿಸಿದ್ದಲ್ಲಿ ಮಾತ್ರ ನಾಡಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಡಿವೈಎಸ್ಪಿ ಬಿ.ಎಲ್‌.ಶ್ರೀನಿವಾಸ ಮೂರ್ತಿ, ಸಹಾಯಕ ಆಡಳಿತಾಧಿಕಾರಿ ಎಂ.ಮೂರ್ತಿ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಎಂ.ಸೂರ್ಯಪ್ರಕಾಶ್‌, ಮುಸ್ತಾಕ್‌ಪಾಷ, ಶಿವರಾಜ್‌ ಮುಧೋಳ್‌, ವೆಂಕಟರವಣಪ್ಪ, ಎನ್‌. ಉಮಾಶಂಕರ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್‌ ಕಚೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿ ಉಪಸ್ಥಿತರಿದ್ದರು.

ಆರ್‌ಪಿಐ ಟಿ.ಮಂಜುನಾಥ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಡಿಎಆರ್‌ ಪೊಲೀಸ್‌ ವಾದ್ಯ ವೃಂದದಿಂದ ನಾಡಗೀತೆ, ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗೌರವ ರಕ್ಷೆ, ಪಹರೆ ಪಡೆಯ ಗೌರವ ವಂದನೆಗಳನ್ನು ಕನ್ನಡ ಭಾಷೆಯಲ್ಲಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next