ರಾಮನಗರ: ಕೋವಿಡ್ ಕರ್ಫ್ಯೂ ವೇಳೆ ನಿರಾಶ್ರಿತರು, ದಿನಗೂಲಿ ಕಾರ್ಮಿಕರು, ಬಡವರಿಗೆಕಳೆದ30 ದಿನಗಳಿಂದ ನಿರಂತರವಾಗಿ ಮಧ್ಯಾಹದಊಟ ನೀಡುತ್ತಿರುವ ರೋಟರಿ ಸಿಲ್ಕ್ ಸಿಟಿ ಸದಸ್ಯರು ತಮಗೆ ನೆರವಾದ ದಾನಿಗಳನ್ನು ಮತ್ತು ತಾವುಕೈಗೊಂಡಿರುವಕಾರ್ಯಕ್ಕೆ ಸಾರ್ಥಕತೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎನ್.ರವಿಕುಮಾರ್ ಮಾತನಾಡಿ, ನಗರದಲ್ಲಿ ಮಗುವೊಂದು ಹಸಿವು ತಾಳಲಾರದೆಕುಡಿದು ಬೀಸಾಡಿದ ಎಳೆನೀರಿನಿಂದ ತಿರುಳು ಬಗೆದು ತಿನ್ನುತ್ತಿದ್ದ ಸುದ್ದಿಯನ್ನ ಓದಿ ಸಮಾಜದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮೇ 1ರಿಂದ ಮಧ್ಯಾಹ್ನದಊಟ ವಿತರಿಸುವುದನ್ನು ಆರಂಭಿಸಿದ್ದಾಗಿ ತಿಳಿಸಿದರು.
ಎ.ಬಿ.ಆರ್. ಹೋಟೆಲ್‌ನ ಸಿಬ್ಬಂದಿಯ ಸಹಾಯದಲ್ಲಿ ದಿನನಿತ್ಯಕನಿಷ್ಠ 600 ಮಂದಿಗೆಊಟ ಸಿದ್ದಪಡಿಸಲಾಗುತ್ತಿದೆ. ರೋಟರಿ ಸದಸ್ಯರೇ ಸ್ವಯಂಊಟವನ್ನು ಪ್ಯಾಕ್ ಮಾಡಿ ಎರಡು ವಾಹ®ಗ ಳಲ್ಲಿ ಜಿಲ್ಲಾಕೇಂದ್ರ ರಾಮನಗರಾದ್ಯಂತ ಸಂಚರಿಸಿ ಆಹಾರವನ್ನು ವಿತರಿಸಲಗುತ್ತಿದೆ. ಈ ಸೇವೆಯನ್ನುಕೆಲವು ಪೊಲೀಸರು, ಆಶಾಕಾರ್ಯಕರ್ತೆಯರು ಸಹ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ತಿಂಗಳು ಪೂರೈಸಿರುವಊಟ ವಿತರಣೆಯಕಾರ್ಯಕ್ಕೆ ನಗರದ ವಾಸವಿ ಟ್ರಸ್ಟ್3 ದಿನಗಳ ಕಾಲ ಸಹಕಾರ ನೀಡಿದೆ. ಹಾಗಯೆ ದಾನಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿದಾರೆ. ಜೂನ್1ರಂದು ಮಾಜಿ ಶಾಸಕಕೆ.ರಾಜು ನೆರವುಘೋಷಿಸಿದ್ದಾರೆ. ಹೆ ಸಿವು ನೀಗಿಸುವ ತಮ್ಮ ಈ ಕಾರ್ಯ ಇತರರಿಗೆ ಮಾದರಿಯಾದರೆಸಾರ್ಥಕ ಎಂದರು.
ಕೋವಿಡ್ ಸೋಂಕುಕಾರಣಮೃತಪಟ್ಟ ಕುಟುಂಬಗಳ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಉದ್ದೇಶದಲ್ಲಿ ರೋಟರಿ ಜಿಲ್ಲಾ3190ರಡಿಯಲ್ಲಿ ಬರುವ ರೋಟರಿ ಘಟಕಗ ಳು ಚಿಂತನೆ ನಡೆಸುತ್ತಿವೆ. ಅಂತಾರಾಷ್ಟ್ರೀಯ ರೋಟರಿ ಈ ನಿಟ್ಟಿನಲ್ಲಿ ನೆರವು ನೀಡಲು ಚಿಂತನೆ ನಡೆಸುತ್ತಿದೆ ಎಂದರು.
ಪ್ರಮುಖರಾದ ಶಿವರಾಜ್, ರಾಘವೇಂದ್ರ, ಪರಮೇಶ್, ಶ್ರೀನಿವಾಸ ಮೂರ್ತಿ, ದೀಪಕ್, ಧನ್‌ರಾಜ್, ಗುರುಮೂರ್ತಿ, ನರಿಸಿಂಹ, ಸುಪ್ರಿಯಾ ಕುಮಾರ್ ಇದ್ದರು.